ರಾಜ್ಯ

ಉತ್ತರ ಕರ್ನಾಟಕದ ಸಮಸ್ಯೆಗಳ ಬಗ್ಗೆ ಚರ್ಚೆ ಮಾಡಲು ಬಿಜೆಪಿಗೆ ಆಸಕ್ತಿ ಇಲ್ಲ : ಡಿ.ಕೆ. ಶಿವಕುಮಾ‌ರ್

ಹುಬ್ಬಳ್ಳಿ : ಉತ್ತರ ಕರ್ನಾಟಕದ ಯಾವುದೇ ವಿಚಾರ, ಸಮಸ್ಯೆಗಳ ಬಗ್ಗೆ ಚರ್ಚೆ ಮಾಡಲು ಬಿಜೆಪಿಯವರಿಗೆ ಆಸಕ್ತಿ ಇಲ್ಲ” ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಹೇಳಿದರು.

ಹುಬ್ಬಳ್ಳಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು,”ಬಿಜೆಪಿಯವರಿಗೆ ರಾಜಕಾರಣ ಹೊರತಾಗಿ ಬೇರೆ ವಿಚಾರ ಬೇಕಿಲ್ಲ. ಅವರ ಪಕ್ಷದಲ್ಲಿ ಒಗ್ಗಟ್ಟಿಲ್ಲ. ಉತ್ತರ ಕರ್ನಾಟಕದ ನೀರಾವರಿ ಬಗ್ಗೆ ಚರ್ಚೆ ಮಾಡಲು ನಾನು ಸಿದ್ಧನಾಗಿದ್ದು, ನೀರಾವರಿ ಜತೆಗೆ ಬೇರೆ ವಿಚಾರಗಳೂ ಅಧಿವೇಶನದಲ್ಲಿ ಚರ್ಚೆಯಾಗಲಿ” ಎಂದರು.

ಶೆಟ್ಟ‌ರ್- ಜೋಶಿ ನೇತೃತ್ವ ವಹಿಸಿ ಅನುಮತಿ ಕೊಡಿಸಲಿಮಹದಾಯಿ ಯೋಜನೆ ಅನುಷ್ಠಾನ ವಿಳಂಬ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, “ಇತ್ತೀಚೆಗಷ್ಟೇ ಕೇಂದ್ರ ಅರಣ್ಯ ಸಚಿವರನ್ನು ಭೇಟಿ ಮಾಡಿದ್ದೆ. ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಅವರನ್ನೂ ಭೇಟಿ ಮಾಡಿ ಚರ್ಚೆ ಮಾಡಿದೆ. ಅವರು ಕೂಡ ಅರಣ್ಯ ಸಚಿವರ ಜತೆ ಚರ್ಚೆ ಮಾಡಿರುವ ಬಗ್ಗೆ ತಿಳಿಸಿದರು. ಮಹದಾಯಿ ಯೋಜನೆ ಕಾಮಗಾರಿಗಳ ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದ್ದು, ಕೇಂದ್ರದ ಅನುಮತಿ ದೊರೆತ ತಕ್ಷಣ ಕೆಲಸ ಆರಂಭವಾಗುತ್ತದೆ. ಮೇಕೆದಾಟು ಯೋಜನೆ ವಿಚಾರವಾಗಿ ಸಂಭ್ರಮಾಚರಣೆ ಮಾಡಿದ್ದು ಜಗದೀಶ್ ಶೆಟ್ಟರ್ ಹಾಗೂ ಪ್ರಹ್ಲಾದ್ ಜೋಶಿ. ಹೀಗಾಗಿ ಅವರೇ ನೇತೃತ್ವ ವಹಿಸಿ ಈ ಯೋಜನೆಗೆ ಅನುಮತಿ ಕೊಡಿಸಬೇಕು.

ಅವರು ಅರಣ್ಯ ಇಲಾಖೆ ಅನುಮತಿ ಕೊಡಿಸಲಿ, ನಾವು ಕೆಲಸ ಆರಂಭಿಸುತ್ತೇವೆ. ಅನುಮತಿ ಸಿಗುವ ವಿಶ್ವಾಸ ಇದೆ” ಎಂದು ತಿಳಿಸಿದರು.

ವರದಿ: C ಕೊಟ್ರೇಶ್ tv8newskannada ಹುಬ್ಬಳ್ಳಿ

Related Articles

Leave a Reply

Your email address will not be published. Required fields are marked *

Back to top button