ರಾಯಚೂರು: ಯತ್ನಾಳ್ ಮಾತನಾಡುವ ವೇಳೆ ಮಚ್ಚು ಹಿಡಿದು ವೇದಿಕೆಗೆ ನುಗ್ಗಿದ ವ್ಯಕ್ತಿ

ಲಿಂಗಸುಗೂರು: ವಿಜಯಪುರ ಶಾಸಕ ಬಸನಗೌಡ ಪಾಟೀಲ ಯತ್ನಾಳ್ ಮಾತನಾಡುತ್ತಿದ್ದ ವೇಳೆ ವ್ಯಕ್ತಿಯೊಬ್ಬ ಮಚ್ಚು ಹಿಡಿದು ವೇದಿಕೆಗೆ ನುಗ್ಗಿದ ಘಟನೆ ಪಟ್ಟಣದಲ್ಲಿ ಭಾನುವಾರ ನೆಡದಿದೆ.
ಪಟ್ಟಣದ ಸರ್ಕಾರಿ ಪದವಿ ಪೂರ್ವ ಕಾಲೇಜು ಆವರಣದಲ್ಲಿ ಶ್ರೀರಾಮ ಸೇನೆ ಸಂಘಟನೆ ಹಮ್ಮಿಕೊಂಡಿದ್ದ ಹಿಂದೂ ಸಾಮ್ರಾಜ್ಯೋತ್ಸವ ಸಮಾರಂಭದಲ್ಲಿ ಬಸನಗೌಡ ಯತ್ನಾಳ್ ಮಾತನಾಡುತ್ತಿದ್ದ ಸಂದರ್ಭದಲ್ಲಿ, ವೇದಿಕೆ ಹಿಂಭಾಗದಿಂದ ಪ್ರವೇಶಿಸಿದ ವ್ಯಕ್ತಿ ತನ್ನ ಬೆನ್ನಲ್ಲಿ ಮಚ್ಚು ಇಟ್ಟುಕೊಂಡಿದ್ದ.

ಇದನ್ನು ಗಮನಿಸಿದ ಸಂಘಟನೆ ಕಾರ್ಯಕರ್ತರು ಎಚ್ಚೆತ್ತುಕೊಂಡು ಅವನನ್ನು ಹಿಡಿದು ಸ್ಥಳದಲ್ಲಿದ್ದ ಪೊಲೀಸರಿಗೆ ಒಪ್ಪಿಸಿದ್ದಾರೆ.
ಮಚ್ಚು ಹಿಡಿದು ಬಂದ ವ್ಯಕ್ತಿ ಹಟ್ಟಿ ಪಟ್ಟಣದ ಶ್ರೀನಿವಾಸ ಎಂದು ಹೇಳಲಾಗುತ್ತಿದೆ. ಆತನನ್ನು ಪಟ್ಟಣದ ಪೊಲೀಸ್ ಠಾಣೆಗೆ ಕರೆತಂದು ಹೆಚ್ಚುವರಿ ಎಸ್‌ಪಿ ಜಿ.ಹರೀಶ ವಿಚಾರಣೆ ನಡೆಸಿದ್ದಾರೆ. ಬಿಗಿ ಭದ್ರತೆ ಇದ್ದರೂ ವ್ಯಕ್ತಿ ಮಚ್ಚು ಹಿಡಿದು ವೇದಿಕೆಗೆ ನುಗ್ಗಿದ್ದರಿಂದ ಕೆಲ ಸಮಯ ಆತಂಕಕ್ಕೆ ಕಾರಣವಾಗಿತ್ತು.
ಪೊಲೀಸರ ಸಮಯಪ್ರಜ್ಞೆಯಿಂದ ವ್ಯಕ್ತಿಯನ್ನು ಪೊಲೀಸರು ಬಂಧಿಸಿ ವಿಚಾರಣೆಗೆ ಒಳಪಡಿಸಿದ್ದಾರೆ. ಇನ್ನು ವ್ಯಕ್ತಿ ಲಿಂಗಸುಗೂರು ನಿವಾಸಿಯಾಗಿದ್ದು , ಈ ಮಧ್ಯೆ ಶ್ರೀನಿವಾಸ ಉಪ್ಪಾರ ವ್ಯಕ್ತಿಗೆ ಮೂರು ಜನ ಮಕ್ಕಳಿದ್ದು, ಮಗ 94% ಫಲಿತಾಂಶದಲ್ಲಿ ಪಿಯುಸಿ ಪಾಸಾಗಿದ್ದಾನೆ. ಪೊಲೀಸರು ಹೆಚ್ಚಿನ ಮಾಹಿತಿಗಾಗಿ ತನಿಖೆಗೆ ಒಳಪಡಿಸಿದ್ದಾರೆ.
ವರದಿ : ಮುಸ್ತಾಫಾ tv8kannada ಲಿಂಗಸುಗೂರು