ಇಂಗ್ಲೆಂಡ್ ವಿರುದ್ಧದ ಮೂರನೇ ಏಕದಿನ ಪಂದ್ಯವನ್ನೂ ಗೆದ್ದು ಸರಣಿ ಕ್ಲೀನ್‌ಸ್ವೀಪ್ ಮಾಡಿದ ಭಾರತ

ಅಹಮದಬಾದ್: ಇಲ್ಲಿನ ನರೇಂದ್ರ ಮೋದಿ ಅಂತಾರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆದ ಭಾರತ ಮತ್ತು ಇಂಗ್ಲೆಂಡ್ ತಂಡಗಳ ನಡುವಿನ ಮೂರನೇ ಏಕದಿನ ಪಂದ್ಯದಲ್ಲಿ ಭಾರತ 142 ರನ್‌ಗಳ ಭರ್ಜರಿ ಗೆಲುವು ದಾಖಲಿಸುವ ಮೂಲಕ 3 ಪಂದ್ಯಗಳ ಏಕದಿನ ಸರಣಿಯನ್ನು ಕ್ಲೀನ್‌ಸ್ವೀಪ್ ಮಾಡಿದೆ.
ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಟೀಮ್ ಇಂಡಿಯಾ ಗಿಲ್ ಶತಕ, ಶ್ರೇಯಸ್ ಐಯ್ಯರ್ ಹಾಗೂ ವಿರಾಟ್ ಕೊಹ್ಲಿ ಅರ್ಧಶತಕಗಳ ನೆರವಿನಿಂದ 50 ಓವರ್‌ಗಳಲ್ಲಿ ತನ್ನೆಲ್ಲಾ ವಿಕೆಟ್ ಕಳೆದುಕೊಂಡು 356 ರನ್ ಗಳಿಸಿ ಇಂಗ್ಲೆಂಡ್‌ಗೆ 357 ರನ್‌ಗಳ ಗುರಿಯನ್ನು ನೀಡಿತು. ಈ ಗುರಿಯನ್ನು ಬೆನ್ನಟ್ಟುವಲ್ಲಿ ವಿಫಲವಾದ ಇಂಗ್ಲೆಂಡ್ 34.2 ಓವರ್‌ಗಳಲ್ಲಿ ತನ್ನೆಲ್ಲಾ ವಿಕೆಟ್ ಕಳೆದುಕೊಂಡು 214 ರನ್ ಗಳಿಸಿತು.
ಭಾರತದ ಇನ್ನಿಂಗ್ಸ್: ರೋಹಿತ್ ಶರ್ಮಾ 1, ಶುಬ್‌ಮನ್ ಗಿಲ್ 112, ವಿರಾಟ್ ಕೊಹ್ಲಿ 52, ಶ್ರೇಯಸ್ ಐಯ್ಯರ್ 78, ಕೆಎಲ್ ರಾಹುಲ್ 40, ಹಾರ್ದಿಕ್ ಪಾಂಡ್ಯ 17, ಅಕ್ಷರ್ ಪಟೇಲ್ 13, ವಾಷಿಂಗ್ಟನ್ ಸುಂದರ್ 14, ಹರ್ಷಿತ್ ರಾಣಾ 13, ಅರ್ಷ್‌ದೀಪ್ ಸಿಂಗ್ 2 ಹಾಗೂ ಕುಲ್‌ದೀಪ್ ಯಾದವ್ ಅಜೇಯ 1 ರನ್ ಕಲೆಹಾಕಿದರು.
ಇಂಗ್ಲೆಂಡ್ ಪರ ಆದಿಲ್ ರಶೀದ್ 4 ವಿಕೆಟ್, ಮಾರ್ಕ್ ವುಡ್ 2 ವಿಕೆಟ್, ಸಕೀಬ್ ಮಹ್ಮೂದ್, ಗುಸ್ ಎಟ್ಕಿನ್‌ಸನ್ ಹಾಗೂ ಜೋ ರೂಟ್ ತಲಾ ಒಂದೊಂದು ವಿಕೆಟ್ ಪಡೆದರು.

ಇಂಗ್ಲೆಂಡ್ ಇನ್ನಿಂಗ್ಸ್: ಫಿಲಿಪ್ ಸಾಲ್ಟ್ 23, ಬೆನ್ ಡಕೆಟ್ 34, ಟಾಮ್ ಬ್ಯಾಂಟನ್ 38, ಜೋ ರೂಟ್ 24, ಹ್ಯಾರಿ ಬ್ರೂಕ್ 19, ಜೋಸ್ ಬಟ್ಲರ್ 6, ಲಿಯಾಮ್ ಲಿವಿಂಗ್‌ಸ್ಟನ್ 9, ಗುಸ್ ಎಟ್ಕಿನ್‌ಸನ್ 38, ಆದಿಲ್ ರಶೀದ್ 0, ಮಾರ್ಕ್ ವುಡ್ 9 ಹಾಗೂ ಸಕೀಬ್ ಮಹ್ಮೂದ್ ಅಜೇಯ 2 ರನ್ ಕಲೆಹಾಕಿದರು.
ಭಾರತದ ಪರ ಅರ್ಷ್‌ದೀಪ್ ಸಿಂಗ್, ಹರ್ಷಿತ್ ರಾಣಾ, ಅಕ್ಷರ್ ಪಟೇಲ್ ಹಾಗೂ ಹಾರ್ದಿಕ್ ಪಾಂಡ್ಯ ತಲಾ ಎರಡೆರಡು ವಿಕೆಟ್ ಪಡೆದರೆ, ವಾಷಿಂಗ್ಟನ್ ಸುಂದರ್ ಹಾಗೂ ಕುಲ್‌ದೀಪ್ ಯಾದವ್ ತಲಾ ಒಂದೊಂದು ವಿಕೆಟ್ ಪಡೆದರು.
https://www.instagram.com/reel/DF-l4A2vwD3/?igsh=MWFpYXJ1MDdheGN4dg==
ವರದಿ : ಮೊಹಮ್ಮದ್ ಶಫಿ ಸ್ಪೋರ್ಟ್ಸ್ ಬ್ಯೂರೋ tv8kannada ಬೆಂಗಳೂರು