ಭೂಮಿ(Earth) ಮೇಲೆ ಎಂಥೆಂಥಾ ಜನರಿದ್ದಾರೆ ಎಂದು ಆ ದೇವರೇ ಬಲ್ಲ. ಕೆಲವೊಂದು ಘಟನೆಗಳನ್ನು ಕೇಳಿದಾಗ, ನೋಡಿದಾಗ, ಹೀಗೂ ಜನ ಇರುತ್ತಾರಾ ಎಂಬ ಪ್ರಶ್ನೆ(Question) ಮೂಡದೆ ಇರದು. ಆ ರೀತಿ ಚಿತ್ರ ವಿಚಿತ್ರ ಮನಸ್ಥಿತಿಯುಳ್ಳ ಮಾನವರು(Humans) ಈ ಭೂಮಿ ಮೇಲೆ ಇದ್ದಾರೆ. ಚಿಕ್ಕ ವಯಸ್ಸಿಗೆ ಮದುವೆ ಮಾಡಿದರೆ ಏನಾಗುತ್ತೆ ಅನ್ನುವುದಕ್ಕೆ ಈ ಘಟನೆಯೆ ಸಾಕ್ಷಿ.
17 ವರ್ಷದ ವ್ಯಕ್ತಿಯೊಬ್ಬ ಮದುವೆಯಾಗಿ ಒಂದು ತಿಂಗಳಿಗೆ ಹೆಂಡತಿಯನ್ನು ಬೇರೆಯವರಿಗೆ ಮಾರಾಟ( Sold Wife) ಮಾಡಿದ್ದಾನೆ. ಅದರಿಂದ ಬಂದ ಹಣ(Money)ದಲ್ಲಿ ಮೊಬೈಲ್(Mobile) ಖರೀದಿಸಿದ್ದಾನೆ. ಹೌದು, ಒಡಿಶಾದಲ್ಲಿ ಈ ರೀತಿಯ ವಿಚಿತ್ರ ಘಟನೆ ನಡೆದಿದೆ. 17 ವರ್ಷದ ಅಪ್ರಾಪ್ತ ತನ್ನ 26 ವರ್ಷದ ಪತ್ನಿಯನ್ನು 55 ವರ್ಷದ ವ್ಯಕ್ತಿಯೊಬ್ಬನಿಗೆ ಮಾರಾಟ ಮಾಡಿದ್ದಾನೆ. ಅದರಿಂದ ಬಂದ ಹಣ್ಣದಲ್ಲಿ ಮೊಬೈಲ್ ಖರೀದಿಸಿ ಆರಾಮಾಗಿದ್ದ ಪಾಪಿ ಪತಿಯನ್ನು ಪೊಲೀಸರು(Police) ಬಂಧಿಸಿದ್ದು, ಕಂಬಿ ಹಿಂದೆ ಕಳಿಸಿದ್ದಾರೆ.
ಜುಲೈನಲ್ಲಿ ಮದುವೆಯಾಗಿದ್ದ ಜೋಡಿ
ಈ ಅಪ್ರಾಪ್ತ ಬಾಲಕನಿಗೂ 26 ವರ್ಷದ ಯುವತಿಗೆ ಜುಲೈನಲ್ಲಿ ಮದುವೆಯಾಗಿತ್ತು. ಮನೆಯವರ ಒತ್ತಾಯದ ಮೇರೆಗೆ ಯುವತಿ ವಯಸ್ಸಿನಲ್ಲಿ ಅಂತರವಿದ್ದರೂ ಆತನ ಜೊತೆ ವಿವಾಹವಾಗಿದ್ದಳು. ಮದುವೆಯಾದ ಬಳಿಕ ಕೆಲ ದಿನ ಎಲ್ಲವೂ ಚೆನ್ನಾಗಿತ್ತು. ಕೆಲಸ ಹುಡುಕಿಕೊಂಡು ಜೋಡಿ ರಾಜಸ್ಥಾನಕ್ಕೆ ಬಂದಿದ್ದರು. ಇಲ್ಲಿನ ಒಂದು ಇಟ್ಟಿಗೆ ಫ್ಯಾಕ್ಟರಿಯಲ್ಲಿ ಪತಿಗೆ ಕೆಲಸ ಸಿಕ್ಕಿತ್ತು. ಇದಾದ ಬಳಿಕ ಪತಿ, ಪತ್ನಿಯ ಕಡೆ ಹೆಚ್ಚು ಗಮನಕೊಡುವುದನ್ನು ನಿಲ್ಲಿಸಿದ್ದ. ಪ್ರತಿದಿನ ಕುಡಿದು ಬಂದು ಹೆಂಡತಿ ಜೊತೆ ಗಲಾಟೆ ಮಾಡುತ್ತಿದ್ದ.