ದೇಶ

ಜಮ್ಮು-ಕಾಶ್ಮೀರ ವಿಶೇಷ ಸ್ಥಾನಮಾನ ಮರು ಸ್ಥಾಪನೆ ನಿರ್ಣಯ ಅಂಗೀಕರಿಸಿದ ಒಮರ್ ಅಬ್ದುಲ್ಲಾ ಸರ್ಕಾರ

ಜಮ್ಮು-ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ಮರು ಸ್ಥಾಪನೆ ನಿರ್ಣಯವನ್ನು ಒಮ‌ರ್ ಅಬ್ದುಲ್ಲಾ ಸರ್ಕಾರ ಅಂಗೀಕರಿಸಿದೆ.ಬಿಜೆಪಿ ನಾಯಕರ ಗದ್ದಲದ ನಡುವೆಯೇ ವಿಶೇಷ ಸ್ಥಾನಮಾನ ಮರುಸ್ಥಾಪನೆಗಾಗಿ ಚುನಾಯಿತ ಪ್ರತಿನಿಧಿಗಳೊಂದಿಗೆ ಸಂವಾದ ನಡೆಸುವಂತೆ ಕೇಂದ್ರ ಸರ್ಕಾರವನ್ನು ಕೇಳುವ ಧ್ವನಿ ಮತದ ನಿರ್ಣಯದ ಮೂಲಕ ವಿಧಾನಸಭೆ ಅಂಗೀಕರಿಸಿತು

.ಜಮ್ಮು ಮತ್ತು ಕಾಶ್ಮೀರದಲ್ಲಿ ಆರು ವರ್ಷಗಳ ಬಳಿಕ ಸರ್ಕಾರ ರಚನೆಯಾಗಿ, ಅಧಿವೇಶನ ಕರೆದ ಮೊದಲ ದಿನವೇ ವಿಶೇಷ ಸ್ಥಾನಮಾನ ಕಲ್ಪಿಸುವ ಸಂವಿಧಾನದ 370ನೇ ವಿಧಿ ರದ್ದತಿ ವಿರುದ್ಧ ಪೀಪಲ್ಸ್ ಡೆಮಾಕ್ರಟಿಕ್ ಪಕ್ಷದ (ಪಿಡಿಪಿ) ಶಾಸಕ ವಹೀದ್ ಪಾರಾ ನಿರ್ಣಯ ಮಂಡಿಸಿತ್ತು ನಂತರ ಗದ್ದಲ ಏರ್ಪಟ್ಟಿತ್ತು.

ಕೇಂದ್ರ ಸರ್ಕಾರವು 2019ರ ಅಗಸ್ಟ್ ತಿಂಗಳಲ್ಲಿ 370ನೇ ವಿಧಿಯನ್ನು ರದ್ದುಗೊಳಿಸಿತ್ತು. ಮರುಸ್ಥಾಪನೆ ಪ್ರಕ್ರಿಯೆಯು ಜಮ್ಮು ಮತ್ತು ಕಾಶ್ಮೀರದ ಜನರ ಕಾನೂನುಬದ್ಧ ಆಕಾಂಕ್ಷೆಗಳೊಂದಿಗೆ ರಾಷ್ಟ್ರೀಯ ಏಕತೆಯನ್ನು ಸಮತೋಲನಗೊಳಿಸಬೇಕು ಎಂದು ನಿರ್ಣಯವು ಒತ್ತಿ ಹೇಳಿತು.

Related Articles

Leave a Reply

Your email address will not be published. Required fields are marked *

Back to top button