ಇತ್ತೀಚಿನ ಸುದ್ದಿ

ವಾಲ್ಮೀಕಿ ಸೇವಾ ಟ್ರಸ್ಟ್ ನಿಂದ ಪತ್ರಕರ್ತ ಇರಸವಾಡಿ ಸಿದ್ದಪ್ಪಾಜಿಗೆ ಸನ್ಮಾನ

ಚಾಮರಾಜನಗರ: ಜ.07; ಅಂಬೇಡ್ಕರ್ ಕ್ರಾಂತಿ ಸೇನೆ ಮಾಧ್ಯಮ ವಿಭಾಗಕ್ಕೆ ರಾಜ್ಯಾಧ್ಯಕ್ಷರಾಗಿ ನೇಮಕಗೊಂಡ ಪತ್ರಕರ್ತ ಇರಸವಾಡಿ ಸಿದ್ದಪ್ಪಾಜಿ ಅವರನ್ನು ವಾಲ್ಮೀಕಿ ಸೇವಾ ಟ್ರಸ್ಟ್ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು.
ಈ ಸಂದರ್ಭದಲ್ಲಿ ಟ್ರಸ್ಟ್ ನ ಅಧ್ಯಕ್ಷರಾದ ಮಹೇಶ್.ಬಿ ಮಾತನಾಡಿ, ಸಿದ್ದಪ್ಪಾಜಿ ಅವರನ್ನು ಮಾಧ್ಯಮ ವಿಭಾಗಕ್ಕೆ ರಾಜ್ಯಾಧ್ಯಕ್ಷರನ್ನಾಗಿ ಆಯ್ಕೆ ಮಾಡಿರುವುದು ಅತೀವ ಸಂತೋಷ ಉಂಟು ಮಾಡಿದೆ, ಅವರು ನೊಂದವರ ದನಿಯಾಗಿ, ಜನಪರ ಕೆಲಸ ಮಾಡಲಿ ಎಂದು ಶುಭ ಹಾರೈಸಿದರು.

ಈ ಸಂದರ್ಭದಲ್ಲಿ ಎಸ್.ಪಿ ಬಾಲಸುಬ್ರಮಣ್ಯಂ ಗಾನಗಂಧರ್ವ ಸಾಂಸ್ಕೃತಿಕ ಕಲಾ ವೇದಿಕೆಯ ಜಿಲ್ಲಾಧ್ಯಕ್ಷ ಎಚ್.ಎಂ. ಶಿವಣ್ಣ ಮಂಗಲ ಹೊಸೂವರು, ನಗರಸಭಾ ಸದಸ್ಯರಾದ ಶಿವರಾಜು, ಹಿರಿಯ ಪತ್ರಕರ್ತರಾದ ಚಂದ್ರಶೇಖರ್.ಹೆಚ್ಎಸ್,
ಮಹದೇವನಾಯಕ, ಸ್ವಾಮಿ ನಾಯ್ಕ, ಮಂಜುನಾಯಕ, ಎಸ್ ಮಹದೇವು ಸೇರಿದಂತೆ ಇತರರಿದ್ದರು.

Related Articles

Leave a Reply

Your email address will not be published. Required fields are marked *

Back to top button