Covid ನಿರ್ವಹಣೆ ಮಾಡಲು ಶಾಸಕರಿಗೆ ಟಾಸ್ಕ್ ಕೊಟ್ಟ CM: ಬೆಂಗಳೂರಲ್ಲಿ ಖಾಕಿ ಸರ್ಪಗಾವಲು.
ಲಾಕ್ ಡೌನ್ ಹಂತಕ್ಕೆ ಹೋಗದೇ ಬೇರೆ ಬೇರೆ ಕ್ರಮ
ಕೊರೊನಾ 1ನೇ ಅಲೆ ಹಾಗೂ 2ನೇ ಅಲೆ ಸಮಯದಲ್ಲಿ ಸೃಷ್ಟಿಯಾದ ಸನ್ನಿವೇಶ ಈಗ ಮತ್ತೆ ಆಗಬಾರದು. ಮಹಾರಾಷ್ಟ್ರದಲ್ಲಿ ಕೇಸ್ ಜಾಸ್ತಿ ಯಾಗಿ ಲಾಕ್ ಡೌನ್ ಮಾಡಿದ್ದಾರೆ. ಅಲ್ಲಿರುವ ಆಸ್ಪತ್ರೆ ಯಲ್ಲೂ ಬಹಳಷ್ಟು ಸಮಸ್ಯೆಗಳ ಆಗಿವೆ. ಆದರೆ ನಾವು ಲಾಕ್ ಡೌನ್ ಮಾಡದೇ ಕೊರೋನಾ ನಿರ್ವಹಣೆ ಮಾಡಲು ಕ್ರಮ ವಹಿಸಿದ್ದೇವೆ. ಲಾಕ್ ಡೌನ್ ಹಂತಕ್ಕೆ ಹೋಗದೇ ಬೇರೆ ಬೇರೆ ಕ್ರಮಗಳನ್ನು ಮಾಡಿದ್ದೇವೆ. ಈ ಮೂಲಕ ಸೋಂಕು ಹೆಚ್ಚಾಗದ ರೀತಿ ಈಗಲೇ ಎಚ್ಚರ ವಹಿಸಿದ್ದೇವೆ. ಹೀಗಾಗಿ ನೀವು ಕೂಡ ತಮ್ಮ ತಮ್ಮ ಕ್ಷೇತ್ರಗಳಲ್ಲಿ ಕೋವಿಡ್ ಹೆಚ್ಚಾಗದಂತೆ ನೋಡಿಕೊಳ್ಳಬೇಕು. ಸರ್ಕಾರದ ಕಾಲ ಕಾಲದ ಮಾರ್ಗಸೂಚಿ ಯನ್ನು ಜನರು ಪಾಲಿಸಬೇಕು. ಈ ನಿಟ್ಟಿನಲ್ಲಿ ಅಧಿಕಾರಿಗಳ ಜೊತೆ ಸೇರಿಕೊಂಡು ಕೊರೋನಾ ನಿರ್ವಹಣೆ ಮಾಡುವಂತೆ ಕರೆ ನೀಡಿದರು. ಬೆಂಗಳೂರು ಬಿಜೆಪಿ ಪಕ್ಷದ ಶಾಸಕರಿಗೆ ಜವಾಬ್ದಾರಿ ನೀಡಲಾಗಿದೆ. ಪಕ್ಷದ ಶಾಸಕರು ಇಲ್ಲದ ಕ್ಷೇತ್ರಗಳಲ್ಲಿ, ಮಾಜಿ ಶಾಸಕರು ಕೊರೋನಾ ನಿರ್ವಹಣೆ ಮಾಡುವಂತೆ ಸೂಚಿಸಲಾಗಿದೆ.
ಇತ್ತ ಬೆಂಗಳೂರು ಪೊಲೀಸ್ ಆಯುಕ್ತ ಕಮಲ್ ಪಂಥ್ ಸಹ ವೀಕೆಂಡ್ ಕರ್ಫ್ಯೂ, ಕೋವಿಡ್ ನಿಯಮಗಳ ಸಂಬಂಧ ಮಹತ್ವದ ಸಭೆ ನಡೆಸಿದರು. ನಂತರ ಮಾಧ್ಯಮಳಿಗೆ ಹೇಳಿಕೆ ನೀಡಿದ ಕಮಿಷನರ್, ಡಿಸಿಪಿಗಳಿಗೆ ನಿದರ್ಶನ ನೀಡಲಾಗಿದೆ. ಅವರು ಠಾಣಾಧಿಕಾರಿಗಳೊಂದಿಗೆ ಚರ್ಚಿಸಿ ಚೆಕ್ ಪೋಸ್ಟ್ ಹಾಕುತ್ತಾರೆ. ಸರಕಾರದ ಆದೇಶಗಳಂತೆ ಕ್ರಮ ಕೈಗೊಳ್ಳಲಾಗುತ್ತೆ, ಯಾವುದೇ ರೀತಿಯ ಪಾಸ್ ಗಳನ್ನ ವಿತರಿಸೋದಿಲ್ಲ. ಸೂಕ್ತ ಕಾರಣವಿಲ್ಲದೆ ಸಂಚರಿಸುವವ ಮೇಲೆ ಕ್ರಿಮಿನಲ್ ಕೇಸ್ ದಾಖಲು ಮಡಲಾಗುವುದು. ಓಡಾಡೋದಕ್ಕೆ ಸಾಕಷ್ಟು ಕಾಲಾವಕಾಶವಿದೆ. ಕರ್ಫ್ಯೂ ವೇಳೆ ವಿನಾಕಾರಣ ಓಡಾಡೋರ ವಿರುದ್ಧ ನಿರ್ಧಾಕ್ಷಿಣ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದರು.
ಕಮಿಷನರ್ ಎಚ್ಚರಿಕೆ
ಜನ ಈ ಹಿಂದೆ ಪೊಲೀಸರಿಗೆ ಉತ್ತಮ ಸಹಕಾರ ನೀಡಿದ್ದಾರೆ. ಅದೇ ರೀತಿ ಈ ಬಾರಿಯೂ ಸಾರ್ವಜನಿಕರು ಪೊಲೀಸರಿಗೆ ಸಹಕಾರ ನೀಡಬೇಕು. ಬಹುತೇಕ ಮೇಲ್ಸೇತುವೆ ಸಂಚಾರ ಬಂದ್ ಮಾಡಲಾಗುತ್ತೆ. ನೆರೆಹೊರೆಯ ಅಂಗಡಿಗಳಲ್ಲಿ ಶಾಪಿಂಗ್ ಮಾಡೋದಕ್ಕೆ ಸೂಚಿಸಲಾಗಿದೆ. ವಿನಾಕಾರಣ ಒಂದು ಸ್ಥಳದಿಂದ ಕಿಲೋಮೀಟರ್ ಗಟ್ಟಲೆ ಹೋಗೋದು ಸರಿಯಲ್ಲ ಎಂದರು.
ಯಾವುದೇ ನಿಯಮ ಉಲ್ಲಂಘನೆಗೆ ಅವಕಾಶವಿಲ್ಲ. ಈ ಬಾರಿ ಯಾವುದೇ ಪಾಸ್ ಗಳನ್ನ ಕೊಡಲ್ಲ. ತಮ್ಮ ಐಡೆಂಟಿಟಿ ಕಾರ್ಡ್, ಟಿಕೆಟ್ ಸೂಕ್ತ ದಾಖಲೆ ನೀಡಿದ್ರೆ ಮಾತ್ರ ಓಡಾಡೋಕೆ ಅನುಮತಿ. ಯಾರ ಬಳಿ ಸೂಕ್ತ ದಾಖಲೆಗಳಿಲ್ವೋ ಅವರ ವಿರುದ್ಧ ಕ್ರಮ ಕೈಗೊಳ್ತಿವಿ, ಹೀಗಾಗಿ ಜನ ವಿನಾಕಾರಣ ಹೊರಗೆ ಬರಬಾರದು. ರಾತ್ರಿ ವೇಳೆ ಇಡೀ ಸಿಟಿಯನ್ನ ಬಂದ್ ಮಾಡ್ತಿವಿ. ಫ್ಲೈ ಓವರ್ ಬಂದ್ ಇರುತ್ತೆ , ಹೆವಿ ರೂಟ್ ಇರುವ ಹೈವೆಗಳು ಅನಿವಾರ್ಯತೆ ನೋಡಿ ಬಂದ್ ಮಾಡ್ತಿವಿ. ಕೆಲವೊಂದು ಗೂಡ್ಸ್ ಲಾರಿಗಳಿಗೆ ಎಮರ್ಜೆನ್ಸಿ ವಾಹನಗಳಿಗೆ ಅನುವು ಮಾಡಿಕೊಡಲಾಗುವುದು ಎಂದು ತಿಳಿಸಿದರು.