ಮನೆಯಲ್ಲೇ ಗುಂಡು ಹಾರಿಸಿಕೊಂಡು BEO Suicide.. ಕಾರಣವೇನು?
ಬೆಂಗಳೂರಿನ ಕೊಡಿಗೆಹಳ್ಳಿಯ ಮನೆಯಲ್ಲಿ ಬಿಇಒ ಕಮಲಕರ್ ಆತ್ಮಹತ್ಯೆಗೆ ಶರಣಾಗಿದ್ದಾರೆ. ಹೆಂಡತಿ ಮಕ್ಕಳು ಮನೆಯಲ್ಲಿರುವಾಗಲೇ ಪಿಸ್ತೂಲ್ ನಿಂದ ಗುಂಡು ಹಾರಿಸಿಕೊಂಡು ಸಾವನ್ನಪ್ಪಿದ್ದಾರೆ.
ಕೊಡಿಗೆಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಮಧ್ಯಾಹ್ನ 1:30 ರ ಸುಮಾರಿಗೆ ಘಟನೆ ನಡೆದಿದೆ. ಮರಣೋತ್ತರ ಪರೀಕ್ಷೆಗಾಗಿ ಮೃತದೇಹವನ್ನು ಯಲಹಂಕ ಸರ್ಕಾರಿ ಆಸ್ಪತ್ರೆಗೆ ರವಾನಿಸಲಾಗಿದೆ.
ಶಿವಮೊಗ್ಗದ ತೀರ್ಥಹಳ್ಳಿಯ ಟೆಂಕಬೈಲಿನ ಕಮಲಾಕರ್ ಅವರು ಕಳೆದ 4 ವರ್ಷಗಳಿಂದ ಯಲಹಂಕದಲ್ಲಿ ಬಿಇಓ ಆಗಿ ಕೆಲಸ ಮಾಡುತ್ತಿದ್ದರು. ಕೊಡಿಗೆಹಳ್ಳಿಯ NTI ಲೇಔಟ್ ನಲ್ಲಿರುವ ಮನೆಯಲ್ಲಿ ಹೆಂಡತಿ ಮಕ್ಕಳು ಇರುವಾಗಲೇ ರೂಂ ಲಾಕ್ ಮಾಡಿಕೊಂಡು ಗುಂಡು ಹಾರಿಸಿಕೊಂಡಿದ್ದಾರೆ.
ಡೆತ್ ನೋಟ್ ಬರೆದಿಟ್ಟಿರೋ ಕಮಲಾಕರ್, ಅನಾರೋಗ್ಯದ ಸಮಸ್ಯೆ ಸಾಕಷ್ಟು ಕಾಡ್ತಿತ್ತು. ಇದುವರೆಗೆ 25 ಸಾವಿರಕ್ಕೂ ಹೆಚ್ಚು ಮಾತ್ರೆಗಳನ್ನ ಸೇವಿಸಿದ್ದೇನೆ. ಅನಾರೋಗ್ಯದಿಂದ ಜೀವನವೇ ಸಾಕು ಅನಿಸಿದೆ. ನಮ್ಮ ಮನೆಯವರು ತುಂಬಾ ಒಳ್ಳೆಯವರು, ಅವರಿಗೆ ತೊಂದರೆ ಕೊಡೋಕೆ ಇಷ್ಟ ಇಲ್ಲ ಎಂದು ಸಾವಿಗೆ ಕಾರಣ ಬರೆದಿಟ್ಟಿದ್ದಾರೆ.
ಕಮಲಾಕರ್ ಸಾವಿಗೆ ಡಿಡಿಪಿಐ ನಾರಾಯಣ್ ವಿಷಾದ ವ್ಯಕ್ತಪಡಿಸಿದ್ದಾರೆ. ಕಮಲಾಕರ್ ಒಳ್ಳೆಯ ಅಧಿಕಾರಿ, ಕಳೆದ ಮೂರ್ನಾಲ್ಕು ವರ್ಷಗಳಿಂದ ಬಿಇಓ ಆಗಿ ಕೆಲಸ ಮಾಡ್ತಿದ್ರು. ಈ ರೀತಿಯಾಗಿರೋದು ನಮ್ಮ ಇಲಾಖೆಗೆ ದೊಡ್ಡ ನಷ್ಟ. ಅವರಿಗೆ ಕಾಯಿಲೆ ಇರೋದ್ರ ಬಗ್ಗೆ ಈಗಲೇ ನನಗೆ ಗೊತ್ತಾಗಿದ್ದು. ಆದ್ರೆ ಈ ರೀತಿ ಮಾಡಿಕೊಳ್ತಾರೆ ಅಂತಾ ಅಂದುಕೊಂಡಿರಲಿಲ್ಲ. ಒಳ್ಳೆ ಅಧಿಕಾರಿಯನ್ನ ನಮ್ಮ ಇಲಾಖೆ ಕಳೆದುಕೊಂಡಿದೆ ಎಂದರು.