ಕ್ರೀಡೆಸುದ್ದಿ

IND vs PAK- ಸದ್ಯದಲ್ಲೇ ನಾಲ್ಕು ಬಾರಿ ಮುಖಾಮುಖಿಯಾಗಲಿವೆ ಭಾರತ, ಪಾಕಿಸ್ತಾನ..!

ಮುಂಬೈ: ಟಿ20 ವಿಶ್ವಕಪ್​ನಲ್ಲಿ ಪಾಕಿಸ್ತಾನ ವಿರುದ್ಧ ಭಾರತ ಸೋಲನುಭವಿಸಿದ್ದು (India losing to Pakistan in T20 World Cup) ಕೋಟ್ಯಂತರ ಜನರಿಗೆ ಅತೀವ ಬೇಸರ ತಂದಿದೆ. ಪಾಕಿಸ್ತಾನ ವಿರುದ್ಧ ಫೈನಲ್​​ನಲ್ಲಾದರೂ ಎದುರಿಸಿ ಸೋಲಿಸಿ ಸೇಡು ತೀರಿಸಿಕೊಳ್ಳಬೇಕು ಎಂದು ಹಪಹಪಿಸುತ್ತಿದ್ದವರು ಅದೆಷ್ಟೋ ಮಂದಿ. ಆದರೆ, ದುರದೃಷ್ಟಕ್ಕೆ ಭಾರತಕ್ಕೆ ಸೆಮಿಫೈನಲ್ ಕೂಡ ಪ್ರವೇಶಿಸಲು ಸಾಧ್ಯವಾಗಲಿಲ್ಲ. ಭಾರತ ಮತ್ತು ಪಾಕಿಸ್ತಾನ ಮಧ್ಯೆ ಕ್ರಿಕೆಟ್ ಸರಣಿ ನಡೆದು ಅದೆಷ್ಟೋ ವರ್ಷಗಳೇ ಆಗಿವೆ. ರಾಜಕೀಯ ವೈರತ್ವದ ಕಾರಣಕ್ಕೆ ಕ್ರಿಕೆಟ್ ಸರಣಿ ಆಡುವುದನ್ನು ಕೈಬಿಡಲಾಗಿದೆ. ಇನ್ನೇನಿದ್ದರೂ ಪಾಕಿಸ್ತಾನವನ್ನು ಮತ್ತೊಮ್ಮೆ ಸಂಧಿಸಲು ವಿಶ್ವಕಪ್​ನಂಥ ಯಾವುದಾದರೂ ಟೂರ್ನಮೆಂಟ್​ವರೆಗೂ ಕಾಯಬೇಕಾಗಬಹುದು ಎಂದುಕೊಳ್ಳುತ್ತಿರುವ ಭಾರತದ ಕ್ರಿಕೆಟ್ ಪ್ರೇಮಿಗಳಿಗೆ ತುಸು ನಿರಾಳದ ಸುದ್ದಿ ಇದೆ. ಭಾರತ ಮತ್ತು ಪಾಕಿಸ್ತಾನ ಮಧ್ಯೆ ಸದ್ಯೋಭವಿಷ್ಯದಲ್ಲಿ ನಾಲ್ಕು ಬಾರಿ ಹಣಾಹಣಿ ನಡೆಯಲಿದೆ.

ಎರಡು ವರ್ಷದಲ್ಲಿ ನಾಲ್ಕು ಟೂರ್ನಿಗಳು: 2022ರಲ್ಲಿ ಶ್ರೀಲಂಕಾದಲ್ಲಿ ಏಷ್ಯಾ ಕಪ್ ಟಿ20 ಟೂರ್ನಿ ನಡೆಯಲಿದೆ. ಅಲ್ಲಿ ಭಾರತ ಮತ್ತು ಪಾಕಿಸ್ತಾನ ತಂಡಗಳು ಮುಖಾಮುಖಿ ಆಗುವ ನಿರೀಕ್ಷೆ ಇದೆ. ಕಳೆದ ಬಾರಿಯ ಏಷ್ಯಾ ಕಪ್ ನಡೆದದ್ದು 2018ರಲ್ಲಿ. ಬಾಂಗ್ಲಾದೇಶ ವಿರುದ್ಧದ ಫೈನಲ್ ಗೆದ್ದು ಭಾರತ ಚಾಂಪಿಯನ್ ಎನಿಸಿತ್ತು. ಆ ಟೂರ್ನಿಯಲ್ಲಿ ಪಾಕಿಸ್ತಾನ ವಿರುದ್ಧ ಭಾರತ 9 ವಿಕೆಟ್​ಗಳಿಂದ ಜಯಭೇರಿ ಭಾರಿಸಿತ್ತು. ರೋಹಿತ್ ಶರ್ಮಾ ಆಗ ಟೀಮ್ ಇಂಡಿಯಾದ ನಾಯಕತ್ವ ವಹಿಸಿದ್ದರು.

ಮುಂದಿನ ವರ್ಷದ ಅಕ್ಟೋಬರ್ ನವೆಂಬರ್ ತಿಂಗಳಲ್ಲಿ ಆಸ್ಟ್ರೇಲಿಯಾದಲ್ಲಿ ಟಿ20 ವಿಶ್ವಕಪ್ ನಡೆಯಲಿದೆ. ಇಲ್ಲಿಯೂ ಭಾರತ ಮತ್ತು ಪಾಕಿಸ್ತಾನ್ ತಂಡಗಳು ಮುಖಾಮುಖಿ ಆದರೂ ಆಗಬಹುದು. ಗ್ರೂಪ್ ಹಂತದ ತಂಡಗಳನ್ನ ಪ್ರಕಟಿಸಿದ ಬಳಿಕ ಈ ಬಗ್ಗೆ ಸ್ಪಷ್ಟ ಚಿತ್ರಣ ಸಿಗಬಹುದು.

2023ರಲ್ಲಿ ಪಾಕಿಸ್ತಾನದಲ್ಲಿ ಏಷ್ಯಾ ಕಪ್ ಟೂರ್ನಿ ನಡೆಯಲಿದೆ. ಇದು ಏಕದಿನ ಪಂದ್ಯಗಳ ಟೂರ್ನಮೆಂಟ್ ಆಗಿದೆ. ಈ ಟೂರ್ನಿಯಲ್ಲೂ ಭಾರತ ಮತ್ತು ಪಾಕಿಸ್ತಾನದ ಮಧ್ಯೆ ಏಕದಿನ ಪಂದ್ಯ ನಡೆಯುವುದು ನಿಶ್ಚಿತವಾಗಿದೆ.

Related Articles

Leave a Reply

Your email address will not be published. Required fields are marked *

Back to top button