ಯಲ್ಲಮ್ಮ ಜಿನ್ನಾಪೂರ ಗೆ ಜಾನಪದ ಅಕಾಡೆಮಿ ಪ್ರಶಸ್ತಿ

ಮಸ್ಕಿ : ತಾಲ್ಲೂಕಿನ ಹಾಲಾಪೂರ ಗ್ರಾಮ ಪಂಚಾಯತಿ ವ್ಯಾಪ್ತಿಯ ಜಿನ್ನಾಪೂರ ಗ್ರಾಮದ ಯಲ್ಲಮ್ಮ ಗಂಡ ಮಹಾದೇವಪ್ಪ ಇವರಿಗೆ 2024 ರ ಕರ್ನಾಟಕ ಜಾನಪದ ಅಕಾಡೆಮಿ ಪ್ರಶಸ್ತಿ ಪುರಸ್ಕೃತರಾಗಿದ್ದಾರೆ.ಇವರು ಜಿನ್ನಾಪೂರ ಗ್ರಾಮದವರಾಗಿದ್ದು ತಮ್ಮ ಚಿಕ್ಕ ವಯಸ್ಸಿನಿಂದ ಯಾವುದೇ ಗುರುಗಳ ಸಹಾಯವಿಲ್ಲದೆ ಮತ್ತು ಎಲ್ಲಿ ಹೋಗಿ ಕಲಿತಿಲ್ಲ ದೇವರ ಕೊಟ್ಟ ಬಹುದೊಡ್ಡ ಕಾಣಿಕೆಯಾಗಿ ಯಲ್ಲಮ್ಮ ಗಂಡ ಮಹಾದೇವಪ್ಪ ನವರು ಜಾನಪದ ಸೊಗಡಿನ ಸೊಬನ ಪದಗಳನ್ನು ಕರಗತವಾಗಿ ಹಾಡುವುದರ ಮೂಲಕ ಯಾವುದೇ ಸಾಹಿತ್ಯ ,ಲಿಪಿ ಇಲ್ಲದ ಪದಗಳನ್ನು ಮಾನ್ವಿ, ಸಿರವಾರ,ಗಂಗಾವತಿ ಇನ್ನೂ ಮೂಂತಾದ ಸ್ಥಳಗಳಿಗೆ ಹೋಗಿ ಹಾಡಿ ನಿಜಕ್ಕೂ ಪ್ರಶಂಸೆಗೆ ಪಾತ್ರರಾಗಿದ್ದಾರೆ,ಇಂದು ಅಳಿದು ಅಂಚಿನಲ್ಲಿರುವ ಜಾನಪದ ಸಾಹಿತ್ಯ ಇಂತಹ ಗ್ರಾಮೀಣ ಭಾಗದ ಪ್ರತಿಭೆಗಳಿಂದ ಉಳಿದಿರುವುದು ಹೆಮ್ಮೆಯ ವಿಚಾರ ಹಾಗೆ ಪ್ರಶಸ್ತಿ ಭಾಜನರಾದ ಯಲ್ಲಮ್ಮ ನವರಿಗೆ ಕರ್ನಾಟಕ ಜಾನಪದ ಅಕಾಡೆಮಿ ಸದಸ್ಯರಾದ ರಂಗಪ್ಪ ಮಾಸ್ತರ ಕರಡಕಲ್,ಶರಣಪ್ಪ ನಾಯಕ ಕರಡಕಲ್ ಜಿಲ್ಲಾ ಸಂಚಲಕರು, ಬಸನಗೌಡ ಪೂಜಾರಿ ಜಿನ್ನಾಪೂರ ಹಾಗೂ ಮಸ್ಕಿ ತಾಲ್ಲೂಕಿನ ಅನೇಕ ಕಲಾವಿದರು ಅಭಿನಂದನೆ ಸಲ್ಲಿಸಿದ್ದಾರೆ.