ಆರೋಗ್ಯ

Winter Hair Care Tips: ನೀವು ತಲೆಹೊಟ್ಟು ಸಮಸ್ಯೆಯಿಂದ ಬಳಲುತ್ತಿದ್ದೀರಾ? ಇಲ್ಲಿದೆ ಶಾಶ್ವತ ಪರಿಹಾರ..

ಚಳಿಗಾಲದಲ್ಲಿ ಕೂದಲು ಸಾಮಾನ್ಯವಾಗಿ ಒಣಗುತ್ತದೆ ಮತ್ತು ನಿರ್ಜೀವವಾಗುತ್ತದೆ. ತಣ್ಣನೆಯ ಗಾಳಿಯಿಂದಾಗಿ ಕೂದಲಿನಲ್ಲಿ ತೇವಾಂಶ ಕಡಿಮೆಯಾಗಿ ತಲೆಹೊಟ್ಟು ಸಮಸ್ಯೆಯೂ ಹೆಚ್ಚುತ್ತದೆ (Winter Hair Care Tips). ಇಂತಹ ಪರಿಸ್ಥಿತಿಯಲ್ಲಿ ಅಲೋವೆರಾದಲ್ಲಿ ಕೆಲವು ಪದಾರ್ಥಗಳನ್ನು ಬೆರೆಸಿ ಕೂದಲಿಗೆ ಹಚ್ಚುವುದರಿಂದ ತಲೆಹೊಟ್ಟು ಹೋಗಲಾಡಿಸಬಹುದು.

ಈ ವಿಷಯಗಳ ಬಗ್ಗೆ ಇಲ್ಲಿ ತಿಳಿದುಕೊಳ್ಳೋಣ.

ನಿಂಬೆಯಲ್ಲಿ ನಂಜುನಿರೋಧಕ ಗುಣವಿದ್ದು, ತಲೆಹೊಟ್ಟು ಉಂಟುಮಾಡುವ ಬ್ಯಾಕ್ಟೀರಿಯಾವನ್ನು ನಾಶಪಡಿಸುತ್ತದೆ. ಅಲೋವೆರಾ ಮತ್ತು ನಿಂಬೆ ರಸದ ಮಿಶ್ರಣವನ್ನು ಕೂದಲಿಗೆ ಹಚ್ಚುವುದರಿಂದ ತಲೆಹೊಟ್ಟು ಕಡಿಮೆಯಾಗುತ್ತದೆ ಮತ್ತು ಕೂದಲಿನ ಹೊಳಪು ಹೆಚ್ಚಾಗುತ್ತದೆ. ಆದರೆ ಹೆಚ್ಚಿನವರು ಹುಳಿ ಅಂಶ ಇರುವ ನಿಂಬೆ. ಮೊಸರನ್ನು ಕೂದಲಿಗೆ ಹಚ್ಚುವದರಿಂದ ಕೂದಲು ಬೆಳ್ಳಗೆ ಆಗುತ್ತದೆ ಎನ್ನುತ್ತಾರೆ. ಅಂತಹವರು ಆಲೋವೆರಾವನ್ನು ಮಾತ್ರ ಬಳಸಬಹುದಾಗಿದೆ.

ಮೊಸರು ಲ್ಯಾಕ್ಟಿಕ್ ಆಮ್ಲವನ್ನು ಹೊಂದಿರುತ್ತದೆ. ಇದು ತಲೆಹೊಟ್ಟು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಅಲೋವೆರಾ-ಮೊಸರನ್ನು ಬೆರೆಸಿ ಕೂದಲಿಗೆ ಹಚ್ಚುವುದರಿಂದ ನೆತ್ತಿಯ ತೇವಾಂಶ ಹೆಚ್ಚುತ್ತದೆ. ತಲೆಹೊಟ್ಟು ಹೋಗಲಾಡಿಸುತ್ತದೆ.

ತೆಂಗಿನ ಎಣ್ಣೆ ಕೂದಲಿಗೆ ಪೋಷಣೆ ನೀಡುತ್ತದೆ. ತಲೆಹೊಟ್ಟು ಕಡಿಮೆ ಮಾಡುತ್ತದೆ. ಅಲೋ-ತೆಂಗಿನ ಎಣ್ಣೆ ಮಿಶ್ರಣದಿಂದ ಕೂದಲಿಗೆ ಮಸಾಜ್ ಮಾಡುವುದರಿಂದ ನೆತ್ತಿಯು ಆರೋಗ್ಯಕರವಾಗಿರುತ್ತದೆ. ಕೂದಲು ಮೃದು ಮತ್ತು ಹೊಳೆಯುತ್ತದೆ.

ಮೆಂತ್ಯೆಯನ್ನು ನೀರಿನಲ್ಲಿ ನೆನೆಸಿ ನಂತರ ಚೆನ್ನಾಗಿ ರುಬ್ಬಿ ತಲೆಗೆ ಹಚ್ಚುವುದರಿಂದ ತಲೆ ಹೊಟ್ಟು ಕಡಿಮೆ ಆಗುತ್ತದೆ.

ತೆಂಗಿನ ಎಣ್ಣೆಯನ್ನು ಬಿಸಿ ಮಾಡಿ ಅದಕ್ಕೆ ಕಾಫಿ ಪುಡಿ ಸೇರಿಸಿ. ನಯವಾದ ಪೇಸ್ಟ್ ಆಗುವಂತೆ ಚೆನ್ನಾಗಿ ಮಿಶ್ರಣ ಮಾಡಿ. ತಣ್ಣಗಾದ ನಂತರ ಕೂದಲು, ಬೇರುಗಳು ಮತ್ತು ನೆತ್ತಿಗೆ ಹಚ್ಚಿ. 30 ನಿಮಿಷಗಳ ನಂತರ ಮೃದುವಾದ ಶಾಂಪೂ ಬಳಸಿ ತಲೆ ಸ್ನಾನ ಮಾಡಿ.

ಬರಹ : ಪುಣ್ಯ ಗೌಡ ಸ್ಪೆಶಲ್ ಡೆಸ್ಕ್ tv8kannada ಬೆಂಗಳೂರು

Related Articles

Leave a Reply

Your email address will not be published. Required fields are marked *

Back to top button