ದೆಹಲಿ ಪಾರ್ಲಿಮೆಂಟ್ ಏರುತ್ತಿರುವ ನಟ ಶಿವರಾಜ್ ಕುಮಾರ್ !

ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಕ್ಯಾನ್ಸರ್ ಗೆದ್ದು ಚೇತರಿಕೆ ಕಂಡಿದ್ದಾರೆ. ಶೀಘ್ರವೇ ಸಿನಿಮಾ ಕೆಲಸಗಳಲ್ಲಿ ತೊಡಗಿಕೊಳ್ಳಲಿದ್ದಾರೆ. ಈ ಮಧ್ಯೆ ಅವರು ದೆಹಲಿ ಪಾರ್ಲಿಮೆಂಟ್ ಏರುವ ಸುದ್ದಿಯೊಂದು ಹೊರ ಬಿದ್ದಿದೆ. ಹಾಗಂತ ಅವರು ಚುನಾವಣೆಗೆ ಸ್ಪರ್ಧಿಸಿ ಸಂಸದರಾಗುತ್ತಿಲ್ಲ.
ರಾಮ್ ಚರಣ್ ಹಾಗೂ ಶಿವರಾಜ್ಕುಮಾರ್ ‘ಆರ್ಸಿ 16’ ಸಿನಿಮಾದಲ್ಲಿ ನಟಿಸುತ್ತಿದ್ದಾರೆ.
ಈ ಚಿತ್ರಕ್ಕೆ ಬುಚಿ ಬಾಬು ನಿರ್ದೇಶನ ಇದೆ. ಈ ಚಿತ್ರಕ್ಕೆ ಎಆರ್ ರೆಹಮಾನ್ ಸಂಗೀತ ಸಂಯೋಜನೆ ಮಾಡುತ್ತಿದ್ದಾರೆ. ಈ ಚಿತ್ರದ ಕೆಲ ಭಾಗದ ಶೂಟ್ ಕೂಡ ಆಗಿದೆ. ಈ ವಾರ ಶಿವರಾಜ್ ಕುಮಾರ್ ಅವರು ಶೂಟ್ ನಲ್ಲಿ ಭಾಗಿ ಆಗಲಿದ್ದಾರೆ. ಅವರು ದೆಹಲಿ ಪಾರ್ಲಿಮೆಂಟ್ ಏರುತ್ತಿರುವುದು ಸಿನಿಮಾ ಶೂಟ್ಗಾಗಿ.
ದೆಹಲಿ ಪಾರ್ಲಿಮೆಂಟ್ ನಲ್ಲಿ ಕೆಲವು ದೃಶ್ಯಗಳನ್ನು ಶೂಟ್ ಮಾಡುವ ಆಲೋಚನೆ ತಂಡಕ್ಕೆ ಇದೆ. ಈ ದೃಶ್ಯದಲ್ಲಿ ಶಿವರಾಜ್ ಕುಮಾರ್ ಕೂಡ ಇರುತ್ತಾರೆ ಎಂದು ಹೇಳಲಾಗುತ್ತಿದೆ. ಈಗಿನ ಪರಿಸ್ಥಿತಿಯಲ್ಲಿ ಸಂಸತ್ತಿನಲ್ಲಿ ಶೂಟಿಂಗ್ ಗೆ ಅವಕಾಶ ಸಿಗೋದು ದೊಡ್ಡ ಚಾಲೆಂಜ್. ಇದಕ್ಕೂ ತಂಡ ಪ್ಲ್ಯಾನ್ ಮಾಡಿದೆ ಎನ್ನಲಾಗಿದೆ.