ಬಾಲಿವುಡ್(Bollywood)ಗೂ ಮಾದಕ ಲೋಕಕ್ಕೂ ಅವಿನಾಭಾವ ಸಂಬಂಧವಿದೆ. ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್(sushant singh rajput)ಸಾವಿನ ನಂತರ ಚಿತ್ರರಂಗದಲ್ಲಿ ಮಾದಕ ಘಾಟು ಎಷ್ಟರ ಮಟ್ಟಿಗೆ ಇತ್ತು ಎಂಬುಂದು ಬಟಾಬಯಲಾಗಿತ್ತು. ಬಾಲಿವುಡ್ ಹಾಗೂ ಮನರಂಜನಾ ಕ್ಷೇತ್ರದ ಸ್ಟಾರ್ಗಳಿಗೆ ಡ್ರಗ್ ಮಾಫಿಯಾದ ಜತೆ ನಂಟಿದೆ ಎಂಬುದು ಬಹಿರಂಗವಾಗುತ್ತಲೇ ಇದೆ. ಕೆಲವೇ ದಿನಗಳ ಹಿಂದೆ ಬಾಲಿವುಡ್ನ ಖ್ಯಾತ ನಟನ ಪುತ್ರ ಹಾಗೂ ಸ್ನೇಹಿತರನ್ನ ಎನ್ಸಿಬಿ(NCB) ಅಧಿಕಾರಿಗಳು ಬಂಧಿಸಿದ್ದರು.

ಮತ್ತೆ ಎನ್ಸಿಬಿ ಅಧಿಕಾರಿಗಳು ಬೇಟೆ ಮುಂದುವರೆಸಿದ್ದರು. ಈ ಬಾರಿ ಎನ್ಸಿಬಿ ಬಲೆಯಲ್ಲಿ ಲಾಕ್ ಆಗಿರುವುದು ಬಾಲಿವುಡ್ ನಟಿ ಅನನ್ಯಾ ಪಾಂಡೆ(Ananya Pandya.) ನಿನ್ನೆ ಅನನ್ಯಾ ಪಾಂಡೆ ಮನೆ ಮೇಲೆ ದಾಳಿ ಎನ್ಸಿಬಿ ಅಧಿಕಾರಿಗಳು ನಡೆಸಿದ್ದರು. ಈ ವೇಳೆ ಅನನ್ಯಾ ಪಾಂಡೆಗೆ ಡ್ರಗ್ ಪೆಡ್ಲರ್(Drug Peddler)ಗಳ ಜತೆ ಲಿಂಕ್ ಇರುವುದು ತಿಳಿದು ಬಂದಿದೆ. ಹೀಗಾಗಿ ಅನನ್ಯಾಗೆ ವಿಚಾರಣೆಗೆ ಹಾಜರಾಗುವಂತೆ ಸೂಚಿಸಲಾಗಿತ್ತು. ಅದರಂತೆಯೇ ತಂದೆ, ಚಂಕಿ ಪಾಂಡೆ (Chunky Pandey) ಜತೆ ಅವರು ವಿಚಾರಣೆಗೆ ಹಾಜರಾಗಿದ್ದರು. ಬಳಿಕ ಅನನ್ಯಾ ಪಾಂಡೆಯವರ ಲ್ಯಾಪ್ಟಾಪ್(Laptop) ಹಾಗೂ ಮೊಬೈಲ್(Mobile) ಅನ್ನು ಎನ್ಸಿಬಿ ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ.
ವಾಟ್ಸ್ಆಪ್ನಲ್ಲಿ ಪೆಡ್ಲರ್ಗಳ ಜತೆ ಚಾಟ್?
ಬಾಲಿವುಡ್ ನಟ ಚಂಕಿ ಪಾಂಡೆ ಅವರ ಪುತ್ರಿ ಅನನ್ಯಾ ಪಾಂಡೆ ಅವರ ಮೊಬೈಲ್ ಅನ್ನು ಎನ್ಸಿಬಿ ಅಧಿಕಾರಿಗಳು ವಶ ಪಡಿಸಿಕೊಂಡಿದ್ದಾರೆ. ನಟಿ ಡ್ರಗ್ ಪೆಡ್ಲರ್ಗಳ ಚಾಟ್ ಮಾಡಿದ್ದಾರೆ ಅಂತ ಹೇಳಲಾಗುತ್ತಿದೆ. ಕಳೆದ ಒಂದು ವರ್ಷದಿಂದ ಡ್ರಗ್ ಪೆಡ್ಲರ್ಗಳ ಜತೆ ನಿಕಟ ಸಂರ್ಪಕ ಹೊಂದಿದ್ದರು ಎಂದು ಹೇಳಲಾಗುತ್ತಿದೆ. ಇದೇ ಕಾರಣಕ್ಕೆ ಆಕೆಯ ಫೋನ್, ಲ್ಯಾಪ್ಟಾಪ್ ಸೀಜ್ ಮಾಡಲಾಗಿದೆ. ಒಂದು ವೇಳೆ ಡ್ರಗ್ ಪೆಡ್ಲರ್ಗಳ ಜತೆ ನಡೆಸಿರುವ ಸಂದೇಶಗಳು ಸಿಕ್ಕರೆ, ಎನ್ಸಿಬಿ ಅಧಿಕಾರಿಗಳು ಅನನ್ಯಾ ಪಾಂಡೆಯನ್ನು ಬಂಧಿಸಿ ಜೈಲಿಗಟ್ಟಲಿದ್ದಾರೆ. ದೊಡ್ಡ ದೊಡ್ಡ ನಟ, ನಟಿಯರು ಈ ಮಾದಕ ಲೋಕದಲ್ಲಿ ಮುಳುಗಿಹೋಗಿದ್ದಾರೆ ಎಂದು ಎಲ್ಲರಿಗೂ ಗೊತ್ತೇ ಇದೆ. ಆದರೆ ಯುವ ನಟಿಯರು ಈ ರೀತಿ ಡ್ರಗ್ ಮಾಫಿಯಾ ಜತೆ ನಂಟು ಹೊಂದಿದ್ದಾರೆ ಎಂದರೇ ನಂಬಲಾಸಧ್ಯ.