ಕ್ರೀಡೆ

WPL 2025: ಸ್ಮೃತಿ ಅಬ್ಬರ, ಆರ್‌ಸಿಬಿಗೆ ಭರ್ಜರಿ ಜಯ: ಅಂಕ ಪಟ್ಟಿಯಲ್ಲಿ ಅಗ್ರಸ್ಥಾನ

ಭರವಸೆಯ ಆಟಗಾರ್ತಿ ಆರ್‌ಸಿಬಿ ನಾಯಕಿ ಸ್ಮೃತಿ ಮಂಧನಾ ಹಾಗೂ ಬೌಲರ್‌ಗಳ ಬಿಗುವಿನ ದಾಳಿಯ ನೆರವಿನಿಂದ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮಹಿಳಾ ಪ್ರೀಮಿಯರ್ ಲೀಗ್‌ನಲ್ಲಿ ಅಬ್ಬರಿಸಿದೆ. ಸೋಮವಾರ ನಡೆದ ಲೀಗ್‌ನ ನಾಲ್ಕನೇ ಪಂದ್ಯದಲ್ಲಿ ಆರ್‌ಸಿಬಿ 8 ವಿಕೆಟ್‌ಗಳಿಂದ ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನು ಮಣಿಸಿ, ಅಂಕ ಪಟ್ಟಿಯಲ್ಲಿ ಅಗ್ರ ಸ್ಥಾನವನ್ನು ತಲುಪಿದೆ.

ಮೂರನೇ ಆವೃತ್ತಿಯ ಆಡಿರುವ ಎರಡೂ ಪಂದ್ಯಗಳನ್ನು ಗೆದ್ದು ಆರ್‌ಸಿಬಿ ಆರ್ಭಟಿಸಿದೆ.ಸೋಮವಾರ ನಡೆದ ಪಂದ್ಯದಲ್ಲಿ ಟಾಸ್‌ ಸೋತರೂ ಮೊದಲು ಬ್ಯಾಟ್ ಮಾಡಿದ ಡೆಲ್ಲಿಇ ಕ್ಯಾಪಿಟಲ್ಸ್‌ 19.3 ಓವರ್‌ಗಳಲ್ಲಿ 141 ರನ್‌ಗಳಿಗೆ ಆಲೌಟ್‌ ಆಯಿತು. ಗುರಿಯನ್ನು ಬೆನ್ನಟ್ಟಿದ ಆರ್‌ಸಿಬಿ 16.2 ಓವರ್‌ಗಳಲ್ಲಿ 2 ವಿಕೆಟ್‌ ನಷ್ಟಕ್ಕೆ 146 ರನ್‌ ಸೇರಿಸಿ ಜಯ ಸಾಧಿಸಿತು. ಈ ಮೂಲಕ ಆರ್‌ಸಿಬಿ ಆಡಿದ ಎರಡೂ ಪಂದ್ಯಗಳನ್ನು ಗೆದ್ದು, 4 ಅಂಕಗಳೊಂದಿಗೆ ಅಂಕ ಪಟ್ಟಿಯಲ್ಲಿ ಅಗ್ರ ಸ್ಥಾನವನ್ನು ಪಡೆದಿದೆ.

ಭರ್ಜರಿ ಜೊತೆಯಾಟ

ಸ್ಪರ್ಧಾತ್ಮಕ ಮೊತ್ತವನ್ನು ಚೇಸ್ ಮಾಡಿದ ಆರ್‌ಸಿಬಿ ಅಮೋಘ ಆರಂಭ ಪಡೆಯಿತು. ಪವರ್‌ ಪ್ಲೇನಲ್ಲಿ ಪವರ್‌ ಫುಲ್‌ ಬ್ಯಾಟಿಂಗ್ ನಡೆಸಿದ ಆರ್‌ಸಿಬಿ ಬ್ಯಾಟರ್‌ಗಳು ಡೆಲ್ಲಿ ಬೌಲರ್‌ಗಳನ್ನು ಕಾಡಿದರು. ಆರ್‌ಸಿಬಿ ಪರ ಆರಂಭಿಕರಾದ ನಾಯಕಿ ಸ್ಮೃತಿ ಮಂಧನಾ ಹಾಗೂ ಡ್ಯಾನಿ ವೈಟ್‌ (42) ಜೋಡಿ ಆರ್ಭಟಿಸಿತು. ಡೆಲ್ಲಿ ಕ್ಯಾಪಿಟಲ್ಸ್‌ ಈ ಪಂದ್ಯದಲ್ಲಿ ಬಿಟ್ಟ ಕ್ಯಾಚ್‌ಗಳ ಸಂಪೂರ್ಣ ಲಾಭ ಪಡೆದ ಆರ್‌ಸಿಬಿ ಬ್ಯಾಟರ್ಸ್‌ ಅಬ್ಬರಿಸಿತು. ಈ ಜೋಡಿ ಐಪಿಎಲ್‌ನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಈ ಹಿಂದೆ ಯಾರು ಮಾಡದ ಸಾಧನೆಯನ್ನು ಮಾಡಿದರು. ಮೊದಲ ವಿಕೆಟ್‌ಗೆ ಈ ಜೋಡಿ 100 ರನ್‌ಗಳ ಜೊತೆಯಾಟವನ್ನು ನೀಡಿ ಆರ್ಭಟಿಸಿತು. ಮೊದಲ ವಿಕೆಟ್‌ಗೆ 107 ರನ್‌ ಕಾಣಿಕೆ ನೀಡಿದ ಆರ್‌ಸಿಬಿ ಆಟಗಾರ್ತಿಯರು ಆರ್ಭಟಿಸಿದರು.

ಸ್ಮೃತಿ ಆರ್ಭಟ

ಆರ್‌ಸಿಬಿ ತಂಡದ ನಾಯಕಿ ಸ್ಮೃತಿ ಮಂಧನಾ, ಲೀಗ್‌ನ ಎರಡನೇ ಪಂದ್ಯದಲ್ಲಿ ಅಮೋಘ ಬ್ಯಾಟಿಂಗ್ ನಡೆಸಿದರು. ಇವರು 47 ಎಸೆತಗಳಲ್ಲಿ 10 ಬೌಂಡರಿ, 3 ಸಿಕ್ಸರ್‌ ನೆರವಿನಿಂದ 81 ರನ್‌ ಸಿಡಿಸಿ ತಂಡಕ್ಕೆ ಆಧಾರವಾದರು.

ಆಲ್‌ರೌಂಡರ್‌ ಎಲ್ಲಿಸಾ ಪೆರ್ರಿ (ಅಜೇಯ 7), ರಿಚಾ ಘೋಷ್‌ (ಅಜೇಯ 11) ತಂಡದ ಗೆಲುವಿನಲ್ಲಿ ಮಿಂಚಿದರು.

ಜವಾಬ್ದಾರಿ ಮರೆತ ಸ್ಟಾರ್ಸ್‌

ಇದಕ್ಕೂ ಮೊದಲು ಬ್ಯಾಟ್ ಮಾಡಿದ ಡೆಲ್ಲಿ ಕ್ಯಾಪಿಟಲ್ಸ್ ತಂಡದ ಆರಂಭ ಕಳಪೆಯಾಗಿತ್ತು. ಭರವಸೆಯ ಆಟಗಾರ್ತಿ ಶೆಫಾಲಿ ವರ್ಮಾ ಸೊನ್ನೆ ಸುತ್ತಿದರು. 2ನೇ ವಿಕೆಟ್‌ಗೆ ಮೆಗ್ ಲ್ಯಾನಿಂಗ್ (17) ಹಾಗೂ ಜೆಮಿಮಾ ರೋಡಿಗ್ರಸ್‌ (34) ಅವರು 39 ಎಸೆತಗಳಲ್ಲಿ 59 ರನ್‌ಗಳ ಜೊತೆಯಾಟದ ಕಾಣಿಕೆ ನೀಡಿದರು. ಸಾರಾ ಬ್ರೈಸ್ (23), ಅನ್ನಾಬೆಲ್ ಸದರ್ಲ್ಯಾಂಡ್ (19), ಕೊಂಚ ಆರ್‌ಸಿಬಿ ಬೌಲರ್‌ಗಳನ್ನು ಕಾಡಿದರು.

ಆರ್‌ಸಿಬಿ ಪರ ರೇಣುಕಾ ಸಿಂಗ್ 4 ಓವರ್‌ ಬೌಲ್‌ ಮಾಡಿ 23 ರನ್‌ ನೀಡಿ 3 ವಿಕೆಟ್‌ ಕಬಳಿಸಿದರು. ಇವರ ಅಮೋಘ ಆಟದ ಪರಿಣಾಮ ಇವರಿಗೆ ಪಂದ್ಯ ಶ್ರೇಷ್ಠ ಪ್ರಶಸ್ತಿ ಸಂದಿದೆ.

ಪರ್ಪಲ್‌ ಕ್ಯಾಪ್‌: ರೇಣುಕಾ ಸಿಂಗ್‌, ಆರ್‌ಸಿಬಿ

ಆರೆಂಜ್‌ ಕ್ಯಾಪ್‌: ಆಶ್ಲೀ ಗಾರ್ಡ್ನರ್, ಗುಜಾರತ್ ಜೈಂಟ್ಸ್‌

ಮೋಹಮ್ಮದ್ ಶಫಿ ಸ್ಪೋರ್ಟ್ಸ್ ಬ್ಯೂರೋ tv8kannada ಬೆಂಗಳೂರು

Related Articles

Leave a Reply

Your email address will not be published. Required fields are marked *

Back to top button