ಮಸ್ಕಿ ತಾಲೂಕು ಕಚೇರಿಯಲ್ಲಿ ದಲ್ಲಾಳಿಗಳ ಹಾವಳಿ

ಮಸ್ಕಿ : ಪಟ್ಟಣದ ತಾಲೂಕು ಕಚೇರಿಯಲ್ಲಿ ಮಧ್ಯವರ್ತಿಗಳ ಕಾರು ಬಾರು ಹೆಚ್ಚಿದ್ದು, ಸಾರ್ವಜನಿಕ ವಲಯಗಳಲ್ಲಿ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ.ರಾಜ್ಯ ಮತ್ತು ಕೇಂದ್ರ ಸರ್ಕಾರಗಳ ವಿವಿಧ ಯೋಜನೆಗಳಾದ ವಿಧವಾ ವೇತನ, ಸಂಧ್ಯಾ ಸುರಕ್ಷಾ, ಅಂಗವಿಕಲ ವೇತನ, ಪಡಿತರ ಚೀಟಿ, ಜಾತಿ ಮತ್ತು ಆದಾಯ ಪ್ರಮಾಣ ಪತ್ರ ಹಾಗೂ ಶವ ಸಂಸ್ಕಾರ ಸಹಾಯ ಧನ ಸೇರಿದಂತೆ ಇನ್ನಿತರೇ ಯೋಜನೆಗಳಿಗೆ ಅರ್ಹ ಫಲಾನುಭವಿ ನಾಗರಿಕರು ಅರ್ಜಿ ಹಾಕಿದರೆ ವಿಳಂಬವಾಗುವುದು ಇಲ್ಲದೆ, ವಜಾ ಆಗುವುದು ಈ ಕಚೇರಿ ಯಲ್ಲಿ ನಡೆಯುವ ಸಾಮಾನ್ಯ ಪ್ರಕ್ರಿಯೆ.ಆದರೆ ಸಾರ್ವಜನಿಕರು ಇವುಗಳ ಉಸಾ ಬರಿ ಯಾರಿಗೆ ಬೇಕೆಂದು ಈಗಿನ ತಾಲೂಕು ರಾಜಸ್ವ ಮತ್ತು ಗ್ರಾಮ ಲೆಕ್ಕಾಧಿ ಕಾರಿಗಳ ಕಚೇರಿಗಳಲ್ಲಿ ಸದಾ ಅಧಿಕಾರಿ ಗಳನ್ನು ನಾಚಿಸುವಂತೆ ವೀರಾಜಮಾನರಾಗಿ ಕುಳಿತುಕೊಳ್ಳುವ ಮಧ್ಯವರ್ತಿಗಳಿಗೆ ದಾಖಲೆಗಳನ್ನು ಒಪ್ಪಿಸಿಬಿಟ್ಟರಾಯಿತು. ಕೆಲವೇ ದಿನಗಳು ಅಥವಾ ಅವಧಿಯಲ್ಲಿ ಆದೇಶಗಳ ಪ್ರತಿಗಳು ಕೈಸೇರುತ್ತವೆ. ಅಷ್ಟು ಶೀಘ್ರದಲ್ಲಿ ದಾಖಲೆ ತಂದುಕೊಡಬಲ್ಲ ನಿಸ್ಸೀಮ ಮಧ್ಯವರ್ತಿಗಳು ಇಲ್ಲಿದ್ದು, ತಾಲೂಕು ಕಚೇರಿ ಆವರಣದಲ್ಲಿರುವ ಪಡಸಾಲೆಯಲ್ಲಿ ವಿವಿಧ ವಿಭಾಗಗಳ ಗಣಕೀ ಕೃತ ಘಟಕಗಳಲ್ಲಿ ನಿತ್ಯ ವಿವಿಧ ಯೋಜನೆ ಗಳನ್ವಯ ನೂರಾರು ಜನರು ಅರ್ಜಿಗಳನ್ನು ಹಾಕಲು ಸರತಿ ಸಾಲಿನಲ್ಲಿ ಕಾದಿರುತ್ತಾರೆ. ಆದರೆ ಇದೇ ಮಧ್ಯವರ್ತಿಗಳು ರಾಜಾರೋಷವಾಗಿ ಕಂಪ್ಯೂಟರ್ ಆಪರೇಟರ್‌ಗಳ ಛೇಂಬರ್‌ಗಳಿಗೆ ನೇರ ಪ್ರವೇಶಿಸುವ ಮೂಲಕ ತಮ್ಮ ಕೆಲಸಗಳನ್ನು ಮುಗಿಸಿಕೊಳ್ಳಬಲ್ಲ ಚಾಕ ಚಕ್ಯತೆ ಉಳ್ಳವರು ಎಂಬುದು ಗುಟ್ಟಾಗಿ ಉಳಿದಿಲ್ಲ.
ಮಧ್ಯವರ್ತಿಗಳಿಂದ ಹಣ ಪಡೆದು ಅಧಿಕಾರಿಗಳು ಸಾರ್ವಜನಿಕರ ಕೆಲಸ ಮಾಡಿ ಕೊಡುತ್ತಿದ್ದಾರೋ, ಇಲ್ಲವೋ ಅಥವಾ ತಮ್ಮ ವೈಯಕ್ತಿಕ ಕೆಲಸಗಳಿಗೆ ಮಧ್ಯವರ್ತಿಗಳ ಕೃಪಾಕಟಾಕ್ಷಬೇಕೆಂದು ಪರೋಕ್ಷ ವಾಗಿ ಬೆಂಬಲಿಸುತ್ತಿದ್ದಾರೋ ತಿಳಿಯದಂತಾಗಿದ್ದು, ರಾಜಕೀಯ ಪ್ರಭಾವ ದಿಂದ ತಮ್ಮ ಕೆಲಸಕ್ಕೆ ಕುತ್ತು ಬರುತ್ತದೆ ಎಂಬ ಭಯದಿಂದ ಮೌನಕ್ಕೆ ಶರಣಾಗಿ ದ್ದಾ ರೆಯೇ ಎಂಬ ಅನುಮಾನ ಕಾಡುತ್ತಿದೆ.ಒಟ್ಟಿನಲ್ಲಿ ಮಧ್ಯವರ್ತಿಗಳ ಹಾವಳಿಯಿಂದ ಬಡವರು, ಪ್ರಜ್ಞಾವಂತರು ನೇರ ವಾಗಿ ಸರ್ಕಾರಿ ಕೆಲಸಗಳನ್ನು ಮಾಡಿಸಿಕೊಳ್ಳಲು ಹೆಣಗುವಂತಾಗಿದ್ದು, ನಿಷ್ಠಾವಂತಹ ಅಧಿಕಾರಿಗಳು ಇಂತಹ ಮಧ್ಯವರ್ತಿ ಗಳಿಂದ ಸಾಕಷ್ಟು ನೋವು ತಿನ್ನುವುದರೊಂದಿಗೆ ಮೇಲಧಿಕಾರಿಗಳ ಬಗ್ಗೆಯೂ ಆಸಹನೆ ತೋರುತ್ತಿದ್ದಾರೆ. ಆಳವಾಗಿ ಬೇರೂರಿಸುವ ಈ ಮಧ್ಯವರ್ತಿಗಳ ಹಾವಳಿ ನಿಯಂತ್ರಿಸದಿದ್ದಲ್ಲಿ ಮುಂದೊಂದು ದಿನ ಅಧಿಕಾರಿಗಳು ನಗೆಪಾಟಲಿ ಗೀಡಾದರೂ ಆಶ್ಚರ್ಯವಿಲ್ಲ. ಇದಕ್ಕೂ ಮುನ್ನ ಅಧಿಕಾರಿಗಳು ಎಚ್ಚೆತ್ತುಕೊಳ್ಳಬೇಕೆ ನ್ನುವುದು ಸಾರ್ವಜನಿಕರ ಆಶಯ.
(ಹೇಳಿಕೆ- .ತಹಶಿಲ್ದಾರರ ಕಾರ್ಯಾಲಯ ದಲ್ಲಿ ಬ್ರೋಕರ್ ಗಳ ಹಾವಳಿ ಬಹಳ ಇದೆ ಸಂಬಂಧಿಸಿದ ಅಧಿಕಾರಿಗಳು ಅವರ ವಿರುದ್ಧ ಕ್ರಮ ಕೈಗೊಳ್ಳಲ ಬೇಕು.- ಮಲ್ಲಿಕ್ ಕೂಠಾರಿ ಕನ್ನಡ ಸೇನೆ ತಾಲೂಕು ಅಧ್ಯಕ್ಷರು ಮಸ್ಕಿ )
(ಹೇಳಿಕೆ – ತಹಶಿಲ್ದಾರರ ಕಛೇರಿಯಲ್ಲಿ ಮಧ್ಯವರ್ತಿ ಹಾವಳಿಯನ್ನು ತಡೆಗಟ್ಟಲು ಕ್ರಮ ತೆಗೆದು ಕೊಳಾಗಿದೆ.ಯಾರು ಕೂಡ ಮಧ್ಯವರ್ತಿ ಮುಖಾಂತರ ಅರ್ಜಿಯನ್ನು ಗಳನ್ನು ನೀಡಿದೆ ನೇರವಾಗಿ ಕಛೇರಿಯಲ್ಲಿ ಅರ್ಜಿಯನ್ನು ಸಲ್ಲಿಸಿ .- ಅಶೋಕ ಪವಾರ್ ಗ್ರೇಡ್ ೨ ತಹಶಿಲ್ದಾರರ ಮಸ್ಕಿ)
ವರದಿ : ಸಿದ್ದಯ್ಯ ಸ್ವಾಮಿ ಹೆಸರೂರು tv8kannada ಮಸ್ಕಿ