ಸಂವಿಧಾನದಲ್ಲಿ ಭಾರತಿಯವಾದದ್ದು ಏನೂ ಇಲ್ಲ ಎಂಬ ಸಾವರ್ಕರ್ ನಿಲುವಿಗೆ ಬಿಜೆಪಿ ಬದ್ಧವಾಗಿದೆಯೇ?: ಸಂಸತ್ತಿನಲ್ಲಿ ರಾಹುಲ್ ಗಾಂಧಿ ವಾಗ್ದಾಳಿ.

ಹೊಸದಿಲ್ಲಿ : ನಮ್ಮ ಸಂವಿಧಾನದಲ್ಲಿ ಭಾರತೀಯ ವಾದದ್ದು ಏನೂ ಇಲ್ಲವೆಂದು ಹಿಂದುತ್ವವಾದಿ ವಿನಾಯಕ್ ದಾಮೋದರ್ ಸಾವರ್ಕರ್ ಅಭಿಪ್ರಾಯ ಪಟ್ಟಿದ್ದರು ಎಂಬುದನ್ನು ಉಲ್ಲೇಖಿ ಸಿ ಆಡಳಿತಾರೂಢ ಬಿಜೆಪಿಯ ವಿರುದ್ಧ ಲೋಕ ಸಭಾ ವಿಪಕ್ಷ ನಾಯಕ ರಾಹುಲ್ ಗಾಂಧಿ ವಾಗ್ದಾಳಿ ನಡೆಸಿದರು.
ಲೋಕಸಭೆಯಲ್ಲಿ ನಡೆದ ಸಂವಿಧಾನದ ಮೇಲಿನ ಚರ್ಚೆಯಲ್ಲಿ ಪಾ ಲ್ಗೊಂಡು ಮಾತನಾಡಿದ ರಾಹುಲ್ ಗಾಂಧಿ, ಸಂವಿಧಾನದ ಜಾಗದಲ್ಲಿ ಮನುಸ್ಮೃತಿಯನ್ನು ಜಾರಿ ಗೆ ತರಬೇಕು ಎಂದು ಸಾವರ್ಕರ್ ಆಗ್ರಹಿಸಿದ್ದರು ಎಂದು ಆರೋಪಿಸಿದರು.“ನಮ್ಮ ಸಂವಿಧಾನದಲ್ಲಿ ಭಾರತೀಯವಾದದ್ದು ಏನೂ ಇಲ್ಲ ಎಂದು ವಿ.ಡಿ.ಸಾವರ್ಕರ್ ತಮ್ಮ ಬರಹಗಳಲ್ಲಿ ಸ್ಪಷ್ಟವಾಗಿ ಪ್ರತಿಪಾದಿಸಿದ್ದಾರೆ.ಸಂವಿಧಾನವನ್ನು ನೀವು ರಕ್ಷಿಸುವ ಮಾತನಾಡುವಾ ಗ ಸಾವರ್ಕರ್ರನ್ನು ವಿಡಂಬಿಸುತ್ತಿದ್ದೀರಿ, ಅವರ ನ್ನು ನಿಂದಿಸುತ್ತಿದ್ದೀರಿ ಹಾಗೂ ನೀವು ಅವರಿಗೆ ಅವಮಾನ ಮಾಡುತ್ತಿದ್ದೀರಿ” ಎಂದು ರಾಹುಲ್ ಗಾಂಧಿ ವ್ಯಂಗ್ಯವಾಡಿದರು.
ಬಿಜೆಪಿಯನ್ನು ಮಹಾಭಾರತದ ದ್ರೋಣಾಚಾ ರ್ಯರಿಗೆ ಹೋಲಿಸಿದ ರಾಹುಲ್ ಗಾಂಧಿ, ದ್ರೋ ಣಾಚಾರ್ಯರು ಏಕಲವ್ಯನ ಹೆಬ್ಬೆರಳು ಕತ್ತ ರಿಸಿ ದಂತೆ, ಬಿಜೆಪಿ ದೇಶದ ಯುವಜನರ ಆಕಾಂ ಕ್ಷೆಗಳನ್ನು ಮುರಿದು ಹಾಕುತ್ತಿದೆ ಎಂದೂ ಅವರು ಆರೋಪಿಸಿದರು. “ಸರಕಾರಿ ಉದ್ಯೋಗಗಳಿಗೆ ಲ್ಯಾಟರಲ್ ಪ್ರವೇಶ ನೀತಿಯನ್ನು ಜಾರಿ ಗೊಳಿಸುವ ಮೂಲಕ, ನೀವು ಯುವಕರು, ಹಿಂ ದುಳಿದವರು ಹಾಗೂ ಬಡವರ ಹೆಬ್ಬೆರಳನ್ನು ಕತ್ತ ರಿಸಿ ಹಾಕುತ್ತಿದ್ದೀರಿ” ಎಂದು ಅವರು ಬಿಜೆಪಿಯ ವಿರುದ್ಧ ವಾಗ್ದಾಳಿ ನಡೆಸಿದರು
