ಸಿನಿಮಾ

UI ಬಾಕ್ಸ್ ಆಫೀಸ್ ಕಲೆಕ್ಷನ್ ಡೇ 1 : ‘ಬುದ್ಧಿವಂತ’ನ ಚಿತ್ರ ಮೊದಲ ದಿನ ಗಳಿಸಿದ್ದು ಎಷ್ಟು ಗೊತ್ತಾ?

ಕನ್ನಡ ಭಾಷೆಯ ಡಿಸ್ಟೋಪಿಯನ್ ( ಕಲ್ಪನೆಯ ಸಮಾಜ) ವೈಜ್ಞಾನಿಕ ಆಕ್ಷನ್ ಚಿತ್ರ UI ಡಿಸೆಂಬರ್ 20, 2024 ರಂದು ಬಿಡುಗಡೆ ಆಗಿದೆ. ಅಲ್ಲದೆ ರಾಜ್ಯ ಮಾತ್ರವಲ್ಲದೆ ದೇಶಾದ್ಯಂತ ಈ ಸಿನಿಮಾ ಹೆಚ್ಚು ಸೌಂಡ್‌ ಮಾಡುತ್ತಿದೆ. ಶುಕ್ರವಾರ ಬಿಡುಗಡೆಯಾದ ಇತರ ಚಲನಚಿತ್ರಗಳಿಂದ ಕಠಿಣ ಸ್ಪರ್ಧೆಯನ್ನು ಎದುರಿಸುತ್ತಿದ್ದರೂ ಸಹ ಉತ್ತಮ ಗಳಿಗೆ ಮಾಡಿದೆ.

ಹೌದು, ಉಪೇಂದ್ರ (Upendra) ಅಭಿನಯದ ಈ ವಿಶೇಷ ಸಿನಿಮಾ ಕಳೆದ ಎರಡೂ ವರ್ಷಗಳಿಂದಲೂ ಸಹ ಜನರಲ್ಲಿ ಭಾರೀ ಕುತೂಹಲ ಉಂಟು ಮಾಡಿತ್ತು. ಅಷ್ಟೇ ಅಲ್ಲದೆ ಉಪ್ಪಿ ಆಗಾಗ್ಗೆ ಈ ಸಿನಿಮಾನದ ಬಗ್ಗೆ ಉಳ ಬಿಡುತ್ತಲೇ ಇದ್ದರೂ, ಅದರಲ್ಲೂ ” ಟ್ರೋಲ್‌ ಆಗುತ್ತೆ” ಸಾಂಗ್‌ ಮಾತ್ರ ಸಾಮಾಜಿಕ ಜಾಲತಾಣದಲ್ಲಿ ಧೂಳೆಬ್ಬಿಸಿತ್ತು. ಇದನ್ನು ನೋಡಿದ್ದ ವಿಕ್ಷಕರು ಉಪ್ಪಿ ಏನನ್ನು ಹೇಳಲು ಹೊರಟಿದ್ದಾರೆ ಎಂದು ಕುತೂಹಲದಲ್ಲೇ ಇದ್ದರು.ಆದರೆ ಈ ಕುತೂಹಲ ನಿನ್ನೆಗೆ ಕೊನೆಯಾಗಿದೆ.ಇದೀಗ ಚಿತ್ರಮಂದಿರಳಿಗೆ ಸಾಕಷ್ಟು ಪ್ರೇಕ್ಷಕರು ಚಿತ್ರ ವೀಕ್ಷಣೆಗೆ ಬರುತ್ತಿದ್ದು, ಇದರಲ್ಲಿ ಹಲವರು ಈ ಸಿನಿಮಾ ಬುದ್ದಿವಂತರಿಗೆ ಮಾತ್ರ ಎಂದು ಹೇಳಿದರೆ ಇನ್ನೂ ಕೆಲವರು ಈ ಸಿನಿಮಾ ಅರ್ಥ ಮಾಡಿಕೊಳ್ಳಬೇಕು ಎಂದರೆ ಇನ್ನೂ ಎರಡು ಮೂರು ಬಾರಿ ನೋಡಬೇಕು ಎಂದು ರಿವ್ಯೂವ್‌ ನೀಡುತ್ತಿದ್ದಾರೆ. ಇಷ್ಟೆಲ್ಲಾ ಬೆಳವಣಿಗೆ ನಡುವೆ ಮೊದಲ ದಿನ ಈ ಸಿನಿಮಾ ಗಳಿಸಿದ್ದು ಎಷ್ಟು ಅನ್ನೋ ಕಾತುರ ಸಹ ಜನರಿಗೆ ಇದೆ.

UI ಚಿತ್ರ ಮೊದಲ ದಿನ ಗಳಿಸಿದ್ದಿಷ್ಟು

ಈ ಚಿತ್ರದಲ್ಲಿ ಉಪೇಂದ್ರ ರಾವ್, ರೀಷ್ಮಾ ನಾನಯ್ಯ ಮತ್ತು ಸನ್ನಿ ಲಿಯೋನ್ ನಟಿಸಿದ್ದಾರೆ. ಚಿತ್ರ ಬಾಕ್ಸ್ ಆಫೀಸ್‌ನಲ್ಲಿ (Box Office Collection) ಉತ್ತಮ ಪ್ರದರ್ಶನ ನೀಡುವುದೇ ಎಂಬುದು ದೊಡ್ಡ ಪ್ರಶ್ನೆಯಾಗಿದ್ದು, ಆರಂಭದ ದಿನದ ಗಳಿಗೆ ಗಮನಿಸಿದ್ರೆ ಉತ್ತಮ ಎನ್ನಬಹುದು. ಯಾಕೆಂದರೆ Sacnilk ನ ಆರಂಭಿಕ ವರದಿಗಳ ಪ್ರಕಾರ, UI 1 ನೇ ದಿನದಂದು ಸಂಜೆ 4 ಗಂಟೆಗೆ 2.84 ಕೋಟಿ ರೂ. ಗಳಿಕೆ ಮಾಡಿತ್ತು. ಅಂದರಂತೆ ದಿನದ ಅಂತ್ಯಕ್ಕೆ ಈ ಸಿನಿಮಾ ಮೊದಲ ದಿನ ಬಾಕ್ಸ್ ಆಫೀಸ್ನಲ್ಲಿ 6.75 ಕೋಟಿ ರೂಪಾಯಿ ಹಣ ಗಳಿಸಿದೆ ಎಂದು ತಿಳಿದುಬಂದಿದೆ.

ಈ ನಡುವೆ ತೆಲುಗು, ತಮಿಳು ಮತ್ತು ಹಿಂದಿಯಲ್ಲಿ ಮೊದಲ ದಿನ ಉತ್ತಮ ಪ್ರದರ್ಶನ ಕಂಡಿಲ್ಲ ಎನ್ನಲಾಗಿದೆ. ತೆಲುಗಿನಲ್ಲಿ 70 ಲಕ್ಷ ಹಣ ಗಳಿಕೆ ಆಗಿದ್ದರೆ, ತಮಿಳಿನಲ್ಲಿ ನಾಲ್ಕು ಲಕ್ಷ ರೂಪಾಯಿ ಹಾಗೂ ಹಿಂದಿಯಲ್ಲಿ ಒಂದು ಲಕ್ಷ ರೂಪಾಯಿ ಗಳಿಕೆ ಆಗಿದೆ ಎಂದು ಮಾಹಿತಿ ಇದೆ. ಇನ್ನು ಇಂದು ಹಾಗೂ ನಾಳೆ ರಜಾ ದಿನ ಆಗಿರುವುದರಿಂದ ಅಲ್ಲದೆ ವೀಕೆಂಡ್‌ ಆಗಿರುವುದರಿಂದ ಇಂದು ಇನ್ನಷ್ಟು ಜನರು ಚಿತ್ರಮಂದಿರಗಳ ಕಡೆ ಮುಖ ಮಾಡುತ್ತಾರೆ. ಈ ಮೂಲಕ ಹೆಚ್ಚಿನ ಹಣ ಗಳಿಕೆ ಮಾಡಲಿದೆ ಅನ್ನೋ ಮಾಹಿತಿ ಇದೆ.

UI ಚಿತ್ರದ ಬಜೆಟ್

UI ಅನ್ನು ಸುಮಾರು 100 ಕೋಟಿ ಯ ಬಜೆಟ್‌ನಲ್ಲಿ ನಿರ್ಮಾಣ ಮಾಡಲಾಗಿದೆ. ಡಿಸೆಂಬರ್ 19,2024 ರಂದು ಚಲನಚಿತ್ರವು ಯು/ಎ ಪ್ರಮಾಣೀಕರಣವನ್ನು ಪಡೆದುಕೊಂಡಿದೆ. ಚಿತ್ರದ ಪ್ರಾರಂಭದಲ್ಲಿ ಉಪೇಂದ್ರ ಅವರ ಹಾಸ್ಯದ ಸಂದೇಶ ಗಮನ ಸೆಳೆಯುತ್ತದೆ. ಮೂಲ ಭಾಷೆ ಕನ್ನಡದ ಜೊತೆಗೆ, UI ಅನ್ನು ತೆಲುಗು, ತಮಿಳು, ಹಿಂದಿ ಮತ್ತು ಮಲಯಾಳಂನಲ್ಲಿಯೂ ಬಿಡುಗಡೆ ಮಡಲಾಗಿದೆ. ಈ ಸಿನಿಮಾವನ್ನು ಉಪೇಂದ್ರ ನಿರ್ದೇಶಿಸಿದ್ದಾರೆ. ಲಹರಿ ಫಿಲಂಸ್ ಮತ್ತು ವೀನಸ್ ಎಂಟರ್‌ಟೈನರ್ಸ್ ಬ್ಯಾನರ್‌ನಡಿಯಲ್ಲಿ ಜಿ ಮನೋಹರನ್ ಮತ್ತು ಶ್ರೀಕಾಂತ್ ಕೆ ಪಿ ಈ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ.

ವರದಿ ಮತ್ತು ಸಂಗ್ರಹ: ಪುಣ್ಯ ಗೌಡ ಫಿಲಂ ಬ್ಯೂರೋ tv8newskannada ಬೆಂಗಳೂರು

Related Articles

Leave a Reply

Your email address will not be published. Required fields are marked *

Back to top button