ಇತ್ತೀಚಿನ ಸುದ್ದಿ

ವೇತನ ಪ್ಯಾಕೇಜ್ ಅಡಿ 1.00 ಕೋಟಿವರೆಗೆ ಅಪಘಾತ ವಿಮೆ ಸೌಲಭ್ಯ- ಸಂಜಯ ಕುಮಾರ್.

ಕೊಟ್ಟೂರು : ಸರ್ಕಾರಿ ನೌಕರರಿಗೆ ಸಿಗುವ ಸೌಲಭ್ಯ ಕುರಿತು ಸಭೆ ಜರುಗಿತು. ಬಿಡಿಸಿಸಿ ಬ್ಯಾಂಕ್ ವ್ಯವಸ್ಥಾಪಕ ಸಂಜಯ ಕುಮಾರ್ ಮಾತನಾಡಿ ಇತ್ತೀಚಿನ ಸರ್ಕಾರದ ಆದೇಶದಂತೆ ಉಳಿತಾಯ ಖಾತೆಯನ್ನು ಹೊಂದಿದ ನೌಕರರು ವೇತನ ಖಾತೆಯಾಗಿ ಪರಿವರ್ತಿಸಿದಲ್ಲಿ ಅಕಸ್ಮಿಕವಾಗಿ ಅಪಘಾತ ಹೊಂದಿದ ನೌಕರರ ಕುಟುಂಬಕ್ಕೆ ರೂ.1.00 ಕೋಟಿ ವಿಮೆ ಮೊತ್ತವನ್ನು ನೀಡಲಾಗುವುದು. ಈ ವ್ಯವಸ್ಥೆ ಹಾಲೀ ರಾಷ್ಟ್ರೀಕೃತ ಬ್ಯಾಂಕ್ ಗಳಲ್ಲಿ ಮಾತ್ರ ಇದೆ. ಈ ಬಗ್ಗೆ ನಮ್ಮ ಬ್ಯಾಂಕ್ ನಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಉಳಿತಾಯ ಖಾತೆಯನ್ನು ಹೊಂದಿರುವ ಶಿಕ್ಷಣ ಇಲಾಖೆ ಹಾಗೂ ಇತರೆ ಇಲಾಖೆ ಸಿಬ್ಬಂದಿ ನಿರಾಶೆಯಾಗುವುದು ಬೇಡ. ನಮ್ಮ ಬ್ಯಾಂಕ್ ನಲ್ಲಿ ಸಹಾ ಸದರಿ ವಿಮಾ ಸೌಲಭ್ಯವನ್ನು ನೀಡುವ ಪ್ರಕ್ರಿಯೆ ಬಗ್ಗೆ ಚಿಂತನೆ ನಡೆದಿದ್ದು ಕೆಲವೇ ದಿನಗಳಲ್ಲಿ ಬರಲಿದೆ. ಹಾಗೂ ಈ ಮೊದಲು ವೈಯಕ್ತಿಕ ಸಾಲ ರೂ.20.00
ಲಕ್ಷ ನೀಡುತ್ತಿದ್ದು, ಅದನ್ನು ರೂ.25,00 ಲಕ್ಷಕ್ಕೆ ಏರಿಸಲಾಗಿದೆ. ಐಎಂಪಿಎಸ್, ನೆಫ್ಟ್ ಹಾಗೂ ಆರ್ಟಿಜಿಎಸ್ ಮೂಲಕ ಹಣ ವರ್ಗಾವಣೆ, ಖಾತೆ ಸ್ಟೇಟ್ ಮೆಂಟ್, ಚೆಕ್ ಪುಸ್ತಕ ವಿತರಣೆ ಒಳಗೊಂಡು ವಿವಿಧ 19 ಡಿಜಿಟಲ್ ಸೇವೆಗಳನ್ನು ಶುಲ್ಕ ರಹಿತವಾಗಿ ನೀಡಲಾಗುವುದು ಎಂದು ಬಿಡಿಸಿಸಿ ಬ್ಯಾಂಕ್ ನಿಂದ ಸರ್ಕಾರಿ-ಅರೆ ಸರ್ಕಾರಿ ನೌಕರರ ಸಮಗ್ರ ವೇತನ ಪ್ಯಾಕೇಜ್ ಮಾಹಿತಿಯನ್ನು ತಿಳಿಸುತ್ತಾ, ನೌಕರರಿಗೆ ಇದ್ದ ಗೊಂದಲಗಳನ್ನು ಪರಿಹರಿಸಿದರು.


9, 10. ರಂದು ವಿಜಯನಗರ ಜಿಲ್ಲೆ, ಹೊಸಪೇಟೆಯಲ್ಲಿ ಜಿಲ್ಲಾ ಮಟ್ಟದ ಸರ್ಕಾರಿ ನೌಕರರ ಕ್ರೀಡಾ ಕೂಟದಲ್ಲಿ ಭಾಗವಹಿಸಲು ಆಸಕ್ತಿ ಹೊಂದಿದ ನೌಕರರ ತಂಡಗಳನ್ನು ಪಟ್ಟಿಮಾಡುತ್ತಾ, ಕ್ರೀಡಾ ಮನೋಭಾವದಿಂದ ಎಲ್ಲರೂ ಉತ್ಸಾಹದಿಂದ ಭಾಗವಹಿಸಿ ಜಿಲ್ಲಾ ಮಟ್ಟದಲ್ಲಿ ವಿಜಯಶಾಲಿಗಳಾಗಿ ರಾಜ್ಯಮಟ್ಟಕ್ಕೆ ಆಯ್ಕೆಯಾಗಿ ಕೊಟ್ಟೂರಿಗೆ ಹೆಸರು ತಂದುಕೊಡುವಂತೆ ಸಂಘದ ಅಧ್ಯಕ್ಷರಾದ ಯೋಗೀಶ್ವರ ದಿನ್ನೆ ಎಲ್ಲಾ ನೌಕರರನ್ನು ಹುರಿದುಂಬಿಸಿದರು.
ಸಭೆಯಲ್ಲಿ ಕಾರ್ಯದರ್ಶಿ ರಮೇಶ್.ಕೆ. ಖಜಾಂಚಿ-ವೀರೇಶ ತುಪ್ಪದ, ರಾಜ್ಯ ಪರಿಷತ್ ಸದಸ್ಯ-ಎಸ್.ಎಂ.ಗುರುಬಸವರಾಜ, ಹಿರಿಯ ಉಪಾಧ್ಯಕ್ಷರಾದ ಪಿ ಎಂ ಗಂಗಾಧರ , ಡಾ.ಜಗದೀಶ ಚಂದ್ರಭೋಸ್, ದೈಹಿಕ ಶಿಕ್ಷಕರ ಸಂಘದ ಗ್ರೇಡ್-1 ಅಧ್ಯಕ್ಷ ಹನುಮೇಶ, ಉಪಾಧ್ಯಕ್ಷ ಜಿ ಸಿದ್ದಪ್ಪ, ಶಶಿಕಲಾ, ಸಾಂಸ್ಕೃತಿಕ ಮತ್ತು ಕ್ರೀಡಾ ಕಾರ್ಯದರ್ಶಿ ಹೇಮಚಂದ್ರ ಕೆ, ಸಂಘಟನಾ ಕಾರ್ಯದರ್ಶಿ ಮೀನಾಕ್ಷಿ ವಿ, ಚನ್ನೇಶಪ್ಪ ಎಸ್, ಸೋಮಶೇಖರ್ ರಾಜ್ ಎಂ, ಹಾಗೂ ಇತರೆ ವೃಂದ ಸಂಘದ ಪದಾಧಿಕಾರಿಗಳು, ಕ್ರೀಡಾ ಪಟುಗಳು ಹಾಜರಿದ್ದರು. ಅನುಪಮ ಕೆ ಟಿ ಇವರು ಪ್ರಾರ್ಥಿಸಿದರು. ಗುರುಬಸವರಾಜ ಎ.ವಿ. ಸ್ವಾಗತಿಸಿದರೆ, ಶಿವಕುಮಾರ್ ಎಂ ನಿರೂಪಿಸಿ ವಂದಿಸಿದರು.

ವರದಿ : C ಕೊಟ್ರೇಶ್ tv8kannada ಬಳ್ಳಾರಿ

Related Articles

Leave a Reply

Your email address will not be published. Required fields are marked *

Back to top button