ಸಿನಿಮಾ

ಹೋಟೆಲ್‌ನಲ್ಲಿ ರಶ್ಮಿಕಾ ಮಂದಣ್ಣ ಜೊತೆ ಸಿಕ್ಕಿಬಿದ್ದ ವಿಜಯ್ ದೇವರಕೊಂಡ! ಡೇಟಿಂಗ್‌ ರೂಮರ್ಸ್‌ ಮಧ್ಯೆ ಫೋಟೋಸ್‌ ವೈರಲ್‌

Rashmika Mandanna Vijay deverakonda Dating Photo: ವಿಜಯ್ ದೇವರಕೊಂಡ ಮತ್ತು ರಶ್ಮಿಕಾ ಮಂದಣ್ಣ ಬಹಳ ದಿನಗಳಿಂದ ಡೇಟಿಂಗ್ ಮಾಡುತ್ತಿದ್ದಾರೆ ಎಂದು ವದಂತಿಗಳಿವೆ. ಅವರು ಇದನ್ನು ಎಂದಿಗೂ ದೃಢೀಕರಿಸಲಿಲ್ಲ. ಅವರು ಒಟ್ಟಿಗೆ ಕಾಣಿಸಿಕೊಳ್ಳುವ ಹಲವು ಫೋಟೋಗಳು ಡೇಟಿಂಗ್ ವದಂತಿಯನ್ನು ಹುಟ್ಟುಹಾಕುತ್ತಿವೆ.

ಇತ್ತೀಚೆಗೆ ವಿಜಯ್ ದೇವರಕೊಂಡ ಮತ್ತು ರಶ್ಮಿಕಾ ಮಂದಣ್ಣ ಫೋಟೋವೊಂದು ವೈರಲ್ ಆಗಿದೆ.ರಶ್ಮಿಕಾ ಮಂದಣ್ಣ ಕ್ಯಾಶುಯಲ್ ಉಡುಪು ಧರಿಸಿ ವಿಜಯ್‌ ದೇವರಕೊಂಡ ಜೊತೆ ಹೋಟೆಲ್‌ನಲ್ಲಿರುವ ಫೋಟೋ ರೆಡ್ಡಿಟ್ ನಲ್ಲಿ ವೈರಲ್‌ ಆಗುತ್ತಿದೆ. ರಶ್ಮಿಕಾ ಮಂದಣ್ಣ ಡೆನಿಮ್ ಜೊತೆ ನೀಲಿ ಬಣ್ಣದ ಕ್ರಾಪ್ ಟಾಪ್ ಧರಿಸಿದ್ದಾರೆ ಮತ್ತು ವಿಜಯ್ ದೇವರಕೊಂಡ ಬಿಳಿ ಟೀಶರ್ಟ್‌, ಚೆಕ್ಡ್ ಶರ್ಟ್ ಮತ್ತು ಡೆನಿಮ್‌ ಹಾಕಿದ್ದಾರೆ. ಫೋಟೋ ಶೇರ್ ಆದ ತಕ್ಷಣ ಅಭಿಮಾನಿಗಳು ಪ್ರತಿಕ್ರಿಯಿಸಲು ಆರಂಭಿಸಿದ್ದಾರೆ. ಅನೇಕ ಅಭಿಮಾನಿಗಳು ಅವರನ್ನು ಮುದ್ದಾದ ಜೋಡಿ ಎಂದು ಕರೆಯುತ್ತಿದ್ದಾರೆ.ವಿಜಯ್ ದೇವರಕೊಂಡ ಇತ್ತೀಚೆಗಷ್ಟೇ ತಾವು ಸಿಂಗಲ್‌ ಆಗಿಲ್ಲ ಎಂದು ಹೇಳಿದ್ದರು. ರಶ್ಮಿಕಾ ಮಂದಣ್ಣ ಅವರೊಂದಿಗಿನ ವಿಜಯ್ ದೇವರಕೊಂಡ ಸಂಬಂಧದ ಬಗ್ಗೆ ನಿರಂತರವಾದ ವದಂತಿಗಳು ಹರಡುತ್ತಲೇ ಇರುತ್ತವೆ. ಗೀತಾ ಗೋವಿಂದಂ ಮತ್ತು ಡಿಯರ್ ಕಾಮ್ರೇಡ್ ಬಳಿ ವಿಜಯ್ ದೇವರಕೊಂಡ ಮತ್ತು ರಶ್ಮಿಕಾ ಮಂದಣ್ಣ ಡೇಟಿಂಗ್‌ ವದಂತಿ ಶುರುವಾಯಿತು.

ಇದೀಗ ವಿಜಯ್ ದೇವರಕೊಂಡ ಮತ್ತು ರಶ್ಮಿಕಾ ಮಂದಣ್ಣ ರೆಸ್ಟೋರೆಂಟ್‌ ಒಂದರಲ್ಲಿ ಡಿನ್ನರ್‌ ಮಾಡುತ್ತಿರುವ ಫೋಟೋ ವೈರಲ್‌ ಆಗಿದೆ. ಇದನ್ನು ಕಂಡು ಅಭಿಮಾನಿಗಳು ಬೆರಗಾಗಿದ್ದಾರೆ. ವಿಜಯ್ ದೇವರಕೊಂಡ ಮತ್ತು ರಶ್ಮಿಕಾ ಮಂದಣ್ಣ ಜೋಡಿಯಾಗಿ ಕುಳಿತಿರುವ ಫೊಟೋ ಡೇಟಿಂಗ್‌ ವದಂತಿಗೆ ಪುಷ್ಟಿ ನೀಡಿದಂತಿದೆ.

ವರದಿ : ಪುಣ್ಯ ಗೌಡ ಫಿಲಂ ಬ್ಯೂರೋ tv8kannada ಬೆಂಗಳೂರು

Related Articles

Leave a Reply

Your email address will not be published. Required fields are marked *

Back to top button