ಸಿನಿಮಾ
ಹೊಸಬರ ‘ಜನುಮದ ಜಾತ್ರೆ’ಗೆ ಮೆಚ್ಚುಗೆ
“ಜನುಮದ ಜಾತ್ರೆ’ – ಹೀಗೊಂದು ಶೀರ್ಷಿಕೆಯ ಸಂಪೂರ್ಣ ಹೊಸಬರ ಚಿತ್ರ ಕಳೆದ ವಾರ ಬಿಡುಗಡೆಯಾಗಿತ್ತು. ಹಳ್ಳಿ ಹಿನ್ನೆಲೆಯಲ್ಲಿ ನಡೆಯುವ ಈ ಸಿನಿಮಾಕ್ಕೆ ಮೆಚ್ಚುಗೆ ವ್ಯಕ್ತವಾಗುವ ಮೂಲಕ ಹೊಸಬರ ತಂಡ ಖುಷಿಯಾಗಿದೆ. ಈ ಚಿತ್ರವನ್ನು ದೊಡ್ಮನೆ ಮಂಜುನಾಥ್ ಎಂ ನಿರ್ಮಿಸಿದ್ದಾರೆ. ಆಟೋ ಆನಂದ್ ಈ ಚಿತ್ರದ ನಿರ್ದೇಶಕರು.
ಜನ ಚಿತ್ರಮಂದಿರಕ್ಕೆ ಬರಬೇಕಾದರೆ ಪಕ್ಕಾ ಹಳ್ಳಿ ಸೊಗಡಿನ ದೇಸಿ ಸಿನಿಮಾ ಕೊಡಬೇಕೆಂಬ ಉದ್ದೇಶದಿಂದ “ಜನುಮದ ಜೋಡಿ’ ಚಿತ್ರ ಮಾಡಿದ್ದು, ಗ್ರಾಮೀಣ ಶೈಲಿಯನ್ನು ಸಿನಿಮಾದಲ್ಲಿ ಪ್ರಸ್ತುತ ಪಡಿಸಿದ್ದಾರೆ. ಮಾಟ, ಮಂತ್ರ, ಅದರಿಂದಾಗುವ ತೊಂದರೆ, ಪರಿಹಾರ… ಹೀಗೆ ಹಲವು ವಿಚಾರಗಳನ್ನು ಚಿತ್ರದಲ್ಲಿ ಹೇಳಲಾಗಿದೆ. ಬಹುತೇಕ ಚಿತ್ರೀಕರಣ ಕೂಡಾ ಹಳ್ಳಿಯಲ್ಲೇ ನಡೆದಿದೆ.
ನಾಯಕನಾಗಿ ಮದನ್‌ಕುಮಾರ್, ನಾಯಕಿಯಾಗಿ ಚೈತ್ರಾ ಅಭಿನುಸಿದ್ದು, ಮತ್ತೂಂದು ಜೋಡಿಯಾಗಿ ಮಂಡ್ಯ ಕೆಂಪ ಹಾಗೂ ಅಂಜಲಿ ನಟಿಸಿದ್ದಾರೆ.