ಹಟ್ಟಿಚಿನ್ನದಗಣಿ: ನಾಲೆಗೆ ನೀರು ಹರಿಸದಿದ್ದರೆ ರಾಜ್ಯ ಹೆದ್ದಾರಿ ಬಂದ್ ಎಚ್ಚರಿಕೆ

ಹಟ್ಟಿ ಚಿನ್ನದ ಗಣಿ: ’ನಾಲೆಗೆ ನೀರು ಬಿಡದಿದ್ದರೆ ರಾಜ್ಯ ಹೆದ್ದಾರಿ ಬಂದ್ ಮಾಡಿ ಉಗ್ರ ಹೋರಾಟ ಮಾಡಬೇಕಾಗುತ್ತದೆ’ ಎಂದು ಗುರುಗುಂಟಾ ಸಂಸ್ಧಾನದ ರಾಜ ಸೋಮನಾಥ ನಾಯಕ ಹೇಳಿದರು.
ಗುರುಗುಂಟಾ ಗ್ರಾಮದಲ್ಲಿ ರಾಜ್ಯ ರೈತ ಸಂಘ ಹಸಿರು ಸೇನೆಯಿಂದ ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ಅವರು ಮಾತನಾಡಿದರು.
ನಾರಾಯಣಪುರ ಬಲದಂಡೆ ಹಾಗೂ ರಾಂಪೂರ ಏತ ನೀರಾವರಿ ಕಾಲುವೆಗಳಿಗೆ ವಾರಬಂಧಿಯಂತೆ ನೀರು ಹರಿಸಬೇಕು’ ಎಂದು ಒತ್ತಾಯಿಸಿದರು.
‘ಏಪ್ರಿಲ್ 1ರಿಂದ ಏಪ್ರಿಲ್ 10ರವರೆಗೆ ಮತ್ತು ಏಪ್ರಿಲ್ 15ರಿಂದ ಏಪ್ರಿಲ್ 20ರ ವರೆಗೆ ನೀರು ಹರಿಸಲು ಮನವಿ ಮಾಡಲಾಗಿತ್ತು. ಆದರೆ, ಅಧಿಕಾರಿಗಳು ರೈತರಿಗೆ ಸ್ಪಂದಿಸುತ್ತಿಲ್ಲ. ಇದು ಹೀಗೆಯೆ ಮುಂದುವರಿದರೆ ಮುಂದಾಗುವ ಅನಾಹುತಗಳಿಗೆ ಅಧಿಕಾರಿಗಳೇ ಹೊಣೆ’ ಎಂದರು.
‘ಮೇಲಧಿಕಾರಿಗಳು ಇತ್ತ ಕಡೆ ಗಮನಹರಿಸಿ ನಾಲೆಗೆ ನೀರು ಹರಿಸಬೇಕು. ನಿರ್ಲಕ್ಷ್ಯ ಮಾಡಿದರೆ, ರಾಜ್ಯ ಹೆದ್ದಾರಿ 150(ಎ) ಸಂಪೂರ್ಣ ರಸ್ತೆ ಬಂದ್ ಮಾಡಬೇಕಾಗುತ್ತದೆ’ ಎಂದು ಎಚ್ಚರಿಸಿದರು.
ಈ ವೇಳೆ, ವಾಲ್ಮೀಕಿ ನಾಯಕ ಸಂಘದ ಮಾಜಿ ಅಧ್ಯಕ್ಷ ನಂದೀಶ ನಾಯಕ, ಚನ್ನಯ್ಯ ಸ್ವಾಮಿ, ವಿಜಯಕುಮಾರ ನಾಯಕ, ರೈತ ಸಂಘದ ತಾಲ್ಲೂಕು ಪ್ರಧಾನ ಕಾರ್ಯದರ್ಶಿ ಬಸವರಾಜ ಗೌಡೂರು ಹಾಗೂ ಪದಾಧಿಕಾರಿಗಳು, ಗ್ರಾಮಸ್ಧರು ಉಪಸ್ಧಿತರಿದ್ದರು.
ವರದಿ : ಮುಸ್ತಾಫಾ tv8kannada ಲಿಂಗಸುಗೂರು