ಮಹಿಳಾ ಪಿಡಿಒಗೆ ಚಪ್ಪಲಿಯಿಂದ ಹೊಡೆದ ಗ್ರಾಮ ಪಂಚಾಯಿತಿ ಸದಸ್ಯೆ

ಕೊಪ್ಪಳ : ಜಿಲ್ಲೆಯ ಯಲಬುರ್ಗಾ ತಾಲೂಕಿನ ಹಿರೇಮ್ಯಾಗೇರಿ ಗ್ರಾಮ ಪಂಚಾಯತಿಯ, ಪಂಚಾಯತಿ ಅಭಿವೃದ್ಧಿ ಅಧಿಕಾರಿಯ ಮೇಲೆ ಹಲ್ಲೇ ನಡೆದ ಘಟನೆ ಫೆ-27 ರಂದು ಗ್ರಾಮ ಪಂಚಾಯತಿ ಸಭಾಂಗಣದಲ್ಲೇ ನಡೆದಿದೆ.
ಪಂಚಾಯಿತಿಯ ಸಭಾಂಗಣದಲ್ಲಿ ಪಿಡಿಒ ನೇತೃತ್ವದಲ್ಲಿ ಪ್ರಧಾನಮಂತ್ರಿ ಆವಾಸ್ ಯೋಜನೆಗೆ ಸಂಬಂಧಿಸಿದಂತೆ ಮನೆಗಳ ಹಂಚಿಕೆಗಾಗಿ ಫಲಾನುಭವಿಗಳ ಕುರಿತು ಸದಸ್ಯರು ಮತ್ತು ಗ್ರಾಮಸ್ಥರು ಚರ್ಚಿಸುತ್ತಿದ್ದ ಸಂದರ್ಭದಲ್ಲಿ ಈ ಘಟನೆ ನಡೆದಿದೆ.
ಪಂಚಾಯಿತಿಯ ಸಭಾಂಗಣದಲ್ಲಿ ಪಿಡಿಒ ನೇತೃತ್ವದಲ್ಲಿ ಪ್ರಧಾನಮಂತ್ರಿ ಆವಾಸ್ ಯೋಜನೆಗೆ ಸಂಬಂಧಿಸಿದಂತೆ ಮನೆಗಳ ಹಂಚಿಕೆ ಮತ್ತು ಫಲಾನುಭವಿಗಳ ಆಯ್ಕೆ ಕುರಿತು ಸದಸ್ಯರು ಮತ್ತು ಗ್ರಾಮಸ್ಥರು ಚರ್ಚಿಸುತ್ತಿದ್ದ ಸಂದರ್ಭದಲ್ಲಿ ಈ ಘಟನೆ ನಡೆದಿದೆ.
ಸಭಾಂಗಣಕ್ಕೆ ಏಕಾಏಕಿ ಆಗಮಿಸಿದ ಅದೇ ಗ್ರಾಮ ಪಂಚಾಯತಿ ಸದಸ್ಯೆ ಶಾಂತಮ್ಮ ಬಸಪ್ಪ ಬಂಡಿವಡ್ಡರ ಕರ್ತವ್ಯ ನಿರತ ಪಿಡಿಒ ರತ್ನಮ್ಮ ಮೇಲೆ ಹಲ್ಲೇ ಮಾಡಿದ್ದಾರೆ, ಹಲ್ಲೇಯ ದೃಶ್ಯ ಸಿ.ಸಿ.ಟಿವಿ.ಯಲ್ಲಿ ಸೇರೆಯಾಗಿದೆ.
ದೂರು ದಾಖಲು:
ಸ್ಥಳೀಯರೊಬ್ಬರಿಗೆ ನಿವೇಶನದ ಉತಾರ ವನ್ನು ನೀಡದಂತೆ ಕಳೆದ ಒಂದು ವರ್ಷದಿಂದ ಸದಸ್ಯೆ ಶಾಂತಮ್ಮ ಹಾಗೂ ಪುತ್ರ ಭೀಮೇಶ ಪಿಡಿಒ ರತ್ನಮ್ಮಗೆ ತಾಕೀತು ಮಾಡಿದ್ದರು. ಆದರೆ ಪಿಡಿಒ ರತ್ನಮ್ಮ ಅವರು ನಿವೇಶನದ ಮೂಲ ಮಾಲೀಕರಿಗೆ ಕಾನೂನಾತ್ಮಕವಾಗಿ ಆಸ್ತಿಯ ಉತಾರ ನೀಡಿದ್ದರು. ಅದನ್ನು ಯಾಕೆ ನೀಡಿದ್ದೀರಿ ಎಂದು ಆಕ್ರೋಶಗೊಂಡು ನನ್ನ ಮೇಲೆ ಸದಸ್ಯೆ ಮತ್ತು ಪುತ್ರ ಭೀಮೇಶ ಬಸಪ್ಪ ಬಂಡಿವಡ್ಡರ ಹಲ್ಲೆ ನಡೆಸಿ ಕೈಯಿಂದ ಮತ್ತು ಚಪ್ಪಲಿಯಿಂದ ಹೊಡೆದು ಕುತ್ತಿಗೆ ಹಿಸುಕಿ ಕೊಲೆಗೆ ಯತ್ನಿಸಿದ್ದಾರೆ, ಮತ್ತು ಕರ್ತವ್ಯಕ್ಕೆ ಅಡ್ಡಿ ಪಡಿಸಿ ನಮ್ಮ ಸಿಬ್ಬಂದಿಗೂ ಸಹ ಹಲ್ಲೇ ನಡೆಸಿದ್ದಾರೆ ಎಂದು ಯಲಬುರ್ಗಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ…
ವರದಿ: ದೊಡ್ಡಬಸಪ್ಪ ಹಕಾರಿ tv8kannada ಕೊಪ್ಪಳ