Rocking Star Yash: ಯಶ್, ಈ ಹೆಸರು ಕೇಳಿದ್ರೆ ಸಾಕು ಮೈಂಡ್ನಲ್ಲಿ ಸಲಾಂ ರಾಕಿ ಭಾಯ್, ಸಲಾಂ ರಾಕಿ ಭಾಯ್ ಅನ್ನುವ ಹಾಡಿನ ಸಾಲು ಗುನುಗುತ್ತೆ. ಯಶ್ ಕನ್ನಡ ಚಿತ್ರರಂಗದ ಸೂಪರ್ ಸ್ಟಾರ್. ಕೆಜಿಎಫ್ ಚಿತ್ರದ ಮೂಲಕ ಪ್ಯಾನ್ ಇಂಡಿಯಾ ಸ್ಟಾರ್ ಆದವರು ರಾಕಿ ಭಾಯ್. ಬೇರೆ ದೇಶಗಳಲ್ಲೂ ಕನ್ನಡ ಚಿತ್ರಗಳಿಗೆ ಡಿಮ್ಯಾಂಡ್ ತಂದುಕೊಟ್ಟಿದ್ದು ನಮ್ಮ ರಾಕಿ. ಬೇರೆ ಭಾಷೆ ಚಿತ್ರಗಳು ಕನ್ನಡ ಚಿತ್ರರಂಗದತ್ತ ತಿರುಗಿ ನೋಡಿ ಬಾಯಿ ಮೇಲೆ ಬೆರೆಳು ಇಟ್ಟುಕೊಳ್ಳುವಂತೆ ಮಾಡಿದ್ದು, ಇದೇ ನಮ್ಮ ರಾಕಿ.
“ನಾನು ಬರೋ ವರೆಗೂ ಮಾತ್ರ ಬೇರೆ ಅವರ ಹವಾ, ನಾನ್ ಬಂದ್ಮೇಲೆ ನನದೆ ಹವಾ” ಅಂತ ಡೈಲಾಗ್ ಹೊಡೆದು ಅದನ್ನ ಸಾಬೀತು ಮಾಡಿದರು ರಾಕಿಂಗ್ ಸ್ಟಾರ್ ಯಶ್. ಇವಾಗ ಯಶ್ ಏನೇ ಮಾಡಿದರು ಅದು ಬ್ರೇಕಿಂಗ್ ನ್ಯೂಸ್. ಇದೀಗ ರಾಕಿ ಬಾಯ್ ಮುಂಬೈನ ಬೀದಿಗಳಲ್ಲಿ ಕಾಣಿಸಿಕೊಂಡಿದ್ದಾರೆ. ನೇರವಾಗಿ ತಮ್ಮ ಅಭಿಮಾನಿಗಳನ್ನ ತುಂಬಾ ಕೂಲ್ ಆಗಿ ಭೇಟಿ ಮಾಡಿದ್ದಾರೆ. ನೆಚ್ಚಿನ ನಟನನ್ನು ಕಂಡ ಫ್ಯಾನ್ಸ್, ಹುಚ್ಚೆದ್ದು ಕುಣಿಯುತ್ತಿರುವ ವಿಡಿಯೋಗಳು ವೈರಲ್ ಆಗಿದೆ.
ರಾಕಿಂಗ್ ಸ್ಟಾರ್ ಯಶ್ ಕೆಜಿಎಫ್-2 ಸಿನಿಮಾ ಶೂಟಿಂಗ್ ಬಳಿಕ ತಮ್ಮ ಫ್ಯಾಮೀಲಿ ಜತೆ ಟೈಂ ಸ್ಪೆಂಡ್ ಮಾಡುತ್ತಿದ್ದರು. ಮಗಳು ಐರಾ, ಮಗ ಆಯ್ರಾ ಯಥರ್ವ್ ಹಾಗೂ ಪತ್ನಿ ರಾಧಿಕಾ ಪಂಡಿತ್ ಜೊತೆಯಲ್ಲಿ ಸಮಯ ಕಳೆಯುತ್ತಾ ಎಂಜಾಯ್ ಮಾಡುತ್ತಿದ್ದರು. ಆದರೆ ಕಳೆದ ವಾರ ದಿಢೀರ್ ಮುಂಬೈ ಕಡೆ ಪ್ರಯಾಣ ಬೆಳೆಸಿದ್ದರು. ಇದೀಗ ಮತ್ತೊಮ್ಮೆ ಮುಂಬೈಗೆ ಯಶ್ ಭೇಟಿ ನೀಡಿದ್ದಾರೆ. ಅಲ್ಲೂ ಯಶ್ ಹವಾ ಜೋರಾಗಿದೆ. ಕೆಲ ದಿನಗಳಿಂದ ಯಶ್ ಮುಂಬೈ ಹಾಗೂ ಹೈದರಾಬಾದ್ ಎರಡು ಕಡೆ ಓಡಾಡುತ್ತಿದ್ದಾರೆ. ಮುಂಬೈನಲ್ಲಿ ರಾಕಿ ಭಾಯ್ ಕಂಡ ಫ್ಯಾನ್ಸ್, ಸೆಲ್ಫಿ ಕ್ಲಿಕ್ಕಿಸಿಕೊಳ್ಳಲು ಮುಗಿಬಿದ್ದರು.