ಕನ್ನಡ ಚಿತ್ರರಂಗಕ್ಕೆ ಕಾಶೀನಾಥ್ ನೀಡಿದ ಕೊಡುಗೆ ಎಂದಿಗೂ ಮರೆಯಲಾಗದು: ಕಿಚ್ಚ ಸುದೀಪ್

ಕನ್ನಡ ಸಿನಿಮಾ ರಂಗದ ಅಪ್ರತಿಮ ನಟ ಮತ್ತು ನಿರ್ದೇಶಕ ಕಾಶಿನಾಥ್ ಪುತ್ರ ಅಭಿಮನ್ಯು ಕಾಶಿನಾಥ್ ಅಭಿನಯದ ‘ಎಲ್ಲಿಗೆ ಪಯಣ ಯಾವುದೋ ದಾರಿ’ ಚಿತ್ರದ ಟ್ರೈಲರ್ ಅನ್ನು ಕಿಚ್ಚ ಸುದೀಪ್ ಅಧಿಕೃತವಾಗಿ ಬಿಡುಗಡೆ ಮಾಡಿದರು.ನಟ ಕಾಶಿನಾಥ್ ಅವರು ಕನ್ನಡ ಚಿತ್ರರಂಗಕ್ಕೆ ನೀಡಿದ ಕೊಡುಗೆಗಳನ್ನು ಎಂದಿಗೂ ಮರೆಯುವುದಕ್ಕೆ ಸಾಧ್ಯವಿಲ್ಲ. ನಮ್ಮ ಚಿತ್ರರಂಗಕ್ಕೆ ಅವರ ಕೊಡುಗೆ ದೊಡ್ಡದು. ಅವರು ಮಾಡಿರುವುದರ ಮುಂದೆ ನಾವು ಅಭಿಮನ್ಯುಗೆ ನೀಡುತ್ತಿರುವ ಈ ಬೆಂಬಲ ಏನೇನೂ ಅಲ್ಲ, ಇದು ತುಂಬ ಚಿಕ್ಕದು. ಟ್ರೇಲರ್‌ನಲ್ಲಿ ಅಭಿಮನ್ಯು ತುಂಬ ಪ್ರಾಮಿಸಿಂಗ್ ಆಗಿ ಕಾಣಿಸಿಕೊಂಡಿದ್ದಾರೆ. ನಿರ್ದೇಶಕ ಕಿರಣ್ ಸೂರ್ಯ ಅವರ ಕೆಲಸವು ಚೆನ್ನಾಗಿದೆ” ಎಂದು ಹೇಳಿದ್ದಾರೆ.
ನಟ ಅಭಿಮನ್ಯು, ಮಾತನಾಡಿ ಈ ಸಿನಿಮಾವು ತುಂಬ ಚೆನ್ನಾಗಿ ಮೂಡಿಬಂದಿದೆ. ನಿರ್ದೇಶಕ ಕಿರಣ್ ಸೂರ್ಯ ಬಹಳ ಕಷ್ಟಪಟ್ಟು ಈ ಸಿನಿಮಾವನ್ನು ಉತ್ತಮವಾಗಿ ಕಟ್ಟಿಕೊಟ್ಟಿದ್ದಾರೆ. ಆರಂಭದಲ್ಲಿ ಯಾವ ರೀತಿ ಕಥೆಯನ್ನು ಹೇಳಿದ್ದರೋ, ಅದೇ ರೀತಿ ಸಿನಿಮಾವನ್ನು ಕಟ್ಟಿಕೊಟ್ಟಿದ್ದಾರೆ. ಅಂದುಕೊಂಡಿದ್ದಕ್ಕಿಂತ ಚೆನ್ನಾಗಿ ಮೂಡಿಬಂದಿದೆ. ಸಿನಿಮಾವನ್ನು ಪ್ರೇಕ್ಷಕರ ಎದುರು ತೋರಿಸುವುದಕ್ಕೆ ನಾವೆಲ್ಲಾ ಕಾತರದಿಂದ ಕಾಯುತ್ತಿದ್ದೇವೆ” ಎಂದರು. ನಿರ್ದೇಶಕ ಕಿರಣ್ ಎಸ್ ಸೂರ್ಯ ಮಾತನಾಡಿ, ಇಡೀ ನಿರ್ಮಾಣ ತಂಡದ ಸಮರ್ಪಣೆಯನ್ನು ಶ್ಲಾಘಿಸಿದರು. ಅವರು ಚಿತ್ರಕ್ಕೆ ಕೊಡುಗೆ ನೀಡಿದ ವಿಶೇಷ ಗೀತೆ ಹಾಡಿ ಸಿನಿಮಾಗೆ ಬೆಂಬಲ ನೀಡಿದ ಸುದೀಪ್ ಅವರಿಗೆ ಧನ್ಯವಾದ ಅರ್ಪಿಸಿದರು.
ಅಕ್ಟೋಬರ್ 25 ರಂದು ಸಿನಿಮಾ ಬಿಡುಗಡೆಯಾಗಲಿದೆ ಎಂದು ಮಾಹಿತಿ ನೀಡಿದರು. ಅಭಿಮನ್ಯುಗೆ ನಾಯಕಿಯಾಗಿ ಸ್ಫೂರ್ತಿ ಉಡಿಮನೆ ನಟಿಸಿದ್ದಾರೆ. ‘ಎಲ್ಲಿಗೆ ಪಯಣ ಯಾವುದೋ ದಾರಿ’ ಸಿನಿಮಾವನ್ನು ಸುದರ್ಶನ ಆರ್ಟ್ಸ್ ಬ್ಯಾನರ್ ಅಡಿಯಲ್ಲಿ ಜತಿನ್ ಪಟೇಲ್ ನಿರ್ಮಾಣ ಮಾಡಿದ್ದಾರೆ. ವಿಜಯಶ್ರೀ ಕಲಬುರಗಿ, ಬಲ ರಾಜವಾಡಿ, ಶೋಭನ್, ಅಯಾಂಕ್, ರವಿತೇಜ, ಪ್ರದೀಪ್, ಅಶ್ವಿನಿ ರಾವ್, ರಿನಿ ಬೋಪಣ್ಣ, ಕಿಶೋರ್, ಪ್ರಿಯಾ ಮುಂತಾದವರು ನಟಿಸಿದ್ದಾರೆ. ಹಾಡುಗಳಿಗೆ ಪ್ರಣವ್ ರಾವ್ ಸಂಗೀತ ನಿರ್ದೇಶನ ಮಾಡಿದ್ದು, ಪ್ರಮೋದ್ ಮರವಂತೆ ಸಾಹಿತ್ಯ ಬರೆದಿದ್ದಾರೆ. ಸತ್ಯ ರಾಮ್ ಛಾಯಾಗ್ರಹಣವಿದೆ.
ಪುಣ್ಯ ಗೌಡ ಫಿಲಂ ಬ್ಯೂರೋ tv8kannada