ರಾಜ್ಯ

ಶ್ರೀ ಗುರುಮಹಾಕಾಲೇಶ್ವರ ದೇವರ ಬ್ರಹತ್ ಎಕಶಿಲಾ ಮೂರ್ತಿಯ ಪ್ರತಿಷ್ಠಾ ಬ್ರಹ್ಮಕಲಶ ಮಹೋತ್ಸವದ ಆಮಂತ್ರಣ ಪತ್ರಿಕೆ ಬಿಡುಗಡೆ

ಕಾರ್ಕಳ : ಸುಕ್ಷೇತ್ರ ಗುರುಪುರ ಪಲ್ಗುಣಿ ನದಿ ತಟದ ಶ್ರೀ ಗುರುಮಹಾಕಾಲೇಶ್ವರ ದೇವರ ಬ್ರಹತ್ ಎಕಶಿಲಾ ಮೂರ್ತಿಯ ಪ್ರತಿಷ್ಠಾ ಬ್ರಹ್ಮಕಲಶ ಮಹೋತ್ಸವದ ಆಮಂತ್ರಣಗೋಳಿದಡಿಗುತ್ತುನಲ್ಲಿ ನಿರ್ಮಾಣಗೊಂಡಿರುವ ದಕ್ಷಿಣ ಭಾರತದಲ್ಲಿಯೇ ಪ್ರಪ್ರಥಮವಾದ ಮೇ೨೫ ರಿಂದ ೨೭ ರವರೆಗೆ ನಡೆಯಲಿರುವ ಶ್ರೀಗುರುಮಹಾಕಾಲೇಶ್ವರ ದೇವರ ಬ್ರಹತ್ ಎಕಶಿಲಾ ಮೂರ್ತಿಯ ಪ್ರತಿಷ್ಠಾ ಬ್ರಹ್ಮಕಲಶ ಮಹೋತ್ಸವದ ಆಮಂತ್ರಣ ಪತ್ರಿಕೆ ಮತ್ತು ಪಂಚಕಲ್ಯಾಣಯುಕ್ತ ಕಲಶ ರಶೀದಿ ಬಿಡುಗಡೆ ಸಮಾರಂಭವು ಗುರುಪುರ ಗೋಳಿದಡಿಗುತ್ತು ಸುಕ್ಷೇತ್ರ ಗುರುಪುರದಲ್ಲಿ ನಡೆಯಿತು.


ಬ್ರಹ್ಮಕಲಶ ಸಂಭ್ರಮ ಸಮಿತಿ ಅಧ್ಯಕ್ಷ, ಮಾಜಿ ಸಂಸದ ಕುಂಜಾಡಿ ಬೀಡು ನಳಿನ್ ಕುಮಾರ್ ಕಟೀಲು ಆಮಂತ್ರಣ ಪತ್ರಿಕೆ ಬಿಡುಗಡೆಗೊಳಿಸಿದರು.


ಗೋಳಿದಡಿ ಗುತ್ತು ಗುರುಪುರ ಸುಕ್ಷೇತ್ರಾಧ್ಯಕ್ಷ , ಗಡಿಕಾರರಾದ ವರ್ಧಮಾನ ಗುರುಪ್ರಸಾದ್ ಶೆಟ್ಟಿ ಪ್ರಸ್ತಾವನೆಗೈದರು.
ಗುರುಪುರ ಪ್ರಖಂಡ ಸಮಿತಿ ಅಧ್ಯಕ್ಷ ಚಂದ್ರಹಾಸ ಟಿ ಅಮೀನ್, ಹೋಟೆಲ್ ವುಡ್ ಲ್ಯಾಂಡ್ ಮಾಲಕ ವೈ ರವಿ ಭಟ್, ವಿಧಾನ ಪರಿಷತ್ ಸದಸ್ಯ ಹರಿಕ್ರಿಷ್ಣ ಬಂಟ್ವಾಳ, ಬ್ರಹ್ಮಕಲಶ ಸಂಭ್ರಮ ಸಮಿತಿ ಗೌರವ ಸಲಹೆಗಾರ ಓ ತಿರುಮಲೇಶ ಭಟ್ ಸಾಂದರ್ಭಿಕವಾಗಿ ಮಾತನಾಡಿದರು.


ಸ್ವಾಗತ ಸಮಿತಿ ಅಧ್ಯಕ್ಷ ಮಜಲಬೆಟ್ಟು ಬೀಡು ರೋಹಿತ್ ಕುಮಾರ್ ಕಟೀಲು, ಪ್ರಧಾನ ಕಾರ್ಯದರ್ಶಿ ಚೇಳ್ಯಾರುಗುತ್ತು ದಿವಾಕರ ಸಮಾನಿ ಹಿರಿಯ ನ್ಯಾಯವಾದಿ ಶಂಭು ಶರ್ಮ, ಎಣ್ಮಕಜೆ ಸುಧೀರ್ ಕುಮಾರ್ ಶೆಟ್ಟಿ,ಗುರುಪುರ ಶ್ರೀ ಗುರುಮಹಾಕಾಲೇಶ್ವರ ರಿಲೀಜಿಯಸ್ ಮತ್ತು ಚಾರೀಟೇಬಲ್ ಟ್ರಸ್ಟ್(ರಿ) ಕಾರ್ಯದರ್ಶಿ ಉಷಾ ಪ್ರಸಾದ್ ಶೆಟ್ಟಿ ಉಪಸ್ಥಿತರಿದ್ದರು, ನವೀನ್ ಕುಮಾರ್ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.

Related Articles

Leave a Reply

Your email address will not be published. Required fields are marked *

Back to top button