ಶ್ರೀಶೈಲ ಭಕ್ತರಿಗೆ ಅನ್ನಸಂತರ್ಪಣೆ ಮಾಡುವ ಮೂಲಕ ಭಕ್ತಿ ಮೆರೆದ ಮಸ್ಕಿ ಪಟ್ಟಣದ ಭಕ್ತ ಗಣ

ಮಸ್ಕಿ : ಶ್ರೀಶೈಲ ಕ್ಷೇತ್ರಕ್ಕೆ ಮಸ್ಕಿ ಮಾರ್ಗವಾಗಿಪಾದಯಾತ್ರೆ ಮಾಡುತ್ತಿರುವ ಸಾವಿರಾರು ಭಕ್ತರಿಗೆ ಮೂರು ವರ್ಷಗಳಿಂದ ಮಹಿಳೆಯರು ಅನ್ನ ಸಂತರ್ಪಣೆ ಮಾಡುತ್ತಿರುವುದು ಶ್ಲಾಘನೀಯ’ ಎಂದು ಮಲ್ಲಿಕಾರ್ಜುನ ದೇವಸ್ಥಾನದ ಪ್ರಧಾನ ಅರ್ಚಕರಾದ ಸಿದ್ದಯ್ಯ ಹಿರೇಮಠಅವರು ಹೇಳಿದರು.
ಪಟ್ಟಣದ ತೇರ ಬಜಾರ್ ನಲ್ಲಿ ಪೂಜಾರಿ ಪೇಟೆ ಹಾಗೂ ತೇರ ಬಜಾರ್ ನ ಮಹಿಳೆಯರು ಕೈಗೊಂಡಿರುವ ಮೂರನೇ ವರ್ಷದ ದಾಸೋಹಕ್ಕೆ ಸೋಮವಾರಚಾಲನೆ ನೀಡಿ ಮಾತನಾಡಿ, ‘ಯುಗಾದಿಯಂದು ಶ್ರೀಶೈಲ ಮಲ್ಲಿಕಾರ್ಜುನ ದರ್ಶನಕ್ಕೆ ವಿಜಯಪುರ, ಬಾಗಲಕೋಟೆ ಸೇರಿ ವಿವಿಧ ಜಿಲ್ಲೆಗಳಿಂದ ಸಾವಿರಾರು ಭಕ್ತರು ಪಾದಯಾತ್ರೆ ಮೂಲಕ ತೆರಳುತ್ತಾರೆ. ಅಂಥ ಭಕ್ತರಿಗೆ ಪೂಜಾರಿ ಪೇಟೆಯ ಮಹಿಳೆಯರುಸೇರಿದಂತೆ ಸುತ್ತ ಮುತ್ತಲಿನ ಮಹಿಳೆಯರು ಸೇರಿ ಭಕ್ತರಿಗೆಪ್ರಸಾದ ವ್ಯವಸ್ಥೆ, ತಂಪು ಪಾನೀಯ ವಿತರಣೆ, ಆರೋಗ್ಯ ತಪಾಸಣೆ, ಮಾಡುವ ಮೂಲಕ ಅಳಿಲು ಸೇವೆ ಮಾಡುತ್ತಿರುವುದು ಉತ್ತಮ ಕೆಲಸ’ ಎಂದರು.
ಹಾಗೂ ಪಟ್ಟಣದ,ಮುದ್ದು ಮಲ್ಲಿಕಾರ್ಜುನ ದೇವಸ್ಥಾನ, ಜಡೆಯ ಶಂಕರಲಿಂಗೇಶ್ವರ ದೇವಸ್ಥಾನ, ನೀಲಕಂಠೇಶ್ವರ ದೇವಸ್ಥಾನ, ಹಳೆಯ ಕ್ಯಾತನಟ್ಟಿ, ಸೂಗಣ್ಣ ಬಾಳೆಕಾಯಿ ಮಿಲ್,ಮಯೂರ ಪ್ರಿಂಟಿಂಗ್ ಪ್ರೆಸ್ ಹತ್ತಿರ,ಮೌನೇಶ್ವರ ದೇವಸ್ಥಾನದ ಬಳಿ ಸೇರಿದಂತೆ ತಾಲ್ಲೂಕಿನ ವಿವಿಧ ಹಳ್ಳಿಗಳಲ್ಲಿ ಪ್ರಸಾದ, ತಂಪು ಪಾನೀಯ, ಉಚಿತ ಔಷಧ ಮಳಿಗೆಗಳನ್ನು ಆರಂಭಿಸಲಾಗಿದೆ.
ಪಾದಯಾತ್ರಿಗಳು ಸಾಗುವ ದಾರಿಯುದ್ದಕ್ಕೂ ಹಣ್ಣು, ಮಜ್ಜಿಗೆ, ಕುಡಿಯುವ ನೀರಿನ ವ್ಯವಸ್ಥೆಯನ್ನು ಪಟ್ಟಣದ ಜನತೆ ಮಾಡುವ ಮೂಲಕ ಭಕ್ತಿ ಸೇವೆ ಸಲ್ಲಿಸಿದ್ದಾರೆ.ಈ ವೇಳೆ, ಪೂಜಾರಿ ಪೇಟೆಯ ಮಹಿಳೆಯರು ಸೇರಿದಂತೆ ಅನೇಕ ಮಹಿಳೆಯರು ಹಾಗೂ ಭಕ್ತರು ಇದ್ದರೂ
ವರದಿ : ಸಿದ್ದಯ್ಯ ಸ್ವಾಮಿ ಹೆಸರೂರು tv8kannada ಮಸ್ಕಿ