ಏಪ್ರೀಲ್-20 ವರೆಗೆ ನೀರು ಬಿಡುವಂತೆ ಮಾಜಿ ಶಾಸಕ ಪ್ರತಾಪ್ ಗೌಡ ಪಾಟೀಲ ಮನವಿ.

ಮಸ್ಕಿ : ವಿಧಾನಸಭಾ ಕ್ಷೇತ್ರವು ನೀರಾವರಿ ಹಾಗೂ ಹೊರ ಭೂಮಿ ಪ್ರದೇಶ ಹೊಂದಿರುವ ಈ ಭಾಗದ ಜೀವನಾಡಿಯಾಗಿರುವ ತುಂಗಭದ್ರ ಜಲಾಶಯವು ಬಹುತೇಕ ರೈತರಿಗೆ ಹಾಗೂ ಕೃಷಿ ಕಾರ್ಮಿಕರಿಗೆ ಜೀವ ಜಲಾಶಯವಾಗಿದ್ದು ಕಳೆದ ಮಳೆಗಾಲದ ಸಂದರ್ಭದಲ್ಲಿ ಜಲಾಶಯವು ತುಂಬಿದೆ ಹಾಗೂ ರೈತರು ಈ ಭಾರಿ ನೀರಿನ ಸೌಲಭ್ಯ ನಂಬಿ ಎರಡನೇ ಬೆಳ ಬೆಳೆದಿದ್ದು ತುಂಗಭದ್ರ ಕಾಡಾ ಸಮಿತಿಯು ಮಾರ್ಚ್-30 ವರಗೆ ನೀರು ಬಿಡುವುದಾಗಿ ಆದೇಶಿಸಿದ್ದು ನಮ್ಮ ಭಾಗದ ರೈತರು ಜನವರಿ ತಿಂಗಳ ಅಂತ್ಯದವರೆಗೆ ಭತ್ತ ನಾಟಿ ಮಾಡಿದ್ದು ಅದರ ಪೂರ್ಣ ಬೆಳೆ ಬರಬೇಕಾದರೆ ಏಪ್ರೀಲ್ -20 ವರೆಗೆ ರೈತರಿಗೆ ನೀರಿನ ಅವಶ್ಯಕತೆ ಇದೆ.
ನೀರು ಇಲ್ಲವೆಂದರೆ ರೈತರಿಗೆ ಆರ್ಥಿಕವಾಗಿ ತುಂಬಾ ನಷ್ಟ ಹಾಗೂ ಬಹಳಷ್ಟ ತೊಂದರೆ ಉಂಟು ಆಗುತ್ತದೆ. ಭದ್ರಾ ಜಲಾಶಯದಲ್ಲಿ ನೀರಿನ ಪ್ರಮಾಣ ಹೆಚ್ಚು ಇದ್ದು ಸದ್ರಿ ಜಲಾಶಯದಿಂದ ತುಂಗಭದ್ರ ಜಲಾಶಯಕ್ಕೆ ಹೆಚ್ಚುವರಿಯಾಗಿ 6-7 ಟಿ.ಎಂ.ಸಿ ನೀರನ್ನು ತೆಗೆದುಕೊಂಡು ಈ ಭಾಗದ ರೈತರಿಗೆ ಸಂಪೂರ್ಣ 2 ನೇ ಬೆಳೆಗೆ ಅನುಕೂಲವಾಗುವಂತೆ ರೈತರಿಗೆ ಅನ್ಯಾಯ ಮಾಡದೇ ತುಂಗಭದ್ರ ಜಲಾಶಯ ಎಡದಂಡೆ ಕಾಲುವೆ ಮೂಖಾಂತರ ಏಪ್ರೀಲ್-20 ವರೆಗೆ ನೀರು ಬಿಡುವಂತೆ ಮಾನ್ಯ ಮುಖ್ಯಮಂತ್ರಿಗಳಿಗೆ ಹಾಗೂ ಜಲಸಂಪನ್ಮೂಲ ಸಚಿವರಿಗೆ ಮನವಿ ಮಾಡಿದ್ದು ಮುಂದಿನ ದಿನಗಳಲಿ ಸರಿಯಾದ ಪ್ರಮಾಣದಲ್ಲಿ ನೀರು ಬಿಡದೆ ಇದ್ದರೆ ಪಕ್ಷದಿಂದ ರೈತರ ಪರವಾಗಿ ಹೋರಾಟ ಮಾಡುತ್ತೇವೆಂದು ಪತ್ರಿಕೆ ಮೂಲಕ ಆಗ್ರಹಿಸುತ್ತಿದ್ದೆವೆ ಎಂದರು.
ವರದಿ : ಸಿದ್ದಯ್ಯ ಹೆಸರೂರ tv8kannada ಮಸ್ಕಿ