ಇತ್ತೀಚಿನ ಸುದ್ದಿ

ಏಸುಕ್ರಿಸ್ತರು ಮಾನವ ಕುಲಕ್ಕಮಾದರಿಯಾಗಿದ್ದಾರೆ: ಕೆ.ಎಚ್.ಮುನಿಯಪ್ಪ

ದೇವನಹಳ್ಳಿ : ತಾಲೂಕು ಪಾಸ್ಟಾರ್ಸ್ ಫೆಲೋಷಿಪ್ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಕ್ರಿಸ್‌ಮಸ್ ಮಹೋತ್ಸವ ದೇವನಹಳ್ಳಿ : ಏಸುಕ್ರಿಸ್ತರು ಹುಟ್ಟಿ ಮಾನವಕುಲಕ್ಕೆ ಮಾದರಿಯಾಗಿ ಶಾಂತಿ, ಪ್ರೀತಿ ವಾತ್ಸಲ್ಯ, ಬಾತೃತ್ವವನ್ನು ಹೇಳಿಕೊಟ್ಟಿದ್ದಾರೆ. ಸಮಾಜದಲ್ಲಿ ಮಾನವ ಕುಲವನ್ನು ಪ್ರೀತಿವಾತ್ಸಲ್ಯದಿಂದ ನೋಡಿ ಸನ್ಮಾರ್ಗವನ್ನು ತೋರಿಸಿದ್ದಾರೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಚ್.ಮುನಿಯಪ್ಪ ತಿಳಿಸಿದರು.

ದೇವನಹಳ್ಳಿ ಪಟ್ಟಣದ ಅಂಬೇಡ್ಕರ್ ಭವನದಲ್ಲಿ ದೇವನಹಳ್ಳಿ ತಾಲೂಕು ಪಾಸ್ಟಾರ್ಸ್ ಫೆಲೋಷಿಪ್ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಕ್ರಿಸ್‌ಮಸ್ ಮಹೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು. ಮಾನವ ಕುಲವನ್ನು ಉತ್ತಮ ಸತ್ಪçಜೆಗಳನ್ನಾಗಿ ಮಾಡಿ ಸನ್ಮಾರ್ಗದಲ್ಲಿ ನಡೆಸಿ ಉದ್ದಾರ ಮಾಡಿದ್ದಾರೆ. ಜಗತ್ತಿನ ಅತಿ ದೊಡ್ಡಸಮಾಜವಾದ ಏಸುಕ್ತಿಸ್ತ ಸಮಾಜದ ಎಲ್ಲೆಡೆ ಪ್ರೀತಿ, ವಾತ್ಸಲ್ಯ, ಸೇವೆ ಇರುತ್ತದೆ. ಅವರ ಮಾರ್ಗದರ್ಶನದಲ್ಲಿ ಜಗತ್ತು ನಡೆಯಲಿ ಅವರ ಆಶಿರ್ವಾದ ಎಲ್ಲರಮೇಲಿರಲಿ ಎಂದರು.

ಮಾಜಿ ಶಾಸಕ ಪಿಳ್ಳಮುನಿಶಾಮಪ್ಪ ಮಾತನಾಡಿ ಏಸುಕ್ರಿಸ್ತನು ಎಲ್ಲರ ಮನೆಯಲ್ಲೂ ನೆಲಸಿ ಶಾಂತಿ, ಪ್ರೀತಿ ನೆಮ್ಮದಿಯಿಂದ ಬದುಕಲಿ, ಅವರ ಸನ್ಮಾರ್ಗದಲ್ಲಿ ಎಲ್ಲರು ನಡೆದು ಅವರ ಆಶಯಗಳನ್ನು ಈಡೇರಿಸಲಿ ಎಂದರು. ಪಾಸ್ಟರ್ ಎಂ.ರಾಜಪ್ಪ ಮಾತನಾಡಿ ಜೀಸಸ್ 30 ವರ್ಷದವನಿದ್ದಾಗ, ಜಾನ್ ಬ್ಯಾಪ್ಟಿಸ್ಟ್ ಅವನಿಗೆ ಬ್ಯಾಪ್ಟೈಜ್ ಮಾಡಿದನೆಂದು ನಾವು ಸುವಾರ್ತೆಗಳಿಂದ ಕಲಿಯುತ್ತೇವೆ ಮತ್ತು ಈ ಘಟನೆಯನ್ನು ಕ್ರಿಸ್ತನ ಸಾರ್ವಜನಿಕ ಸೇವೆಯ ಪ್ರಾರಂಭವೆಂದು ಪರಿಗಣಿಸಲಾಗಿದೆ. ಆ ಸಂದರ್ಭದಲ್ಲಿ, ಸುವಾರ್ತೆಗಳ ಪ್ರಕಾರ, ಸ್ವರ್ಗವು ತೆರೆದುಕೊಂಡಿತು ಮತ್ತು ಪವಿತ್ರಾತ್ಮವು ಪಾರಿವಾಳದ ರೂಪದಲ್ಲಿ ಅವನ ಮೇಲೆ ಇಳಿಯಿತು, ಮತ್ತು ಸ್ವರ್ಗದಿಂದ ಒಂದು ಧ್ವನಿ ಕೇಳಿಸಿತು: ” ನೀನು ನನ್ನ ಪ್ರೀತಿಯ ಮಗ; ನಿನ್ನಲ್ಲಿ ನಾನು ಸಂತಸಗೊಂಡಿದ್ದೇನೆ.” ದೀಕ್ಷಾಸ್ನಾನದ ನಂತರ, ಯೇಸು ಮರುಭೂಮಿಗೆ ಹೋದನು, ಅಲ್ಲಿ ಅವನು 40 ದಿನಗಳವರೆಗೆ ಉಪವಾಸ ಮಾಡಿದನು. ದೆವ್ವವು ವಿವಿಧ ಪ್ರಲೋಭನೆಗಳ ರೂಪದಲ್ಲಿ ಮೂರು ಬಾರಿ ಅವನ ಬಳಿಗೆ ಬಂದಿತು, ಆದರೆ ಕ್ರಿಸ್ತನು ವಿಜಯಶಾಲಿಯಾಗಿದ್ದನು ಎಂದು ತಿಳಿಸಿದರು.

ಇದೆ ವೇಳೆ ಇಂಡಿಯನ್ ಬ್ಯಾಪ್ಟಿಸ್ಟ್ ಸೊಸೈಟಿ ನಿರ್ದೇಶಕರಾದ ರೆವರೆಂಡ್ ಸುಬ್ಬಾರಾವ್ ಮಾರ್ಥಾಮ ಸಭಾಪಾಲಕರಾದ ರೇವ್ ವಿನೋದ್ ವರ್ಗೀಸ್, ಜೋಸ್ ಥಾಮಸ್ ಪಂಚಗ್ಯಾರಂಟಿ ಯೋಜನೆಗಳ ಅನುಷ್ಠಾನ ತಾಲೂಕು ಅಧ್ಯಕ್ಷ ಸಿ.ಜಗನ್ನಾಥ್, ಐಬಿಎಸ್ ನಿರ್ದೇಶಕರಾದ ರೆವರೆಂಡ್ ಸುಬ್ಬಾರಾವ್, ಮುಖಂಡರಾದ ದೇವನಹಳ್ಳಿ ತಾಲೂಕು ಪಾಸ್ಟರ್ಸ್ ಫೆಲೋಷಿಪ್ ಅಧ್ಯಕ್ಷ ವಿ.ನಾಗರಾಜ, ಪ್ರಧಾನ ಕಾರ್ಯದರ್ಶಿ ರಾಮಚಂದ್ರ.ಡಿ, ಖಜಾಂಚಿ ಪ್ರಭಾಕರ್.ಎಸ್.ಎಂ, ಹಿರಿಯ ಸಲಹೆಗಾರರು ಜೆ.ಡಿ.ಎನೋಷ್, ರಾಜಪ್ಪ.ಎಂ, ದೇವರಾಜ್, ಎಂ.ರಾಜು, ನಿರ್ದೇಶಕರಾದ ಸಂತೋಷ್‌ಕುಮಾರ್.ಹೆಚ್, ಎಂ.ಪೂಜಪ, ಗೋಪಿನಾಥ್, ಮುನಿರಾಜು, ಪ್ರೇಮಕುಮಾರ್.ಎನ್.ಪಿ, ಸೈಮನ್ ಶಾಂತಕುಮಾರ್, ಮುಂತಾದವರು ಇದ್ದರು.

Related Articles

Leave a Reply

Your email address will not be published. Required fields are marked *

Back to top button