ಡಾ.ಎಸ್.ಪಿ.ಬಾಲಸುಬ್ರಹ್ಮಣ್ಯಂ ಕಲಾ ವೇದಿಕೆಯಿಂದ ಸಿದ್ದರಾಜುಗೆ ಸನ್ಮಾನ

ಚಾಮರಾಜನಗರ; ನಗರದ ಜೈ ಭುವನೇಶ್ವರಿ ವೃತ್ತದಲ್ಲಿ ಡಾ.ಎಸ್.ಪಿ. ಬಾಲಸುಬ್ರಮಣ್ಯಂ ಗಾನಗಂಧರ್ವ ಸಾಂಸ್ಕೃತಿಕ ಕಲಾ ವೇದಿಕೆ ವತಿಯಿಂದ ಆಟೋ ಡ್ರೈವರ್ ಸಿದ್ದರಾಜುಗೆ ಸಮವಸ್ತ್ರ ನೀಡಿ ಗೌರವಿಸಿ ಸನ್ಮಾನಿಸಲಾಯಿತು.
ಇದೇ ವೇಳೆ ಎಎಸ್ಐ.ಮಹದೇವಸ್ವಾಮಿ ಮಾತನಾಡಿ, ನಗರದ ಶ್ರೀ ಭುವನೇಶ್ವರಿ ವೃತ್ತದಲ್ಲಿ ನಂಜನಗೂಡು ತಾಲೂಕಿನ ಹನುಮನಪುರ ನಿವಾಸಿಯಾದ ರಶ್ಮಿ ಅವರು ಬಸ್ ಹತ್ತುವ ಅವಸರದಲ್ಲಿ ಚಿನ್ನಾಭರಣವಿದ್ದ ಬ್ಯಾಗ್ ಅನ್ನು ಆಟೋದಲ್ಲಿ ಮರೆತು ಹೋಗಿದ್ದು, ಬಳಿಕ ಬ್ಯಾಗ್ ಅನ್ನು ಕಳೆದುಕೊಂಡ ವಿಷಯವನ್ನು ಪಟ್ಟಣ ಪೊಲೀಸ್ ಠಾಣೆಗೆ ತಿಳಿಸಿದ್ದಾರೆ ಅಷ್ಟರಲ್ಲೇ ಚಿನ್ನಾಭರಣ ಬ್ಯಾಗನ್ನು ಪೊಲೀಸ್ ಠಾಣೆಗೆ ಆಟೋ ಡ್ರೈವರ್ ಸಿದ್ದರಾಜು ಒಪ್ಪಿಸಿದ್ದರು ಇಂತಹ ಮಾನವೀಯತೆ ಮೆರೆದ ಇವರಿಗೆ ಸಂಘದ ವತಿಯಿಂದ ಸನ್ಮಾನಿಸುತ್ತಿರುವುದು ಶ್ಲಾಘನೀಯ, ಎಲ್ಲಾ ಆಟೋ ಮಾಲೀಕರಲ್ಲೂ ಪ್ರಾಮಾಣಿಕತೆ ಮೂಡಿ ಬರುತ್ತಿದೆ ಅಲ್ಲದೆ ಗ್ರಾಹಕರ ಜೊತೆ ಸೌಹಾರ್ದತೆಯಿಂದ ನಡೆದುಕೊಳ್ಳುತ್ತಿದ್ದಾರೆ, ಇವರಿಗೆ ಆಟೋ ನಿಲ್ಲಿಸಲು ನೆರಳಿನ ವ್ಯವಸ್ಥೆಗಾಗಿ ಸರ್ಕಾರವು ಮೇಲ್ಚಾವಣಿ ವ್ಯವಸ್ಥೆ ಮಾಡಿಕೊಡಬೇಕು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಸಂಘದ ಜಿಲ್ಲಾಧ್ಯಕ್ಷ ಎಚ್.ಎಂ.ಶಿವಣ್ಣ ಮಂಗಲ ಹೊಸೂರು, ಜಂಟಿ ಕಾರ್ಯದರ್ಶಿ ಜೋಸೆಫ್ ಎನ್, ಸದಸ್ಯರಾದ ಬಂಗಾರು,ಸಾಹಿತಿ ಸಿ.ಶಂಕರ್ ಅಂಕನಶೆಟ್ಟಿಪುರ, ಅಖಿಲ ಕರ್ನಾಟಕ ವಿಶ್ವಕರ್ಮ ಮಹಾಸಭಾದ ಹೋಬಳಿ ಘಟಕದ ಅಧ್ಯಕ್ಷ ಮಂಜುನಾಥ್ ವಿಶ್ವಕರ್ಮ, ಶ್ರೀ ಭುವನೇಶ್ವರಿ ಆಟೋ ಚಾಲಕರು ಮತ್ತು ಮಾಲೀಕರ ಸಂಘದ ಅಧ್ಯಕ್ಷರಾದ ನಾಗೇಂದ್ರ, ನಾಗರಾಜು ಬಳ್ಳಾರಿ, ಗೌರವಾಧ್ಯಕ್ಷ ಕುಮಾರ್, ಉಪಾಧ್ಯಕ್ಷ ಬಂಗಾರನಾಯಕ, ಪ್ರಧಾನ ಕಾರ್ಯದರ್ಶಿ ರಂಗಸ್ವಾಮಿ, ಕಾರ್ಯದರ್ಶಿ ಅಭಿ, ಪ್ರಮೋದ್ ಪ್ರಸಾದ್, ಆಟೋ ಮಾಲೀಕರು ಮತ್ತಿತರರು ಇದ್ದರು.
ವರದಿ; ಇರಸವಾಡಿ ಸಿದ್ದಪ್ಪಾಜಿ tv8kannada ಚಾಮರಾಜನಗರ