
ಬೆಂಗಳೂರು : ನಾಡ ಬಾಂಧವರಿಗೆಲ್ಲರಿಗೂ ಕನ್ನಡ ರಾಜ್ಯೋತ್ಸವದ ಹಾರ್ದಿಕ ಶುಭಾಶಯಗಳು. ಕನ್ನಡ ರಾಜ್ಯೋತ್ಸವ ಎನ್ನುವುದು ಕೇವಲ ಸಂಭ್ರಮದ ಕಾಲವಲ್ಲ, ಇದು ನಾಡು-ನುಡಿಯ ಬಗ್ಗೆ ನಮಗಿರುವ ಬದ್ಧತೆ ಬಗ್ಗೆ ಆತ್ಮಾವಲೋಕನ ಮಾಡಿಕೊಳ್ಳುವ ಕಾಲವೂ ಹೌದು. ಸಾಮಾನ್ಯವಾಗಿ ನಮ್ಮ ಕನ್ನಡ ಪ್ರೇಮ ಕನ್ನಡ ರಾಜ್ಯೋತ್ಸವದ ದಿನ ಮತ್ತು ನವಂಬರ್ ನಲ್ಲಿ ಸಂಭ್ರಮ- ಸಡಗರದ ಹೊನಲಾಗಿ ರಾಜ್ಯದ ಬೀದಿಬೀದಿಗಳಲ್ಲಿ ಹರಿಯುತ್ತದೆ. ಇದು ನಾವೆಲ್ಲರೂ ಹೆಮ್ಮೆಪಡಬೇಕಾದ ಸಂಗತಿಯೇ ಆಗಿದೆ.
ಆದರೆ, ಈ ಅಭಿಮಾನ ನವೆಂಬರ್‌ನಲ್ಲಿ ವಿಜೃಂಭಿಸಿ ನಂತರದ ದಿನಗಳಲ್ಲಿ ಕಳೆದುಹೋಗಬಾರದು. ಕನ್ನಡವನ್ನು ಕಟ್ಟುವ, ಬೆಳೆಸುವ ಉಳಿಸುವ ನಮ್ಮ ಬದುಕಿನ ಭಾಗವಾಗಿ ನಿರಂತರವಾಗಿ ನಡೆಯುತ್ತಲೇ ಇರಬೇಕು. ಕನ್ನಡದ ಭಾಷೆಗೆ ಅದರದ್ದೇ ಆಗಿರುವ ಅಸ್ಥಿತೆಯಿದೆ. ಅದು ಬಹುತ್ವವನ್ನು ಗೌರವಿಸುವ ಮತ್ತು ಒಕ್ಕೂಟದ ಹಿತವನ್ನು ಕಾಯುವ ಬಾಳನೋಟದ ಆಸ್ತಿತೆ. ಇದು ಪಂಪನಿಂದ ಕುವೆಂಪುವರೆಗೆ ಕನ್ನಡ ಸಾಹಿತ್ಯ ಕ್ಷೇತ್ರದಲ್ಲಿ ಬೆಳೆದುಬಂದಿರುವ ಜೀವನದರ್ಶನ. ಇದನ್ನೇ ‘ಪಂಪ ಮಾನವ ಕುಲ ತಾನೊಂದೇ ವಲಂ’ ಎಂದು ಹೇಳಿದ್ದು ನಮ್ಮದು ಬಹುತ್ವದ ವ್ಯವಸ್ಥೆ ಇಲ್ಲಿ ಬಹುಭಾಷೆಗಳಿವೆ, ಬಹುಸಂಸ್ಕೃತಿಗಳಿವೆ.

ಬಹುಮಾದರಿಯ ಜನಾಂಗಗಳಿವೆ. ಈ ಎಲ್ಲಾ ಸಮುದಾಯ ಗಳು ತಮ್ಮ ಸಾಮುದಾಯಿಕ ಅನನ್ಯತೆಯನ್ನು ಉಳಿಸಿಕೊಂಡೇ ಸಂವಿಧಾನಬದ್ಧವಾದ ಗಣತಂತ್ರ ವ್ಯವಸ್ಥೆಯನ್ನು ಗೌರವಿಸುವ ರೀತಿಯಲ್ಲಿ ಬದುಕನ್ನು ಕಟ್ಟಿಕೊಂಡಿವೆ. ಇಂಥ ಬಹುತ್ವದ ಸ್ಥಳೀಯತೆಯನ್ನು ಗೌರವಿಸುವ ಹಾಗೂ ಒಕ್ಕೂಟದ ಭಾವೈಕ್ಯತೆಯನ್ನು ಬಲಗೊಳಿಸುವ ಮಾದರಿಯಲ್ಲಿ ನಮ್ಮ ಸಂವಿಧಾನ ರಚನೆಗೊಂಡಿದೆ. ಈ ಸಂವಿಧಾನದ ಆಶಯಕ್ಕನು ವಿಂಗಡನೆಯಾಗಿದೆ. ಪ್ರಾಂತ್ಯಗಳ
ಪ್ರತಿಯೊಂದು ರಾಜ್ಯದ ರಾಜ್ಯಭಾಷೆಯು ಆ ನೆಲದ ಸಾರ್ವಭೌಮ ಭಾಷೆ. ಇದನ್ನು ಸಂವಿಧಾನ ಅಂಗೀಕರಿಸಿದೆ. ಮಾನ್ಯ ಮಾಡಿದೆ. ಶಿಕ್ಷಣ ಕ್ಷೇತ್ರದಲ್ಲಿ ಆಯಾ ರಾಜ್ಯಗಳ ರಾಜ್ಯ ಭಾಷೆ ಸಾರ್ವಭೌಮ ಭಾಷೆಯೇ ಹೊರತು ಬೇರಾವುದೇ ಮತ್ತೊಂದು ಭಾಷೆ ಆ ನೆಲದ ಬದುಕಿನ ಮೇಲೆ ಆಧಿಪತ್ಯವನ್ನು ಮೆರೆಯುವುದು ಭಾಷಾವಾರು ಪ್ರಾಂತ್ಯ ರಚನೆಯ ನೀತಿಗೆ ವಿರುದ್ಧವಾದುದು.

ಸಂವಿಧಾನವೂ ಇದನ್ನು ಒಪ್ಪುವುದಿಲ್ಲ. ಸ್ಥಳೀಯತ್ವವನ್ನು ಉಳಿಸಿಕೊಂಡೇ ಅರ್ಥಾತ್ ಸ್ಥಳೀಯ ಭಾಷೆಯ ಸ್ವಾಯತ್ತತೆ ಯನ್ನು ಉಳಿಸಿಕೊಂಡೇ ಅನ್ಯಭಾಷೆಗಳನ್ನು ಕಲಿಯುವುದಕ್ಕೆ ಅವಕಾಶ ಕೊಡಬೇಕಾದ್ದು ಒಕ್ಕೂಟ ವ್ಯವಸ್ಥೆಯೊಳಗಿನ ನೀತಿ ಸಂಹಿತೆ. ಇಂದು ಕನ್ನಡ ಭಾಷೆ ಅಷ್ಟೇ ಅಲ್ಲ, ಎಲ್ಲಾ ಪ್ರಾದೇಶಿಕ ಭಾಷೆಗಳು ಬಹುದೊಡ್ಡ ಆತಂಕಗಳನ್ನು ಎದುರಿಸುತ್ತಿವೆ. ಅವುಗಳ ಅಸ್ತಿತ್ವಕ್ಕೆ ಧಕ್ಕೆ ತರುವ ರೀತಿಯೊಳಗೆ ವಿದ್ಯಮಾನಗಳು ಬೆಳೆಯುತ್ತಿವೆ.
ಮಾತೃಭಾಷೆಯ ಹೆಸರಿನಲ್ಲಿ ನಡೆಸುತ್ತಿರುವ ಪ್ರಹಾರ ಒಕ್ಕೂಟ ವ್ಯವಸ್ಥೆಗೆ ಧಕ್ಕೆಯನ್ನುಂಟುಮಾಡುವ ರೀತಿಯೊಳಗೆ ಅಪಾಯಕಾರಿ ಬೆಳವಣಿಗೆಯಿಂದ ಕೂಡಿದೆ. ಸುಪ್ರೀಂ ಕೋರ್ಟ್ ಕೂಡಾ ಮಗು ಯಾವ ಭಾಷೆಯಲ್ಲಿ ಕಲಿಯ ಬೇಕೆಂಬ ತೀರ್ಮಾನ ಪಾಲಕರಿಗೆ ಸೇರಿದ್ದು ಎಂಬ ತೀರ್ಪು ನೀಡಿದೆ. ಇದು ಕೇವಲ ಕನ್ನಡ ಭಾಷೆಗೆ ಮಾತ್ರವಲ್ಲ, ನಮ್ಮ ಇಡೀ ಸಮಾಜದ ರಚನೆಗೆ ಬಂದಿರುವ ಕುತ್ತು ಎನ್ನುವುದನ್ನು ನಾವು ತಿಳಿದುಕೊಳ್ಳಬೇಕು.
ಕನ್ನಡ ಅಭಿವೃದ್ಧಿಗಾಗಿ ಆನೇಕ ಕೆಲಸಗಳು ಇನ್ನೂ ಬಾಕಿ ಇವೆ. ಸರೋಜಿನಿ ಮಹಿಷಿ ವರದಿಯನ್ವಯ ಕನ್ನಡಿಗರಿಗೆ ಉದ್ಯೋಗ, ಕನ್ನಡ ಮಕ್ಕಳಿಗೆ ಶಿಕ್ಷಣ, ಉದ್ಯೋಗ ಸೌಲಭ್ಯವನ್ನು ವೃದ್ಧಿಗೊಳಿಸಬೇಕಾಗಿದೆ. ಇದಕ್ಕೆ ಸಂಬಂಧಿಸಿದಂತೆ ಸರಕಾರ ಕೈಗೊಂಡ ನಿರ್ಧಾರದ ಬಗ್ಗೆ ತಪ್ಪು ಅಭಿಪ್ರಾಯ ಹುಟ್ಟಿಕೊಂಡ ಕಾರಣ ಕೆಲವು ಉದ್ದಿಮೆದಾರರಿಂದ ವಿರೋಧ ವ್ಯಕ್ತವಾಯಿತು.
ಹಿನ್ನೆಲೆಯಲ್ಲಿ ಸಂಧಾನ- ಸಮಾಲೋಚನೆ ಮೂಲಕ ಈ ಪ್ರಯತ್ನವನ್ನು ಮುಂದುವರಿಸಿಕೊಂಡು ಹೋಗಬೇಕೆಂದು ಸರಕಾರ ತೀರ್ಮಾನಿಸಿದೆ. ಕನ್ನಡ ನಾಡಿನ ಜನತೆಯ ಹಿತರಕ್ಷಣೆ, ಜನತೆಯ ಬದುಕು ಹಸನಾದರೆ ಆ ಜನರು ಆಡುವ ಭಾಷೆ, ಸಂಸ್ಕೃತಿ, ಆ ಜನರ ಭವಿಷ್ಯ ಉಜ್ವಲಗೊಳ್ಳು ತ್ತದೆ. ಇಂಗ್ಲಿಷ್ ಇಲ್ಲವೆ ಹಿಂದಿ ಭಾಷೆಗಳ ಕಲಿಕೆ, ಅಧ್ಯಯನ ಸಂಶೋಧನೆಗಳನ್ನು ನಾವು ವಿರೋಧಿಸಬೇಕಾಗಿಲ್ಲ, ಅದು ಸರಿಯಾದ ನಡೆಯೂ ಅಲ್ಲ. ಈ ಭಾಷೆಗಳ ಪ್ರಭಾವ ಕನ್ನಡ ಭಾಷೆಗೆ ಮಾರಕವಾಗದಂತೆ ನೋಡಿಕೊಳ್ಳುವುದು ಹೇಗೆ ಎಂಬ ಬಗ್ಗೆ ನಾವು ಯೋಚನೆ ಮಾಡಬೇಕಾಗಿದೆ.
ಕನ್ನಡ ಭಾಷೆಯಲ್ಲಿನ ಹಸ್ತಾಕ್ಷರವನ್ನು ಬಳಸಲು ಸರಕಾರಿ ಕಚೇರಿಗಳಿಂದ ಹಿಡಿದು ಬ್ಯಾಂಕ್- ವಿಮಾ ಕಂಪನಿಗಳವರೆಗೆ ಎಲ್ಲಾ ಕಡೆ ಅವಕಾಶ ಇದ್ದರೂ ನಾವು ಇಂಗ್ಲಿಷ್‌ನಲ್ಲಿಯೇ ಹಸ್ತಾಕ್ಷರ ಮಾಡುತ್ತೇವೆ. ನಮ್ಮ ಮನೆಗಳಿಗೆ ಇಂಗ್ಲಿಷ್ ಹೆಸರು ಇಡುತ್ತೇವೆ, ಕನ್ನಡದ ಹೆಸರು ಇಟ್ಟರೂ ಅದನ್ನು ಇಂಗ್ಲಿಷ್ ಭಾಷೆಯಲ್ಲಿ ಬರೆಸುತ್ತೇವೆ. ನಮ್ಮ ಮನೆಗಳಲ್ಲಿ ನಡೆಯುವ ಮದುವೆ ಸೇರಿದಂತೆ ಎಲ್ಲ ಶುಭ ಸಮಾರಂಭಗಳಿಗೆ ಇಂಗ್ಲಿಷ್ ನಲ್ಲಿ ಆಮಂತ್ರಣ ಪತ್ರಿಕೆ ಮುದ್ರಿಸುತ್ತೇವೆ. ಕರ್ನಾಟಕದೊಳಗೆ ಕನ್ನಡದಲ್ಲಿಯೇ ವಿಳಾಸ ಬರೆಯಲು ಅವಕಾಶ ಇದ್ದರೂ ಇಂಗ್ಲಿಷ್ ನಲ್ಲಿಯೇ ಬರೆಯುತ್ತೇವೆ.
ಇಷ್ಟು ಮಾತ್ರವಲ್ಲ, ದೇವರು ಮತ್ತು ಭಕ್ತರ ನಡುವಿನ ವ್ಯವಹಾರವನ್ನೂ ನಾವು ಕನ್ನಡದಲ್ಲಿ ನಡೆಸುವುದಿಲ್ಲ, ಪುರೋಹಿತರು ಸಂಸ್ಕೃತದಲ್ಲಿ ಹೇಳುವ ಎಷ್ಟು ಶ್ಲೋಕಗಳು ಭಕ್ತರಿಗೆ ಅರ್ಥವಾಗುತ್ತೋ ಗೊತ್ತಿಲ್ಲ. ಚರ್ಚ್ಗಳಲ್ಲಿ ಕನ್ನಡ ಭಾಷೆ ಬಳಕೆ ಮಾಡಬೇಕೆಂದು ಕನ್ನಡಿಗರಾದ ಕ್ರಿಶ್ಚಿಯನ್ನರು ಬಹುಕಾಲದಿಂದ ಒತ್ತಾಯಿಸುತ್ತಾ ಬಂದಿದ್ದಾರೆ. ಅದೇ Dea ದೇಗುಲಗಳಲ್ಲಿ ಕನ್ನಡದಲ್ಲಿಯೂ
ಪೂಜೆ-ಪುನಸ್ಕಾರಗಳನ್ನು ಯಾಕೆ ನಡೆಸಬಾರದು?
ನಮ್ಮ ಮಾತುಗಳು ಅಷ್ಟೇ, ಮನೆಯೊಳಗೆ, ಹೊರಗೆ ಕನ್ನಡ ಗೊತ್ತಿದ್ದವರ ಜತೆಯಲ್ಲಿಯೂ ಇಂಗ್ಲಿಷ್‌ನಲ್ಲಿಯೇ ಮಾತನಾಡುತ್ತೇವೆ. ಇದಕ್ಕೆಲ್ಲ ಮುಖ್ಯ ಕಾರಣ ನಮ್ಮ ಭಾಷೆಯ ಬಗ್ಗೆ ನಮಗಿರುವ ಕೀಳರಿಮೆ ಮತ್ತು ಪರಭಾಷೆಯ ಬಗ್ಗೆ ಇರುವ ಮೇಲರಿಮೆ. ಕೀಳರಿಮೆ- ಮೇಲರಿಮೆಯನ್ನು ತೊಡೆದುಹಾಕದೆ ಇದ್ದರೆ ಭವಿಷ್ಯದಲ್ಲಿ ಕನ್ನಡ ಬಹುದೊಡ್ಡ ಅಪಾಯವನ್ನು ಎದುರಿಸಲಿದೆ.
ಇಂಗ್ಲಿಷ್ ಭಾಷೆಯ ಮಹತ್ವವನ್ನು ಯಾರೂ ಅಲ್ಲಗಳೆಯುವುದಿಲ್ಲ, ಆದರೆ, ಈ ಭಾಷೆ ನಿಜವಾದ ಉದ್ದೇಶಕ್ಕಾಗಿ ಬಳಕೆಯಾಗದೆ ಕೇವಲ ಒಂದು ಪ್ರತಿಷ್ಠೆಯ ವಿಷಯವಾಗಿ ಉಳಿದಿರುವುದು ದುರಂತ.
ಕಾನ್ವೆಂಟುಗಳು ಶಿಕ್ಷಣದಲ್ಲಿ ಇಂಗ್ಲಿಷ್ ಗಿಳಿಪಾಠವಾಗಿ ನಮ್ಮ ಬಾಲಕ ಬಾಲಕಿಯರಲ್ಲಿ ಒಂದು ಕೃತಕ ವ್ಯಕ್ತಿತ್ವವನ್ನು ಮೂಡಿಸುತ್ತಿದೆ.
ಬಗೆಯ ಶಿಕ್ಷಣವೇ ಪರಮಶ್ರೇಷ್ಠವಾದುದೆಂದು ನಮ್ಮಲ್ಲಿ ಅನೇಕರು ಭ್ರಮಿಸಿದ್ದಾರೆ. ಕನ್ನಡ ಎನ್ನುವುದು ಜನಭಾಷೆ, ಈ ನೆಲದ ಭಾಷೆ, ಇಲ್ಲಿನ ಮಣ್ಣಿನ ವಾಸನೆಯ ಭಾಷೆ. ಅದು ಸಂಸ್ಕೃತದಂತೆ ದೇವ ಭಾಷೆಯೂ ಅಲ್ಲ, ಇಂಗ್ಲಿಷ್ ನಂತೆ ಪರಕೀಯವಾದುದೂ ಅಲ್ಲ ರಾಜ್ಯಭಾಷೆಯನ್ನು ಈ ಅರ್ಥದಲ್ಲಿಯೇ ಮಾತೃಭಾಷೆ ಎನ್ನು ತ್ತೇವೆ. ಅದಕ್ಕೆ ತಾಯಿಯ ಸ್ಥಾನವನ್ನು ನೀಡಿದ ನಂತರ ಹೆತ್ತ ತಾಯಿಗೆ ಕೊಟ್ಟಷ್ಟು ಗೌರವವನ್ನು ಕನ್ನಡ ಭಾಷೆಗೂ ಕೊಡಬೇಕಾಗುತ್ತದೆ. ಆಡಳಿತದಲ್ಲಿ ಕನ್ನಡದ ಬಳಕೆ ಬಗ್ಗೆ ನಮ್ಮ ಸರಕಾರ
ಬದ್ದವಾಗಿದೆ. ಮಂತ್ರಿಮಂಡಲದ ನಿರ್ಣಯಗಳು, ಮಂತ್ರಿಗಳ ಟಿಪ್ಪಣಿಗಳು, ವಿಧಾನಸಭೆಯ ಮುಂದೆ ಬರುವ ವಿಧೇಯಕ ಗಳು ಕನ್ನಡದಲ್ಲೇ ಇದ್ದುಬಿಟ್ಟರೆ ಕನ್ನಡ ಅನಿವಾರ್ಯವಾಗಿ ಆಡಳಿತದಲ್ಲಿ ನೆಲೆಗೊಳ್ಳುವಂತಾಗುತ್ತದೆ. ಈ ಬಗ್ಗೆ ನಮ್ಮ ಎಲ್ಲ ಅಧಿಕಾರಿಗಳಿಗೂ ಕಟ್ಟುನಿಟ್ಟಿನ ಸೂಚನೆ ನೀಡಿದ್ದೇನೆ, ಎಂದರು.