ಇತ್ತೀಚಿನ ಸುದ್ದಿ

ಶ್ರೀ ಗುರು ಕೊಟ್ಟೂರೇಶ್ವರ ಸ್ವಾಮಿ ತೇರುಗಡ್ಡೆ ಶಡ್ಡಿನಿಂದ ತೇರುಗಾಲಿ ಭಕ್ತಿ ಭಾವದಿಂದ ಹೊರಗಡೆ ಹಾಕಿದರು,

ಕೊಟ್ಟೂರು: ಫೆಬ್ರವರಿ 22ಶನಿವಾರ ರಂದು ಮೂಲ ನಕ್ಷತ್ರದಲ್ಲಿ ಜರುಗುವ ಶ್ರೀಗುರು ಕೊಟ್ಟೂರೇಶ್ವರ ಸ್ವಾಮಿ ರಥೋತ್ಸವನ್ನು ನೋಡಲು ಎರಡು ಕಣ್ಣು ಸಾಲದು. ಇಂತಹ ಕಲಿಯುಗದಲ್ಲಿ ವಿಜ್ಞಾನಕ್ಕೆ ಒಂದು ಸಾವಲು ಹಾಗಿದೆ. ರಥವನ್ನು ಯಾರು ಎಳೆಯದೇ ತನ್ನಷ್ಟಕ್ಕೆ ತಾನೇ ಚಲಿಸುವ ಶುಭ ಅಮೃತ ಘಳಿಗೆಯಲ್ಲಿ ರಥವು ಸಾಗುವುದನ್ನು ನೋಡುವುದು ಭಕ್ತಿ ಪರವಶವಾಗುತ್ತದೆ ಕೊಟ್ಟೂರು.

ರಥೋತ್ಸವ ಮುನ್ನ ದಿನವಾದ ಸೋಮವಾರ ಮಧ್ಯಾಹ್ನ ಶ್ರೀ ಗುರು ಕೊಟ್ಟೂರೇಶ್ವರ ದೇವಾಲಯದಲ್ಲಿ ಪ್ರತಿ ವರ್ಷ ಧಾರ್ಮಿಕ ಕೈಂಕರ್ಯಗಳೂಂದಿಗೆ ಕೊಟ್ಟೂರು ದೇವರು ಆರ್ ಎಂ ಪ್ರಾಕಾಶ್ ದೇವರು ಸಂಘೋಪಂವಾಗಿ ಪೂಜೆ ಸಲ್ಲಿಸಿದರು. ಸಕಲ ವಾಧ್ಯಗಳೊಂದಿಗೆ ತೇರುಗಡ್ಡೆ ಶಡ್ಡಿನಲ್ಲಿ ಪೂಜೆ ನಡೆಯುತು. ಕೊಟ್ಟೂರು ದೇವರು ತೇರನ್ನು ಏರಿದರು ಪ್ರಾಧನ ಧರ್ಮಕರ್ತ ಶೇಕರಯ್ಯ ಚಾಮರ ಬೀಸಿ 6 ತೇರುಗಾಲಿ ಚಾಲನೆ ನೀಡಿದರು ಆರಚಕರು ಸಹಕರಿಸಿದರು.ಸೋಮವಾರ ಗೂದೋಳಿ ಲಗ್ನದಲ್ಲಿ ಆರಂಭ ಗೂಂಡು ಸರ್ಕಾರಿ ಬಸ್ಸು ನಿಲ್ದಾಣ ಎದುರು ತೇರು ನಿರ್ಮಾಣದ ಸ್ಥಳಕ್ಕೆ ಇಳಿ ಸಂಜೆ ತಲುಪಿತು. ರಾತ್ರಿ ಗುಗ್ಗರಿ ಕಾರ್ಯಕ್ರಮ ಜರುಗಲಿದೆ .ಮಕ್ಕಳು ಆಗದವರು ತೋಟಲನ್ನು ರಥಕ್ಕೆ ಸಮರ್ಪಿಸಿದರು. ಆಯಾಗರರು ಕಂಕಣ ಬದ್ಧವಾಗಿ ರಥ ನಿರ್ಮಾಣ ಮಾಡುವ ಜವಾಬ್ದಾರಿ ಎಂದು ಧರ್ಮ ಕರ್ತ ಶೇಖರಯ್ಯ ಹೇಳಿದರು.ಕೊಟ್ಟೂರು ದೇವರು ಸಾನ್ನಿಧ್ಯ ವಹಿಸಿ ಪಾಲ್ಗೊಂಡಿದ್ದರು.

ಅಸಂಖ್ಯಾತ ಭಕ್ತರು ಜಯ ಘೋಷಣೆ ಕೂಗಿದರು.ಪೊಲೀಸ್ ಇಲಾಖೆ ಸೂಕ್ತ ಬಂದಬಸ್ತು ನೀಡಿದ್ದರು. ಆಯಗಾರರು, ಕಟ್ಟಿ ಮನೆ ದೈವದವರು, ದೇವಾಲಯದ ಸಿಬ್ಬಂದಿ ಭಕ್ತರು ಪಾಲ್ಗೊಂಡಿದ್ದರು.

ವರದಿ : C ಕೊಟ್ರೇಶ್ tv8kannada ಬಳ್ಳಾರಿ

Related Articles

Leave a Reply

Your email address will not be published. Required fields are marked *

Back to top button