ಇತ್ತೀಚಿನ ಸುದ್ದಿ

‘ಕಾಂಗ್ರೆಸ್ ಸರ್ಕಾರ ಜನಪರ ಕೆಲಸ ಮಾಡುತ್ತಿದೆ’

ಯಲಬುರ್ಗಾ: ರಾಜ್ಯದಲ್ಲಿ‌ಒಂದುವರೆ ವರ್ಷಗಳ ಸಮಯದಲ್ಲಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೇಸ್ ಸರಕಾರ ಜನಪರ ಕೆಲಸಗಳನ್ನು ಮಾಡುತ್ತಿದೆ ಎಂದು ಸಿಎಂ ಆರ್ಥಿಕ ಸಲಹೆಗಾರ,ಶಾಸಕ ಬಸವರಾಜ ರಾಯರಡ್ಡಿ ಹೇಳಿದರು

ಪಟ್ಟಣದ ಬ್ಲಾಕ್ ಕಾಂಗ್ರೇಸ್ ಕಚೇರಿಯಲ್ಲಿ ರವಿವಾರ ಕಾಂಗ್ರೇಸ್ ಘಟಕದ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭದಲ್ಲಿ ಅವರು ಮಾತನಾಡಿದರು. ದೇಶದಲ್ಲಿ ಮೋದಿ ಅಲೆ ಮಾಯವಾಗಿದೆ, ಬಿಜೆಪಿ ಕೋಮುವಾದವನ್ನು ಸೃಷ್ಠಿ ಮಾಡುತ್ತಿದೆ. ಧರ್ಮದ ಆಧಾರದಲ್ಲಿ‌ ಬಿಜೆಪಿ ರಾಜಕಾರಣ ಮಾಡುತ್ತಿದೆ. ಅಭಿವೃದ್ದಿಯೆ ಮಾನದಂಡವಾಗಿದೆ, ಜನ ಎಲ್ಲವನ್ನು ವಿಚಾರ ಮಾಡುತ್ತಾರೆ, ಜನಪರ ಕೆಲಸ ಮಾಡಿದಾಗ ರಾಜಕೀಯ ಕ್ಷೇತ್ರದಲ್ಲಿ ಉತ್ತಮ‌ ಭವಿಷ್ಯ ಸಿಗಲು ಸಾಧ್ಯ, ಹಿಂದು ದೇವಸ್ಥಾನ ಆಸ್ತಿಗಳನ್ನು ಯಾರು ತೆಗೆದುಕೊಳ್ಳಲು ಸಾಧ್ಯವಿಲ್ಲ, ಹಿಗಾಗೀ ವಕ್ಪ ಆಸ್ತಿಯನ್ನು ಯಾರು ತೆಗೆದುಕೊಳ್ಳಲು ಬರುವುದಿಲ್ಲ, ಸುಪ್ರೀಂ ಕೋರ್ಟ ಆದೇಶದ ಹಿನ್ನಲೆಯಲ್ಲಿ ವಕ್ಪ ಆಸ್ತಿ ತೆರೆವುಗೊಳಿಸಲಾಗುತ್ತಿದೆ ಇದರಲ್ಲಿ ಕಾಂಗ್ರೇಸ್,ಸಿದ್ದರಾಮಯ್ಯ ಪಾತ್ರ ಏನು‌ ಇಲ್ಲ ಈ‌ ವಿಷಯದಲ್ಲಿ ಬಿಜೆಪಿ ವಿನಾಕಾರಣ ಅಪಪ್ರಚಾರ ಮಾಡುತ್ತಿದೆ ಎಂದರು.
ರಾಜ್ಯದಲ್ಲಿ‌ ಹಣಕಾಸು ಪರಸ್ಥಿತಿ ಉತ್ತಮವಾಗಿದ್ದು ಯಾವುದೇ ಕಾರಣಕ್ಕೂ ಗ್ಯಾರೆಂಟಿ‌ ನಿಲ್ಲಿಸುವುದಿಲ್ಲ, ಮುಂದಿನ ವರ್ಷ 4 ಲಕ್ಷ ಕೋಟಿ ಗಾತ್ರದಷ್ಟು ಆಗಲಿದೆ, ತೆರಿಗೆ ಕಟ್ಟುವಲ್ಲಿ ರಾಜ್ಯದಲ್ಲಿ ಎರಡನೇ ಸ್ಥಾನದಲ್ಲಿದೆ, ಕ್ಷೇತ್ರದಲ್ಲಿ ಸಾಕಷ್ಟು ಅಭಿವೃದ್ದಿ ಕೆಲಸಗಳಾಗುತ್ತಿವೆ, ಕ್ಷೇತ್ರದ 970 ಕೋಟಿ ರೂ ಮೊತ್ತದ ಕೆರೆಗಳ ನಿರ್ಮಾಣ, ಕೆರೆ ತುಂಬಿಸುವ ಯೋಜನೆಗೆ ಬೆಳಗಾವಿ ಅಧಿವೇಶನದಲ್ಲಿ ಕ್ಯಾಬಿನೆಟ್ ನಲ್ಲಿ ಮಂಜೂರಾತಿ ಸಿಗಲಿದೆ, ಸುವರ್ಣಯುಗ ಪುಸ್ತಕ ಓದಿ ಅಭಿವೃದ್ದಿ ದೃಷ್ಟಿಯಿಂದ ಸಲಹೆ, ಸೂಚನೆ ನೀಡಬೇಕು ಎಂದರು. ಅಭಿವೃದ್ದಿಗಾಗಿ ಸಹಕಾರ,ಬೆಂಬಲ ಸದಾ ನೀಡಬೇಕು,

ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷ ಬಸವರಾಜ ಉಳ್ಳಾಗಡ್ಡಿ‌ ಮಾತನಾಡಿ ನನಗೆ ಪಕ್ಷದ ಅಧ್ಯಕ್ಷನಾಗಿ ಎಂಟು ವರ್ಷಗಳ ಕಾಲ ನಿಷ್ಠೆಯಿಂದ ಸಮರ್ಥವಾಗಿ ಹುದ್ದೆ ನಿಭಾಯಿಸಿರುವೆ, ಮುಂಬರುವ ಜಿಪಂ,ತಾಪಂ ಚುನಾವಣಾ ಹಿತದೃಷ್ಠಯಿಂದ ಕಾಂಗ್ರೇಸ್ ಪಕ್ಷದ ತಾಲೂಕು ಘಟಕ ಪುನರ್ ರಚನೆ ಮಾಡಲಾಗಿದೆ, ನೂತನ ಪದಾದಿಕಾರಿಗಳು ಪಕ್ಷ ಸಂಘಟನೆಗೆ ಒತ್ತು ನೀಡುವಂತೆ ಕರೆ ನೀಡಿದರು.
ಪೆಬ್ರುವರಿ,ಮಾರ್ಚ ತಿಂಗಳಲ್ಲಿ ಜಿಪಂ,ತಾಪಂ‌ಚುನಾವಣೆ ನಡೆಯಲಿವೆ, ಕೋರ್ಟಿಗೆ ಅಫಡವಿಟ್ ನೀಡಿದ್ದೇವೆ, ಬಜೆಟ್ ನಂತರ ಚುನಾವಣೆ ನಡೆಯಲಿದೆ, ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಕುಟುಂಬ ಸದಸ್ಯರನ್ನು ನಿಲ್ಲಿಸುವುದಿಲ್ಲ,‌ ಇನ್ನು‌ಹತ್ತು ವರ್ಷ ಸಕ್ರೀಯ ರಾಜಕಾರಣದಲ್ಲಿರುವೆ ಎಂದರು.

ಮಾಜಿ ಶಾಸಕ‌ ಶಿವಶರಣಪ್ಪಗೌಡ ಪಾಟೀಲ ವಿನಾಕರಣ ಮಾತನಾಡುತ್ತಾರೆ, ಇಂತಹವರನ್ನು ನಿರ್ಲಕ್ಷ್ಯ ಮಾಡುತ್ತೇನೆ ಎಂದರು.

ಕಾಂಗ್ರೇಸ್ ಪ್ರಚಾರ ಸಮಿತಿ ಜಿಲ್ಲಾ ಅಧ್ಯಕ್ಷ ಯಂಕಣ್ಣ ಯರಾಶಿ ಮಾತನಾಡಿ ಪಕ್ಷ ಬಲರ್ವದನೆಗೊಳಿಸುವ ನಿಟ್ಟಿನಲ್ಲಿ ಯುವಕರಿಗೆ ಹೆಚ್ಚಿನ‌ ಮನ್ನಣೆ ನೀಡಲಾಗಿದೆ. ಜಿಪಂ,ತಾಪಂನಲ್ಲಿ‌ ಹೆಚ್ಚು ಸ್ಥಾನಗಳನ್ನು ಗೆಲ್ಲಲು ಪಣ ತೊಡಬೇಕು, ಕಾಂಗ್ರೇಸ್ ಪಕ್ಷ ಕಾರ್ಯಕರ್ತರ ಪಕ್ಷವಾಗಿದೆ, ಪಕ್ಷ ನಿಷ್ಠೆಯಿಂದ ಇರುವ ಪ್ರಾಮಾಣಿಕ‌ ಕಾರ್ಯಕರ್ತರಿಗೆ ಸೂಕ್ತಸ್ಥಾನ ಮಾನ ಕೊಟ್ಟು ಗೌರವಿಸಲಾಗುತ್ತದೆ, ಕಾಂಗ್ರೇಸ್ ಪಕ್ಷ ಗ್ಯಾರೆಂಟಿ ಯೋಜನೆ ಕೊಟ್ಟಿದೆ, ಶಾಸಕ ರಾಯರಡ್ಡಿಯವರು ಕ್ಷೇತ್ರದ ಅಭಿವೃದ್ದಿಗೆ ಕೊಟ್ಟ ಕೊಡುಗೆಗಳನ್ನು ಜನತೆಗೆ ತಿಳಿಸಬೇಕು ಎಂದರು.

ಮಹಿಳಾ ಕಾಂಗ್ರೇಸ್ ಅಧ್ಯಕ್ಷೆ ಸಾವಿತ್ರಿ ಗೊಲ್ಲರ ಮಾತನಾಡಿದರು.

ಈ ಸಂದರ್ಭದಲ್ಲಿ ಕುಕನೂರು ಬ್ಲಾಕ ಅಧ್ಯಕ್ಷ ಹನುಮಂತಗೌಡ ಚೆಂಡೂರು,ರಾಘವೇಂದ್ರಚಾರ್ಯ ಜೋಶಿ, ಅಡಿವೆಪ್ಪ ಭಾವಿಮನಿ, ಸತ್ಯನಾರಯಣ ಹರಪ್ಪನಹಳ್ಳಿ,ಬಿ.ಎಂ.ಶಿರೂರು, ಮಹೇಶ ಹಳ್ಳಿ, ಕೆರಿಬಸಪ್ಪ ನಿಡಗುಂದಿ, ರಾಮಣ್ಣ ಸಾಲಭಾವಿ, ಅಶೋಕ ತೋಟದ, ರಸೂಲಸಾಬ ದಮ್ಮೂರು,ಅಂದಾನಗೌಡ ಪೋಲಿಸಪಾಟೀಲ, ಸಾವಿತ್ರಿ ಗೊಲ್ಲರ, ಪರೀದಾಬೇಗಂ, ಶರಣಮ್ಮ ಪೂಜಾರ, ಎಂ.ಎಫ.ನಧಾಪ, ಶರಣಪ್ಪ ಗಾಂಜಿ, ಡಾ.ಶಿವನಗೌಡ ದಾನರಡ್ಡಿ,ಸುಧೀರ ಕೊರ್ಲಳ್ಳಿ, ಹಂಪಯ್ಯಸ್ವಾಮಿ ಹಿರೇಮಠ ಚಿಕ್ಕಮ್ಯಾಗೇರಿ, ಅರವಿಂದ ಮುಂದಲಮನಿ, ಇತರರು ಇದ್ದರು

ವರದಿ: ದೊಡ್ಡಬಸಪ್ಪ ಹಕಾರಿ tv8newskannada ಯಲಬುರ್ಗಾ

Related Articles

Leave a Reply

Your email address will not be published. Required fields are marked *

Back to top button