Champions Trophy 2ನೇ ಪಂದ್ಯ: ಗಿಲ್ ಅಬ್ಬರ, ಶಮಿ ಮ್ಯಾಜಿಕ್: ಬಾಂಗ್ಲಾ ವಿರುದ್ಧ ಭಾರತಕ್ಕೆ 6 ವಿಕೆಟ್ ಗಳ ಜಯ!

ದುಬೈ : ನಲ್ಲಿ ನಡೆದ ಭಾರತ- ಬಾಂಗ್ಲಾದೇಶದ ನಡುವಿನ 2 ನೇ ಐಸಿಸಿ ಚಾಂಪಿಯನ್ಸ್ ಟ್ರೋಫಿನಲ್ಲಿ ಭಾರತ 6 ವಿಕೆಟ್ ಗಳ ಗೆಲುವು ದಾಖಲಿಸಿದೆ.
ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡ ಬಾಂಗ್ಲಾದೇಶ, 49.4 ಓವರ್ ಗಳಲ್ಲಿ 10 ವಿಕೆಟ್ ಗಳ ನಷ್ಟಕ್ಕೆ 228 ರನ್ ಗಳಿಸಿತು.
ಭಾರತ ಈ ಗುರಿಯನ್ನು ಕೇವಲ 46.3 ಓವರ್ ಗಳಲ್ಲಿ 4 ವಿಕೆಟ್ ನಷ್ಟಕ್ಕೆ 231 ರನ್ ಗಳಿಸಿ 6 ವಿಕೆಟ್ ಗಳ ಗೆಲುವು ಸಾಧಿಸಿದೆ.
ಈ ಪಂದ್ಯದಲ್ಲಿ ಶುಭ್ಮನ್ ಗಿಲ್ 101 (129 ಎಸೆತ) ತಮ್ಮ 8 ನೇ ಒಡಿಐ ಶತಕ ದಾಖಲಿಸುವ ಮೂಲಕ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿತ್ತು. ಗಿಲ್ ಗೆ ಕೆಎಲ್ ರಾಹುಲ್ (41 ರನ್) ಸಾಥ್ ನೀಡಿದರು.
ಬಾಂಗ್ಲಾದೇಶದ ಪರ ತೌಹಿದ್ ಹೃದಾಯ್ 100 ರನ್ (118 ಎಸೆತ) ಹಾಗೂ ಜಾಕರ್ ಅಲಿ 68 ರನ್ (114 ಎಸೆತಗಳು). ಹೆಚ್ಚು ರನ್ ಗಳಿಸಿದರು.
ಭಾರತದ ಬೌಲಿಂಗ್ ವಿಭಾಗದಲ್ಲಿ ಮೊಹಮ್ಮದ್ ಶಮಿ 5 ವಿಕೆಟ್ ಗಳಿಸಿ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು. ಹರ್ಷಿತ್ ರಾಣಾ 3 ವಿಕೆಟ್ ಮತ್ತು ಅಕ್ಷರ್ ಪಟೇಲ್ 2 ವಿಕೆಟ್ ಪಡೆದರು.