ಮರೆ ಮಾಚಿದ ಇತಿಹಾಸ. ಮಸ್ಕಿ ಯಲ್ಲಿ ಕೇಳುವವರಿಲ್ಲ ದಂತಾದಎನ್‌ಸಿಇಆರ್‌ಟಿ ಲೋಗೋ .

ಐತಿಹಾಸಿಕ ಲಾಂಛನವನ್ನು
ಜನಪ್ರಿಯ ಗೂಳಿಸುವಲ್ಲಿ ವಿಫಲವಾದ ಜಿಲ್ಲಾ ಆಡಳಿತ.
ಮಸ್ಕಿ : ಸಾಮ್ರಾಟ ಅಶೋಕನೇ ದೇವನಾಂಪ್ರಿಯ ಬಿರುದಾಂಕಿತನು ಎಂಬುದನ್ನು ಲೋಕಕ್ಕೆ ಸ್ಪಷ್ಟಪಡಿಸಿದ ಶಿಲಾಶಾಸನವು ಮಸ್ಕಿಯಲ್ಲಿದೆ. ಇದು ಬಹಳಷ್ಟು ಜನರಿಗೆ ಗೊತ್ತಿರುವ ವಿಷಯವೇ ಆಗಿದೆ. ಆದರೆ ಮಸ್ಕಿಯ ಮಹತ್ವವು ಇಷ್ಟಕ್ಕೇ ಸೀಮಿತವಾಗಿಲ್ಲ.
ಇಡೀ ಭಾರತ ದೇಶದ ಬಹುಪಾಲು ಮಕ್ಕಳು ವ್ಯಾಸಂಗ ಮಾಡುವ ಶಿಕ್ಷಣ ವ್ಯವಸ್ಥೆ ಸಿಬಿಎಸ್‌ಇ ಯದ್ದಾಗಿದೆ. ಈ ಶಿಕ್ಷಣ ವ್ಯವಸ್ಥೆಗೆ ಪಠ್ಯಪುಸ್ತಕಗಳನ್ನು ರೂಪಿಸುವ ಹೊಣೆಗಾರಿಕೆ ಹೊತ್ತಿರುವುದು ಭಾರತ ಸರ್ಕಾರದ ಶಿಕ್ಷಣ ಸಚಿವಾಲಯದಡಿ ಕಾರ್ಯನಿರ್ವಹಿಸುವ ಅತ್ಯುಚ್ಛ ಶಿಕ್ಷಣ ಸಂಸ್ಥೆಯಾದ NCERT. ಈ ಎನ್‌ಸಿಇಆರ್‌ಟಿ ಸಂಸ್ಥೆಯ ಲೋಗೋವನ್ನು ಮಸ್ಕಿ ಯಲ್ಲಿ ಕಾಣಸಿಗುತ್ತದೆ.
ಮಸ್ಕಿ ಬೆಟ್ಟದ ಮಲ್ಲಿಕಾರ್ಜುನ ದೇವಸ್ಥಾನದ ಜೀಣೋದ್ದಾರದ ಸಂದರ್ಭದಲ್ಲಿ ದೇವಾಲಯದ ದಕ್ಷಿಣದ ಗೋಡೆಯಲ್ಲಿ ಹಲವಾರು ಶಿಲ್ಪ ಗಳು ಇದ್ದು ಇದರ ಜೊತೆಗೆ ಎನ್ ಸಿ ಆರ್ ಟಿ ಲಾಂಛನವು ಇದೆ.
ಈ ಲಾಂಛನ ಕಣ ಶಿಲೆಯ
ಚಪ್ಪಡಿ ಕಲ್ಲಿನಿಂದ ರಚಿತಗೊಂಡಿದ್ದು
ಕಲ್ಲಿನ ಗೋಡೆಯಲ್ಲಿ
ಜೋಡಣೆ ಮಾಡಲಾಗಿದೆ.
ಈ ಶಿಲ್ಪದಲ್ಲಿ ಮೂರು ಹಂಸಗಳಿದ್ದು ಅವು ಪರಸ್ಪರ ಒಂದರೊಳಗೊಂದು ತಳುಕು ಹಾಕಿಕೊಂಡಿರುವಂತೆ ಕೆತ್ತಲ್ಪಟ್ಟಿವೆ. ಭಾರತೀಯ ಪರಂಪರೆಯಲ್ಲಿ ಹಂಸವನ್ನು ಜ್ಞಾನದ ಸಂಕೇತವೆಂದೇ ನಂಬಲಾಗಿದೆ. ಹಾಗಾಗಿ ಇಲ್ಲಿರುವ ಮೂರು ಹಂಸಗಳು, ಎನ್‌ಸಿಇಆರ್‌ಟಿ ಸಂಸ್ಥೆಯ ಮೂರು ಪ್ರಮುಖ ಕಾರ್ಯಗಳಾದ
1) ಸಂಶೋಧನೆ & ಬೆಳವಣಿಗೆ (Research and Development),
2) ತರಬೇತಿ (Training) ಹಾಗೂ
3) ವಿಸ್ತರಣೆ (Extension)
ಗಳನ್ನು ಪ್ರತಿನಿಧಿಸುತ್ತವೆ ಎಂದು ವಿವರಿಸಲಾಗಿದೆ. ಶಿಕ್ಷಣದ ಈ ಮೂರು ಕಾರ್ಯಗಳನ್ನು ಸಂಕೇತಿಸುವ ಈ ಮೂರು ಹಂಸಗಳು ಹೀಗೆ ಒಂದರೊಳಗೊಂದು ಪೂರಕವಾಗಿ, ಪರಸ್ಪರ ಪ್ರೇರಕವಾಗಿ ಹೆಣೆದುಕೊಳ್ಳುವ ಮೂಲಕ ಶಾಲಾ ಶಿಕ್ಷಣದ ಗುಣಮಟ್ಟವನ್ನು ಎತ್ತರಿಸುವ ನಿಟ್ಟಿನಲ್ಲಿ ಸಂಸ್ಥೆಯು ಹೊಂದಿರುವ ಮೂಲ ಉದ್ದೇಶದ ಸಾಕಾರಕ್ಕಾಗಿ ದುಡಿಯುತ್ತಿವೆ. ಕಾಶ್ಮೀರದಿಂದ ಕೇರಳದವರೆಗೆ; ಗುಜರಾತಿನಿಂದ ತ್ರಿಪುರಾದವರೆಗೆ ಇಡೀ ಭಾರತದ
ಮಕ್ಕಳು ಸಿಬಿಎಸ್‌ಇ ಪಠ್ಯಕ್ರವನ್ನು ವ್ಯಾಸಂಗ ಮಾಡುತ್ತ, ನಿತ್ಯವೂ ಅವರ ಪಠ್ಯಪುಸ್ತಕಗಳಲ್ಲಿರುವ ಎನ್‌ಸಿಇಆರ್‌ಟಿ ಯ ಈ ಲೋಗೋವನ್ನು ನೋಡುತ್ತವೆ.
ದೇಶದ ಮಾತು ಒತ್ತಟ್ಟಿಗಿರಲಿ, ದಕ್ಷಿಣ ಭಾರತೀಯ ರಾಜ್ಯಗಳ ಮಾತಂತಿರಲಿ, ನಮ್ಮ ಕರ್ನಾಟಕದ ಶಿಕ್ಷಣ ಸಂಸ್ಥೆಗಳು ಬೇಡ ಬಿಡಿ; ರಾಯಚೂರು ಜಿಲ್ಲೆಯಲ್ಲಿನ ಸಿಬಿಎಸ್‌ಇ ಪಠ್ಯಕ್ರಮದ ಶಾಲೆಗಳೂ ಇಲ್ಲಿಗೆ ಹೋದಂತೆ ಕಾಣೆ. ಇಡೀ ದೇಶದ ವಿದ್ಯಾರ್ಥಿಗಳು ಹೆಮ್ಮೆಯಿಂದ ಸಂದರ್ಶಿಸುವ ಶೈಕ್ಷಣಿಕ ಮಹತ್ವದ ತಾಣವಾಗಬಹುದಾದ ಮಸ್ಕಿಯ ಶಿಲಾಶಾಸನ, ಮಲ್ಲಿಕಾರ್ಜುನ ದೇವಾಲದ ಗೋಡೆಯ ಎನ್‌ಸಿಇಆರ್‌ಟಿ ಲೋಗೊ ಮತ್ತು ದೇಶದ ಏಕೈಕ ಕಾರ್ಯನಿರತ ಚಿನ್ನದ ಗಣಿಯಿರುವ ಹಟ್ಟಿ, ಪ್ರಾಗೈತಿಹಾಸಿಕ ನೆಲೆಗಳಿರುವ ಪಿಕಳಿಹಾಳ ಮತ್ತು ಮುದಗಲ್ಲು ಕೋಟೆಗಳನ್ನು ಸೇರಿಸಿ ಶೈಕ್ಷಣಿಕ ಪ್ರವಾಸದ ಹಬ್ ರೂಪಿಸಲು ಪ್ರವಾಸೋದ್ಯಮ ಇಲಾಖೆ ಆಲೋಚಿಸಬೇಕಿದೆ. ಕನಿಷ್ಠ ಮಸ್ಕಿಯ ಸಾಂಸ್ಕೃತಿಕ ಮನಸ್ಸುಗಳಾದರೂ ತಮ್ಮೂರಲ್ಲೇ ಇರುವ ಈ ರಾಷ್ಟ್ರೀಯ ಮಹತ್ವದ ಸ್ಮಾರಕಗಳ ಹತ್ತಿರ ಅವುಗಳ ಮಹತ್ವ ವಿವರಿಸುವ ಒಂದು ಫಲಕವನ್ನಾದರೂ ಬರೆಯಿಸಿ ಹಾಕುವ ನಿಟ್ಟಿನಲ್ಲಿ ಮುಂದಡಿ ಇಡಬೇಕಿದೆ.
ಹೇಳಿಕೆ . ಎನ್‌ಸಿಇಆರ್‌ಟಿ ಸಂಸ್ಥೆಯ ಲೋಗೋವನ್ನು ಮಸ್ಕಿ ಬೆಟ್ಟದ ಮೇಲೆ ಇರುವ ಮಲ್ಲಿಕಾರ್ಜುನ ದೇವಾಲಯದ ಪಡೆದು ಕೊಂಡಿದ್ದು ಮಸ್ಕಿಗೆ ಹೆಮ್ಮೆಯ ಸಂಗತಿ.ಮಸ್ಕಿ ಪಟ್ಟಣದಲ್ಲಿ NCRT ಲಾಂಛನದ ಶಿಲೆಯನ್ನು ಸ್ಥಾಪಿಸಲು ಸ್ಥಳೀಯ ಆಡಳಿತ ಹಾಗೂ ಜಿಲ್ಲಾ ಆಡಳಿತ ಮಂದಾಗಬೇಕು ಡಾ.ಚನ್ನಬಸಪ್ಪ ಮಲ್ಕಂದಿನ್ನಿ ಇತಿಹಾಸ ಉಪನ್ಯಾಸಕರು ಹಾಗೂ ಶಾಸನಗಳ ಸಂಶೋಧಕರು.
✒️ಬರಹ : ಸಿದ್ದಯ್ಯ ಸ್ವಾಮಿ ಹೆಸರೂರ್ tv8kannada ಮಸ್ಕಿ