ಇತ್ತೀಚಿನ ಸುದ್ದಿ

ಮಸ್ಕಿ ಕವಿಹೃದಯಿ ಪಿಎಸ್ಐ ಗೆ ಮುಖ್ಯಮಂತ್ರಿ ಚಿನ್ನದ ಪದಕ

ಮಸ್ಕಿ: ವೃತ್ತಿ ಪೋಲಿಸ್ ಇಲಾಖೆಯಲ್ಲಿಯಾದರೂ, ಮನಸ್ಸು ಕವಿ ಹೃದಯ.ಆದರೆ ಸಾಹಿತ್ಯಕ್ಕಿಂತ ತಮ್ಮ ವೃತ್ತಿಯಲ್ಲಿಯೇ ಸಾಧನೆಮಾಡಿರುವ ಸಮಾಜ ಸೇವಕರು,

ಮಸ್ಕಿ ತಾಲೂಕಿನ ಪಾಮನಕಲ್ಲೂರು ಗ್ರಾಮದ ನಾಗಪ್ಪ ಭೋವಿ
ರವರು ಗುಲ್ಬರ್ಗದಲ್ಲಿ ಪಿಎಸ್ಐ ಆಗಿ ನಿಯೋಜನೆಗೊಂಡ ಬಳಿಕ ಅವರು ಉತ್ತರಕನ್ನಡ ಜಿಲ್ಲೆಯ ದಾಂಡೇಲಿ ನಗರ ಠಾಣೆಯ ಪಿಎಸ್ಐ ಆಗಿ ಸೇವೆ ಸಲ್ಲಿಸಿದರು.ನಂತರ ಅವರ ವೃತ್ತಿ ಸೇವೆ ಶಿರಸಿಯಲ್ಲಿ ಆರಂಭಗೊಂಡಿದೆ‌.

ಶಿರಸಿ ನಗರ ಠಾಣೆ ಪಿಎಸ್ಐ ನಾಗಪ್ಪ ಬಿ ಇವರಿಗೆ 2022 ನೇ ಸಾಲಿನ ಪ್ರತಿಷ್ಠಿತ ಮುಖ್ಯಮಂತ್ರಿ ಚಿನ್ನದ ಪದಕಕ್ಕೆ ಅಯ್ಕೆಯಾಗಿದ್ದಾರೆ.

ಅವರಿಗೆ ಶಿರಸಿಯಲ್ಲಿ ಸೇವೆ ಸಲ್ಲಿಸುತ್ತಿರುವಾಗಲೇ ಈ ಪ್ರಶಸ್ತಿಗೆ ಆಯ್ಕೆಯಾಗಿರುವುದು ಶಿರಸಿಗರಿಗೂ ಹಾಗೂ ಮಸ್ಕಿ ತಾಲೂಕಿಗೆ
ಹೆಮ್ಮೆಯ ವಿಷಯವಾಗಿದೆ.ಶಿರಸಿ ಮಾರ್ಕೆಟ್ ಠಾಣೆಯ ಪಿಎಸ್ಐ ಆಗಿ ತಮ್ಮ ನಿಖರವಾದ ಸೇವೆಯ ಮೂಲಕ ಜನಸ್ನೇಹಿ ಪಿಎಸ್ಐ ಎಂದೇ ಗುರುತಿಸಿಕೊಂಡಿದ್ದರು‌.

ನಂತರ ಅವರು ಕಾರವಾರಕ್ಕೆ ವರ್ಗಾವಣೆಗೊಂಡಿದ್ದರು.ಇದೀಗ ಅವರು ಪುನಹ ಶಿರಸಿ ನಗರ ಠಾಣೆಗೆ ಬಂದು ಪಿಎಸ್ಐ ಆಗಿಕಾರ್ಯನಿರ್ವಹಿಸುತ್ತಿದ್ದಾರೆ.

ಖಾಕಿಯೊಳಗಿನ ಕವಿ

ನಾಗಪ್ಪ ಭೋವಿ ಪಾಮನಕಲ್ಲೂರು
ಅವರು ಪೊಲೀಸ್ ಇಲಾಖೆಯಲ್ಲಿ – ತಮ್ಮ ಕರ್ತವ್ಯದ ಜತೆ ಸಾಹಿತ್ಯ ಕ್ಷೇತ್ರದಲ್ಲಿಯೂ ಅಪಾರ ಆಸಕ್ತಿ ಹೊಂದಿದ್ದಾರೆ. ಬರವಣೆಗೆಯಲ್ಲಿಯೂ ಗಮನ ಸೆಳೆದಿದ್ದಾರೆ. ಅನೇಕ ಕವನಗಳನ್ನು – ರಚಿಸಿದ್ದಾರೆ. ಕವಿಗೋಷ್ಠಿ ಸೇರಿದಂತೆ ಸಾಹಿತ್ಯ ಕಾರ್ಯಕ್ರಮಗಳಲ್ಲಿ ಸಕ್ರಿಯವಾಗಿ ತೊಡಗಿಕೊಂಡು ಖಾಕಿಯೊಳಗಿನ ಕವಿ ಎಂದೂ ಹೆಸರುಗಳಿಸಿದ್ದಾರೆ. ಇವರ ಚೊಚ್ಚಲ ಕವನ ಸಂಕಲನ ‘ನೆತ್ತರಲಿ ನೆಂದ ಹೂ’ ಇತ್ತೀಚೆಗೆ ಶಿರಸಿಯಲ್ಲಿ ನಡೆದ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಬಿಡುಗಡೆಗೊಂಡಿದೆ.ಹಾಗೂ ಸರಕಾರ ಮತ್ತು ವಿವಿಧ ಸಂಘ ಸಂಸ್ಥೆಗಳಿಂದ ಹಲವಾರು ಪ್ರಶಸ್ತಿಗಳನ್ನು ಪಡೆದಿದ್ದಾರೆ

Related Articles

Leave a Reply

Your email address will not be published. Required fields are marked *

Back to top button