ಮಂಗಲ ಹೊಸೂರು ಗ್ರಾಮದ ರಸ್ತೆಯ ಬದಿಗಳಲ್ಲಿ ಬೆಳೆದು ನಿಂತ ಗಿಡಗಂಟಿಗಳನ್ನು ತೆರವುಗೊಳಿಸಲು ಮನವಿ

ಚಾಮರಾಜನಗರ: ತಾಲೂಕಿನ ಮಂಗಲ ಗ್ರಾಮದಿಂದ ಮಂಗಲ ಹೊಸೂರು ಗ್ರಾಮಕ್ಕೆ ತೆರಳುವ ಮುಖ್ಯ ರಸ್ತೆಯ ಬದಿಗಳಲ್ಲಿ ಬೆಳೆದಿರುವ ಗಿಡ ಗಂಟಿಗಳನ್ನು ತೆರವುಗೊಳಿಸಬೇಕು ಇದರಿಂದ ವಾಹನ ಸವಾರರರು ಹಾಗೂ ರಾತ್ರಿ ವೇಳೆ ಸಂಚರಿಸುವ ದಾರಿ ಹೋಕರಿಗೆ ತುಂಬಾ ತೊಂದರೆಯಾಗುತ್ತಿದೆ ಅಲ್ಲದೆ ಈ ಹಿಂದೆ ಅನೇಕ ರಸ್ತೆ ಅಪಘಾತಗಳು ನಡೆದಿರುತ್ತವೆ ಆದ್ದರಿಂದ ಮಂಗಲ ಹೊಸೂರು ಗ್ರಾಮದ ಮುಖ್ಯರಸ್ತೆಯ ಬದಿಗಳಲ್ಲಿ ಬೆಳೆದು ನಿಂತಿರುವ ಗಿಡಗಂಟಿಗಳನ್ನು ತೆರವುಗೊಳಿಸಿ ಸಾರ್ವಜನಿಕರಿಗೆ ಅನುಕೂಲ ಮಾಡಿಕೊಡಬೇಕು ಎಂದು ಒತ್ತಾಯಿಸಿ ಡಾ.ಎಸ್.ಪಿ ಬಾಲಸುಬ್ರಮಣ್ಯಂ ಗಾನಗಂಧರ್ವ ಸಾಂಸ್ಕೃತಿಕ ಕಲಾ ವೇದಿಕೆ ವತಿಯಿಂದ ಕಾರ್ಯಪಾಲಕ ಅಭಿಯಂತರು ಪಂಚಾಯತ್ ರಾಜ್ ಚಾಮರಾಜನಗರ ಇವರಿಗೆ ಮನವಿ ಸಲ್ಲಿಸಲಾಯಿತು.

ಈ ಸಂದರ್ಭದಲ್ಲಿ ಡಾ.ಎಸ್.ಪಿ ಬಾಲಸುಬ್ರಹ್ಮಣ್ಯಂ ಗಾನ ಗಂಧರ್ವ ಸಾಂಸ್ಕೃತಿಕ ಕಲಾ ವೇದಿಕೆಯ ಜಿಲ್ಲಾ ಅಧ್ಯಕ್ಷ ಹೆಚ್.ಎಂ. ಶಿವಣ್ಣ ಮಂಗಲ ಹೊಸೂರು, ಪ್ರಧಾನ ಕಾರ್ಯದರ್ಶಿ, ಚಂದಕವಾಡಿ ಡಿ. ರಾಜಣ್ಣ ಇದ್ದರು.
ವರದಿ : ಇರಸವಾಡಿ ಸಿದ್ದಪ್ಪಾಜಿ tv8newskannada ಚಾಮರಾಜನಗರ