ಸುದ್ದಿ

ಈ ಐವರು ಮನೆಗೆ ಬಂದಾಗ ಊಟ ಹಾಕದೇ ಉಪವಾಸ ಕಳುಹಿಸಲೇಬೇಡಿ

ಮೊದಲೆಲ್ಲ ನಮ್ಮ ಪೂರ್ವಜರಿಗೆ ಬಡತನವಿತ್ತು. ಆದರೆ ಮನೆಗೆ ಬಂದವರಿಗೆ ತಮ್ಮ ಕೈಲಾದಷ್ಟು ನೀರು, ಬೆಲ್ಲ, ಅನ್ನ ನೀಡಿ ಕಳುಹಿಸುತ್ತಿದ್ದರು. ಆದರೆ ಇತ್ತೀಚಿಗೆ ಸಂಬಂಧಿಕರು ಬಂದರೂ, ಊಟ ಕೊಡುವ ಅಭ್ಯಾಸ ಸ್ವಲ್ಪ ಕಡಿಮೆ. ಚಹಾ, ಕಾಫಿ ಕೊಟ್ಟು ಸಾಗಿ ಹಾಕಿಬಿಡುವ ಹಲವರು ನಮ್ಮ ನಿಮ್ಮ ಮಧ್ಯೆ ಇದ್ದಾರೆ.

ಆದರೆ ಹಿರಿಯರು ಹೇಳುವ ಪ್ರಕಾರ, ಈ ಐವರು ಮನೆಗೆ ಬಂದಾಗ ನಾವು ಅವರನ್ನು ನಿರ್ಲಕ್ಷಿಸದೇ, ಹೊಟ್ಟೆ ತುಂಬ ಊಟ ಹಾಕಿ ಕಳುಹಿಸಬೇಕಂತೆ.

ಮಗಳು- ಅಳಿಯ: ಮಗಳು- ಅಳಿಯ ಮನೆಗೆ ಬಂದಾಗ, ಅವರನ್ನು ಎಂದಿಗೂ ಉಪವಾಸ ಕಳುಹಿಸಬೇಡಿ. ಅಥವಾ ಟೀ-ಕಾಫಿ, ನೀರು ಕೊಟ್ಟು ಕಳುಹಿಸಿಬಿಡಬೇಡಿ. ಅವರಿಗೆ ಒತ್ತಾಯಪೂರ್ವಕವಾಗಿಯಾದರೂ ಊಟ ಹಾಕಿ ಕಳುಹಿಸಬೇಕು. ಅಳಿಯ- ಮಗಳು- ಅವರ ಮಕ್ಕಳು ಮನೆಗೆ ಬಂದಾಗ, ಅವರನ್ನು ಚೆನ್ನಾಗಿ ನೋಡಿಕೊಂಡು ಕಳುಹಿಸಬೇಕು. ಇದರಿಂದ ಸಂಬಂಧ ಇನ್ನೂ ಗಟ್ಟಿಯಾಗುತ್ತದೆ.

ಸಹೋದರ-ಸಹೋದರಿ: ಸಹೋದರ ಅಥವಾ ಸಹೋದರಿ ಮನೆಗೆ ಬಂದಾಗ, ಅವರಿಗೆ ಹೊಟ್ಟೆ ತುಂಬ ಊಟ ಹಾಕಿ, ಸಿಹಿ ತಿನ್ನಿಸಿ, ಸತ್ಕರಿಸಿ ಕಳುಹಿಸಬೇಕು. ನಿಮ್ಮ ಜೀವನ ಸಂಗಾತಿ ಎಷ್ಟೇ ಒಳ್ಳೆಯವರು, ಶ್ರೀಮಂತರು ಇರಬಹುದು. ಆದರೆ ನಿಮ್ಮ ಸಹೋದರ ಅಥವಾ ಸಹೋದರಿ ಅವರಿಗಿಂತ ಮುಖ್ಯವಾದವರು. ಅವರಿಗೆ ಸಿಗಬೇಕಾದ ಗೌರವ ನೀವು ಕೊಡಲೇಬೇಕು.

ಮಗ-ಸೊಸೆ: ಎಷ್ಟೋ ಕಡೆ ಗಂಡು ಮಕ್ಕಳಿಗೆ ಅಪ್ಪ ಅಮ್ಮ ಗೌರವ ನೀಡುವುದಿಲ್ಲ. ಮಗನನ್ನು ನೋಡಿದರೆ ಆಗುವುದಿಲ್ಲವೆಂಬ ಕಾರಣಕ್ಕೆ, ಸೊಸೆಯನ್ನು ಸಹ ದೂಷಿಸುತ್ತಾರೆ. ಹಲವು ಕಡೆ ಮನೆಗೆ ಬಂದ ಮಗ ಸೊಸೆಗೆ ಒಂದು ಲೋಟ ನೀರು ಬೇಕಾ ಎಂದು ಕೇಳುವ ಸೌಜನ್ಯವನ್ನು ಹಿರಿಯರು ತೋರಿಸುವುದಿಲ್ಲ. ಆದರೆ ಇದು ಒಳ್ಳೆಯ ಬೆಳವಣಿಗೆ ಅಲ್ಲ. ಏಕೆಂದರೆ ನೀವು ಯಾವ ಮಗ-ಸೊಸೆಯನ್ನು ದೂಷಿಸುತ್ತೀರೋ, ಅದೇ ಮಗ ಸೊಸೆಯೇ ನಾಳೆ ನೀವು ಹಾಸಿಗೆ ಹಿಡಿದಾಗ, ನಿಮ್ಮ ಸೇವೆ ಮಾಡಲು ಬೇಕಾಗುತ್ತಾರೆ. ಹಾಗಾಗಿ ಮಗ ಮತ್ತು ಸೊಸೆಯೊಂದಿಗೆ ಪ್ರೀತಿಯಿಂದ ಇರಿ.

Related Articles

Leave a Reply

Your email address will not be published. Required fields are marked *

Back to top button