Video: ಮನಮೋಹನ್ ಸಿಂಗ್ ಹೇಳುವ ಬದಲು ಮೋದಿ ನಿಧನ ಎಂದ ಆಜ್ ತಕ್ ನ್ಯೂಸ್ ಆಯಂಕರ್.!

ಮುಂಬೈ : ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರು ನಿಧನ ಹೊಂದಿದ ಸುದ್ದಿಯನ್ನು ಓದುವ ಭರದಲಿ ಹಾಲಿ ಪ್ರಧಾನಿ ನರೇಂದ್ರ ಮೋದಿಯವರ ಹೆಸರನ್ನು ಹೇಳಿ ನ್ಯೂಸ್ ಆಯಂಕರ್ ಒಬ್ಬರು ಎಡವಟ್ಟು ಮಾಡಿಕೊಂಡಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ʼಆಜ್ ತಕ್ʼ ಸುದ್ದಿವಾಹಿನಿಯ ಮಹಿಳಾ ನ್ಯೂಸ್ ಆಯಂಕರ್ ಗುರುವಾರ ರಾತ್ರಿ (ಡಿ.26 ರಂದು) ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರು ವಿಧಿವಶರಾದ ಸುದ್ದಿಯನ್ನು ಬ್ರೇಕ್ ಮಾಡುವ ಭರದಲ್ಲಿ ಹಾಲಿ ಪ್ರಧಾನಿ ನರೇಂದ್ರ ಮೋದಿ ಅವರ ಹೆಸರನ್ನು ಹೇಳಿದ್ದಾರೆ.
ಸುದ್ದಿ ವಾಚಕಿ ಹೇಳಿದ್ದೇನು?: “ಇದು ಏಮ್ಸ್ ದಿಲ್ಲಿʼ ಆಸ್ಪತ್ರೆಯ ಪ್ರತಿಕಾ ಪ್ರಕಟಣೆಯನ್ನು ನಾವು ತೋರಿಸುತ್ತಿದ್ದೇವೆ. ಇದರಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ 92ರ ವರ್ಷದಲ್ಲಿ.. ಎಂದು ಹೇಳುತ್ತಲ್ಲೇ ಮಾಜಿ ಪ್ರಧಾನ ಮಂತ್ರಿ ಮನಮೋಹನ್ ಸಿಂಗ್ ಅವರು 92ರ ವರ್ಷದಲ್ಲಿ ನಿಧನ ಹೊಂದಿದ್ದಾರೆ ಎಂದು ತಪ್ಪನ್ನು ಕೂಡಲೇ ತಿದ್ದಿಕೊಂಡಿದ್ದಾರೆ.
ಆದರೆ ನೆಟ್ಟಿಗರು ಈ ಕೆಲ ಸೆಕೆಂಡ್‌ಗಳ ವಿಡಿಯೋವನ್ನು ಟ್ರೋಲ್ ಮಾಡಿದ್ದಾರೆ.
ಚಾನೆಲ್ ಅವರು ಅಧಿಕಾರದಲ್ಲಿರುವ ಕೇಂದ್ರ ಸರ್ಕಾರದ ವಿರುದ್ಧ ಗುಲಾಮಗಿರಿ ತೋರುತ್ತಿದೆ ಎಂದು ಕೆಲವರು ಅಪಹಾಸ್ಯ ಮಾಡಿದ್ದಾರೆ. ‘ಚಾನೆಲ್ ಧೂಮಪಾನ ಮಾಡುತ್ತಿದೆ’ ಎಂದು ತಮಾಷೆಯಾಗಿ ಕೆಲವರು ಕಮೆಂಟ್ ಮಾಡಿದ್ದಾರೆ. ಇನ್ನು ಕೆಲವರು ಚಾನೆಲ್ ಅವರಿಗೆ ಛೀಮಾರಿ ಹಾಕಿದ್ದಾರೆ.
https://x.com/indian_armada/status/1872338649804919220?ref_src=twsrc%5Etfw%7Ctwcamp%5Etweetembed%7Ctwterm%5E1872338649804919220%7Ctwgr%5E%7Ctwcon%5Es1_c10&ref_url=https%3A%2F%2Fapi-news.dailyhunt.in%2F
https://x.com/ankituttam/status/1872352568065802600?ref_src=twsrc%5Etfw%7Ctwcamp%5Etweetembed%7Ctwterm%5E1872352568065802600%7Ctwgr%5E%7Ctwcon%5Es1_c10&ref_url=https%3A%2F%2Fapi-news.dailyhunt.in%2F