ರಾಜ್ಯಸುದ್ದಿ

2.2 ದಶಲಕ್ಷ ಖಾತೆಗಳನ್ನು ಬ್ಯಾನ್​ ಮಾಡಿದ ವಾಟ್ಸ್ಆ್ಯಪ್​..ಯಾಕಾಗಿ?

WhatsApp ಮತ್ತೆ ಸುದ್ದಿಯಲ್ಲಿದೆ. ಈ ಬಾರಿ ಯಾವುದೇ ಹೊಸ ವೈಶಿಷ್ಟ್ಯದ ವಿಚಾರವಾಗಿ ಸುದ್ದಿಯಾಗಿಲ್ಲ. ಬದಲಾಗಿ ತನ್ನ ಬಳಕೆದಾರರನ್ನು ನಿಷೇಧ ಮಾಡಿರುವ ವಿಚಾರವಾಗಿ ಸುದ್ದಿಯಾಗಿದೆ. ಸುಮಾರು 2.2 ದಶಲಕ್ಷ​ ಖಾತೆಗಳನ್ನು ವಾಟ್ಸ್​ಆ್ಯಪ್​ ಬ್ಯಾನ್​ ಮಾಡುವ ಮೂಲಕ ಅಚ್ಚರಿಗೆ ಕಾರಣವಾಗಿದೆ.

ವಾಟ್ಸ್​ಆ್ಯಪ್​ ವಿಶ್ವದ ಅತಿ ದೊಡ್ಡ ಅಪ್ಲಿಕೇಶನ್ ಆಗಿದೆ. ಆದರೆ ಇದು ತನ್ನ ಚಂದಾದಾರರ ಮೇಲೆ ಕೊಡಲಿ ಏಟು ಹಾಕಲು ಬಂದಾಗ ಹಿಂಜರಿಯುವುದಿಲ್ಲ. ಅದರಂತೆ ಇದೀಗ 2.2 ಮಿಲಿಯನ್ ಬಳಕೆದಾರರನ್ನು ಕಡಿತಗೊಳಿಸಿದೆ. ಸೆಪ್ಟೆಂಬರ್ ತಿಂಗಳಲ್ಲಿ ವಾಟ್ಸ್ಆ್ಯಪ್ ಈ ನಿಷೇಧ ಪ್ರಕ್ರಿಯೆಯನ್ನು ತೆಗೆದುಕೊಂಡಿದೆ ಎಂದು ಇತ್ತೀಚಿನ ಮಾಸಿಕ ವರದಿ ತಿಳಿಸಿದೆ. ನಿಷೇಧಕ್ಕೊಳಗಾದ ಎಲ್ಲಾ ವಾಟ್ಸ್​ಆ್ಯಪ್​ ಖಾತೆಗಳು ನಿಯಮಗಳನ್ನು ಉಲ್ಲಂಘಿಸಿದೆ. ಈ ವಿಚಾರವಾಗಿ ವಾಟ್ಸ್​ಆ್ಯಪ್ ಕೆಲವು​ ಖಾತೆಗಳನ್ನು ನಿಷೇಧ ಮಾಡಿದೆ.

ವಾಟ್ಸ್​ಆ್ಯಪ್ ತನ್ನ ಬಳಕೆದಾರರ ಸುರಕ್ಷತೆಗೆ ಗಮನ ಹರಿಸುತ್ತಿದೆ. ಆದರೆ ಇದಕ್ಕೆ ವಿರುದ್ಧವಾಗಿ ಕಾರ್ಯನಿರ್ವಹಿಸುವ ಚಂದಾದಾರರ ಮೇಲೆ ವಿಷೇಧ ವಿಧಿಸಿದೆ. ಈ ಬಗ್ಗೆ ವಕ್ತಾರರೊಬ್ಬರು ಮಾತನಡಿ, “WhatsApp ನಿಂದನೆಯನ್ನು ತಡೆಗಟ್ಟುವ ಉದ್ಯಮದ ಮುಂಚೂಣಿಯಲ್ಲಿದೆ, ಎಂಡ್-ಟು-ಎಂಡ್ ಎನ್‌ಕ್ರಿಪ್ಟ್ ಮಾಡಿದ ಸಂದೇಶ ಸೇವೆಗಳ ಬಗ್ಗೆ ಹೆಚಚಿನ ಗಮನ ಹರಿಸುತ್ತಿದೆ. ವರ್ಷಗಳಲ್ಲಿ, ನಮ್ಮ ಬಳಕೆದಾರರನ್ನು ನಮ್ಮ ಪ್ಲಾಟ್‌ಫಾರ್ಮ್‌ನಲ್ಲಿ ಸುರಕ್ಷಿತವಾಗಿರಿಸಲು ನಾವು ಕೃತಕ ಬುದ್ಧಿಮತ್ತೆ ಮತ್ತು ಇತರ ಅತ್ಯಾಧುನಿಕ ತಂತ್ರಜ್ಞಾನ, ಡೇಟಾ ವಿಜ್ಞಾನಿಗಳು, ತಜ್ಞರು ಮತ್ತು ಇನ್ನಿತರ ಪ್ರಕ್ರಿಯೆಗಳಲ್ಲಿ ಸತತವಾಗಿ ಹೂಡಿಕೆ ಮಾಡಿದ್ದೇವೆ” ಎಂದಿದ್ದಾರೆ.

Related Articles

Leave a Reply

Your email address will not be published. Required fields are marked *

Back to top button