ನಿಮ್ಮ ಬಾಯಿಯ ಆರೋಗ್ಯವನ್ನು ನೀವು ಕಾಳಜಿ ವಹಿಸಬೇಕಾದರೆ ಅಥವಾ ನಿಮ್ಮ ಹಲ್ಲುಗಳನ್ನು ಪರೀಕ್ಷಿಸಬೇಕಾದರೆ ನೀವು ಏನು ಮಾಡುತ್ತೀರಿ..? ನಿಮಗೆ ಗೊತ್ತಿರುವ ಅಥವಾ ನಿಮ್ಮ ಬಳಿ ಇರುವ ದಂತ ವೈದ್ಯ(Dentist)ರನ್ನು ಭೇಟಿ ಮಾಡುತ್ತೀರಿ. ಅದೇ ರೀತಿ, ಪ್ರಾಣಿ(Animals)ಗಳಿಗೂ ವಿಶೇಷ ದಂತವೈದ್ಯರು(Special Dentist ) ಇದ್ದಾರೆ ಎಂಬುದು ನಿಮಗೆ ತಿಳಿದಿದೆಯೇ..? ಪಶುವೈದ್ಯರು ಸಾಕಷ್ಟು ಸಾಮಾನ್ಯವಾಗಿದ್ದರೂ, ಪ್ರಾಣಿಗಳ ದಂತವೈದ್ಯರ ಬಗ್ಗೆ ಹಲವರಿಗೆ ಗೊತ್ತಿರುವುದಿಲ್ಲ. ಯುನೈಟೆಡ್ ಕಿಂಗ್‌ಡಮ್(United Kingdom)ನಲ್ಲಿನ ಹಿಮಕರಡಿಯೊಂದು ತನ್ನ ಬಾಯಿಯಲ್ಲಿ ಬಾವು ಬೆಳೆಯುವುದನ್ನು ತಡೆಯಲು 1 ಗಂಟೆ ಅವಧಿಯ ರೂಟ್ ಕೆನಾಲ್(Root Canal Treatment) ಚಿಕಿತ್ಸೆಗೆ ಒಳಗಾಗಬೇಕಾಯಿತು. ಹೌದು, ಮನುಷ್ಯರಿಗೆ ಮಾತ್ರವಲ್ಲ, ಹಿಮ ಕರಡಿಗೂ ಇಲ್ಲಿ ರೂಟ್ ಕೆನಾಲ್ ಚಿಕಿತ್ಸೆ ಮಾಡಲಾಗಿದೆ.
ಹಲ್ಲು ನೋವಿನಿಂದ ಬಳಲುತ್ತಿದ್ದ ಹಿಮಕರಡಿ
ಯುಕೆಯ ಯಾರ್ಕ್‌ಷೈರ್ ವೈಲ್ಡ್‌ಲೈಫ್ ಪಾರ್ಕ್‌ನಲ್ಲಿರುವ 3 ವರ್ಷದ ಸಿಸು ಎಂಬ ಕರಡಿ ಉಲ್ಲಾಸ ಹಾಗೂ ಪ್ರೀತಿ ಭರಿತ ಜೀವಿ ಎಂದು ತಿಳಿದುಬಂದಿದೆ. ಆದರೆ ಬರಬರುತ್ತಾ ಅದರ ವರ್ತನೆಯಲ್ಲಿ ಬದಲಾವಣೆ ಕಂಡುಬಂದಿದೆ.
ಅದು ಹೆಚ್ಚಿನ ಸಮಯದಿಂದ ಇರಿಟೇಟ್ ಆಗಲು ಪ್ರಾರಂಭಿಸುತ್ತಿತ್ತು, ಮತ್ತು ಕೆಲವು ರೀತಿಯ ನೋವು ಕಾಣಿಸಿಕೊಂಡಂತೆ ಕಾಣುತ್ತಿತ್ತು ಎಂದು ತಿಳಿದುಬಂದಿದೆ. ಬಳಿಕ, ಹತ್ತಿರದಿಂದ ನೋಡಿದಾಗ, ವೈಲ್ಡ್‌ಲೈಫ್ ಪಾರ್ಕ್‌ನ ಸಿಬ್ಬಂದಿ ಅದರ 3 ಇಂಚಿನ ಕೋರೆಹಲ್ಲು ಮುರಿದುಹೋಗಿರುವುದನ್ನು ಅರಿತುಕೊಂಡರು ಎಂದು ಸ್ಕೈನ್ಯೂಸ್ ವರದಿ ಮಾಡಿದೆ. ಇದರ ನಂತರ, ಕರಡಿಗೆ ಚಿಕಿತ್ಸೆ ನೀಡಲು ಪ್ರಾಣಿಗಳ ದಂತವೈದ್ಯರಾದ ಡಾ. ಪೀಟರ್ ಕೆರ್ಟೆಸ್ಜ್ ಅವರನ್ನು ಕರೆಸಲಾಯಿತು.