ಇತ್ತೀಚಿನ ಸುದ್ದಿ

ಬಡಜನರಿಗೆ ಸಹಾಯ ಮಾಡುವುದೇ ಮನಷ್ಯನ ಜನ್ಮ ಸಾರ್ಥಕ: ಜಿಲ್ಲಾಧ್ಯಕ್ಷರಾದ ಪರಶಿವಮೂರ್ತಿ

ಅಸಹಾಯಕ ಜನರಿಗೆ ಸಹಾಯ ಮಾಡುವುದೆ ಮನುಷ್ಯ ಜನ್ಮದ ಸಾರ್ಥಕತೆ ಎಂದು ಭ್ರಷ್ಟಾಚಾರ ವಿರೋಧಿ ಸಂಘಟನೆಯ ಜಿಲ್ಲಾಧ್ಯಕ್ಷ ಪರಶಿವಮೂರ್ತಿ ಅಭಿಪ್ರಾಯಪಟ್ಟರು.

ಯಳಂದೂರು: ತಾಲೂಕಿನ ಯರಗಂಬಳ್ಳಿ ಗ್ರಾಮದಲ್ಲಿರುವ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ -2 ರಲ್ಲಿ ಗ್ರಾಮದ ಶೋಭಾ ಚಾಮರಾಜನಗರ ಮುಕ್ತ ವಿಶ್ವವಿದ್ಯಾನಿಲಯದ ನೌಕರರಾದ ಮಹದೇಶ್ ದಂಪತಿಗಳು ಶಾಲೆಯ ಆರು ಬಡ ವಿದ್ಯಾರ್ಥಿಗಳನ್ನು ದತ್ತು ಪಡೆದು ಅವರಿಗೆ ಕಲಿಕಾ ಸಾಮಾಗ್ರಿಗಳ ವಿತರಿಸುವ ಕಾರ್ಯಕ್ರಮದಲ್ಲಿ ಮಾತಾನಾಡಿದ ಅವರು . ಮಹದೇಶ್ ರವರು ನನ್ನ ಬಾಲ್ಯದ ಗೆಳೆಯ. ಸುಮಾರು ವರ್ಷಗಳಿಂದ ಗೆಳೆಯ ಮಹದೇಶ ರವರು ಅಸಹಾಯಕರಿಗೆ ಹಾಗೂ ಬಡ ವಿದ್ಯಾರ್ಥಿಗಳಿಗೆ ಸಹಾಯ ಮಾಡುತ್ತ ಬಂದಿದ್ದಾರೆ.ಹಾಗೂ ನಮ್ಮ ಗ್ರಾಮದಲ್ಲೂ ಸಹ ಬಡಜನರಿಗೆ ತಮ್ಮ ಕೈಲಾದ ಸಹಾಯವನ್ನು ಮಾಡುತ್ತ ಬಂದಿದ್ದಾರೆ ಇಂತ ಗೆಳೆಯನನ್ನು ಪಡೆದ ನಾನೆ ಪುಣ್ಯವಂತ ಎಂದು ಪರಶಿವಮೂರ್ತಿ ಬಣ್ಣಿಸಿದರು.

ನಂತರ ದಾನಿಗಳಾದ ಚಾಮರಾಜನಗರ ಮುಕ್ತ ವಿಶ್ವವಿದ್ಯಾನಿಲಯದ ನೌಕರರಾದ ಮಹದೇಶ್ ರವರು ಮಾತನಾಡಿ ನಮ್ಮ ಗ್ರಾಮದ ಶಾಲೆಯ ಆರು ಬಡ ವಿದ್ಯಾರ್ಥಿಗಳನ್ನು ನಾಲ್ಕುವರ್ಷಗಳವರೆಗೆ ದತ್ತು ಪಡೆದು ಅಂತಹ ವಿದ್ಯಾರ್ಥಿಗಳಿಗೆ ಬ್ಯಾಗ್, ನೋಟ್ ಬುಕ್, ಬಟ್ಟೆ ಹಾಗೂ ಕಲಿಕಾ ಸಾಮಾಗ್ರಿಗಳನ್ನು ವಿತರಿಸಲಾಗಿದು ಅಲ್ಲದೆ ಹೊರಗೆ ಆರೋಗ್ಯ ಸಮಸ್ಯೆ ಬಂದರೂ ಆರೋಗ್ಯ ಕಾಪಾಡಿಕೊಳ್ಳುವ ನಿಟ್ಟಿನಲ್ಲಿ ಅವರ ಖಾತೆಗೆ ಹಣ ಸಂದಾಯ ಮಾಡಿ ಅವರ ಶೈಕ್ಷಣಿಕ ಅಭಿವೃದ್ಧಿಗೆ ಹೆಚ್ಚಿನ ಕಾಳಜಿ ವಹಿಸುವುದಾಗಿ ಭರವಸೆ ನೀಡಿದರು
ನಂತರ ದಾನಿಗಳಿಗೆ ಶಾಲೆಯ ಪರವಾಗಿ ಸನ್ಮಾನ ಮಾಡಿ ಗೌರವಿಸಲಾಯಿತು.

ಈ ಸಂದರ್ಭದಲ್ಲಿ ದಾನಿಗಳಾದ ಶೋಭಮಹದೇಶ್, ಮಹದೇಶ್, ಸಿದ್ದರಾಜು, ಸಿಆರ್ ಪಿ ರೇಚಣ್ಣ ,ಚಿಂತಕ ಸುಂದರ್ ಕಲಿವೀರ್ , ಮುಖ್ಯಶಿಕ್ಷಕ ದೊಡ್ಡರಾಯಮ್ಮ ಶಿಕ್ಷಕ ರವಿಕುಮಾರ್ ,,ಶಾಂತರಾಜು, ಮಹದೇವಸ್ವಾಮಿ, ರಾಜೇಂದ್ರ, ಆದರ್ಶಕುಮಾರ್, ನಂದೀಶ್ ರಂಗಸ್ವಾಮಿ, ಪರಸಯ್ಯ, ರಘು, ನಂಜುಂಡಸ್ವಾಮಿ ನಾಗರಾಜು, ಪುಟ್ಟಸ್ವಾಮಿ, ಮುಂತಾದವರು ಹಾಜರಿದ್ದರು.

ವರದಿ: ಎಸ್. ಪುಟ್ಟಸ್ವಾಮಿಹೊನ್ನೂರು
tv8lannadaಯಳಂದೂರು

Related Articles

Leave a Reply

Your email address will not be published. Required fields are marked *

Back to top button