ಕಾಂಗ್ರೆಸ್ ಗುಲಾಮಗಿರಿಯ ಪಕ್ಷ, ನಮ್ಮದು ದೇಶಭಕ್ತಿಯ ಪಕ್ಷ: ಸಿಎಂ ಬಸವರಾಜ ಬೊಮ್ಮಾಯಿ
ಹುಬ್ಬಳ್ಳಿ: ಕೋವಿಡ್ ನಿಂದಾಗಿ ಸಂಕಷ್ಟ ಅನುಭವಿಸಿದ ಜನರು ಇತ್ತೀಚಗಷ್ಟೇ ಒಂದಿಷ್ಟು ಸುಧಾರಿಸಿಕೊಳ್ಳುತ್ತಿದ್ದಾರೆ. ಹೀಗಾಗಿ ಜನರಿಗೆ ತೊಂದರೆ ಕೊಡುವಂತಹ ಭಾರತ ಬಂದ್ ಬೇಡ ಎಂದು ಹೋರಾಟಗಾರರಿಗೆ ಮನವಿ ಮಾಡಿದ್ದೇನೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.
ಸೋಮಾವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೋವಿಡ್ ಪರಿಣಾಮ ಎಲ್ಲರೂ ಸಂಕಷ್ಟಕ್ಕೆ ಸಿಲುಕಿದ್ದಾರೆ. ಈಗಷ್ಟೆ ಒಂದಿಷ್ಟು ವ್ಯಾಪಾರ ವಹಿವಾಟು ಆರಂಭಿಸಿದ್ದಾರೆ. ಹೀಗಾಗಿ ಜನರಿಗೆ ತೊಂದರೆಯಾಗುವಂತಹ ಕಲಸ ಮಾಡಬಾರದು. ಭಾರತ ಬಂದ್ ಬದಲಾಗಿ ವೈಚಾರಿಕ ಭಿನ್ನಾಭಿಪ್ರಾಯಗಳನ್ನು ಬೇರೆ ರೀತಿಯಲ್ಲಿ ಜನರಿಗೆ ಮಾಡುವಂತೆ ಮನವಿ ಮಾಡಿರುವುದಾಗಿ ತಿಳಿಸಿದರು.
ಕಾಂಗ್ರೆಸ್ ಒಂದು ಗುಲಾಮಗಿರಿ ಪಕ್ಷ. ಅವರಿಗೆ ದೇಶಭಕ್ತಿ ಉಗ್ರಗಾಮಿಗಳು ಕಂಡಂತೆ ಆಗುತ್ತಿದೆ. ನಮ್ಮದು ದೇಶಭಕ್ತಿ ಪಕ್ಷ. ಇಲ್ಲಿಯವರೆಗೆ ಮೆಕಾಲೆ ಶಿಕ್ಷಣ ಪದ್ದತಿಯನ್ನು ಅನುಸರಿಸಿಕೊಂಡು ಬಂದಿದ್ದಾರೆ. ಇದೇ ಗುಲಾಮಗಿರಿಯನ್ನು ಕಾಂಗ್ರೆಸ್ ನಾಯಕರು ಬಯಸುತ್ತಿದ್ದಾರೆ ಎಂದರು.
ಪ್ರಧಾನಿ ನರೇಂದ್ರ ಮೋದಿ ಅವರು ಆದರೆ ಹೊಸ ಶಿಕ್ಷಣ ನೀತಿ ಮೂಲಕ ಜಗತ್ತಿನಲ್ಲಿ ದೇಶ ನಿಲ್ಲುವಂತಹ ಕಾರ್ಯಕ್ಕೆ ಮುಂದಾಗಿದ್ದಾರೆ. ಸಿದ್ದರಾಮಯ್ಯ ಅವರು ಹೇಳಿಕೆ ನೋಡಿದರೆ ಬಹಳ ಹತಾಶರಾಗಿದ್ದಾರೆ ಎನ್ನುವುದು ಸ್ಪಷ್ಟವಾಗಿದೆ. ಅವರು ಮುಖ್ಯಮಂತ್ರಿಗಿದ್ದವರು. ಅವರು ವಹಸಿಕೊಂಡ ಸ್ಥಾನಕ್ಕೆ ಈ ರೀತಿಯ ಮಾತುಗಳು ತಕ್ಕದಾದವಲ್ಲ ಎಂದರು.