ರಾಜ್ಯಸುದ್ದಿ

ಮೈಸೂರು ಅರಮನೆಯಂತೆ ಬೆಳಕಿನ ಚಿತ್ತಾರದಲ್ಲಿ ಕಂಗೊಳಿಸಿದ ವಿಧಾನಸೌಧ: ಕಾರಣ ಇಲ್ಲಿದೆ..!

Vidhanasoudha Lighting today: ಮೈಸೂರು ಅರಮನೆ(mysore palace) ಕರ್ನಾಟಕದ ಸಾಂಸ್ಕೃತಿಕ, ಐತಿಹಾಸಿಕ ಸಂಕೇತ. ಮೈಸೂರು ಅರಮನೆ ದೀಪಾಲಂಕಾರದಲ್ಲಿ ಕಂಗೊಳಿಸುವುದನ್ನು ಪ್ರತಿ ಕನ್ನಡಿಗರು ಕಣ್ತುಂಬಿಕೊಂಡಿರುತ್ತಾರೆ. ಆದರೆ ಇಂದು ಬೆಂಗಳೂರಿನಲ್ಲಿರುವ ವಿಧಾನಸೌಧ(Vidhanasoudha ) ದೀಪಾಲಂಕಾರದಲ್ಲಿ ಕಣ್ಣು ಕೊರೈಸಿತು.

ಬಣ್ಣ ಬಣ್ಣನ ಲೈಟಿಂಗ್ ನಲ್ಲಿ ಮಿಂಚಿದ ವಿಧಾನಸೌಧವನ್ನು ಬೆಂಗಳೂರಿಗರು ಇಂದು ಕಣ್ತುಂಬಿಕೊಂಡರು. ಈ ಸಂಭ್ರಮಕ್ಕೆ ಕಾರಣವಾಗಿದ್ದು ಕನ್ನಡ ರಾಜ್ಯೋತ್ಸವ.

ನಾಳೆ ಕನ್ನಡದ ಹಬ್ಬ, ಕನ್ನಡಿಗರ ಹಬ್ಬ. ನಾಳೆ ನವೆಂಬರ್ 1 ಕನ್ನಡ ರಾಜ್ಯೋತ್ಸವದ ದಿನ. ಅದಕ್ಕಾಗಿ ನಾಡಿನ ಶಕ್ತಿಸೌಧಕ್ಕೆ ವಿಶೇಷ ಲೈಟಿಂಗ್ ವ್ಯವಸ್ಥೆ ಮಾಡಲಾಗಿದೆ.

66ನೇ ಕನ್ನಡ ರಾಜ್ಯೋತ್ಸವದ ಹಿನ್ನೆಲೆಯಲ್ಲಿ ವಿಧಾನಸೌಧಕ್ಕೆ ವಿದ್ಯುತ್ ದೀಪಾಲಂಕಾರ ಮಾಡಲಾಗಿದ್ದು, ನೋಡುಗರ ಕಣ್ಮನ ಸೆಳೆಯಿತು.

Related Articles

Leave a Reply

Your email address will not be published. Required fields are marked *

Back to top button