ಡಾ. ರಾಜ್ಕುಮಾರ್(Dr.Rajkumar) ಅವರ ಬಂಗಾರದ ಮನುಷ್ಯ ಸಿನಿಮಾ(Movie) ನೋಡಿ, ಅದೆಷ್ಟೋ ಮಂದಿ ಸಿಟಿ ಬಿಟ್ಟು ಊರಿನತ್ತ ತೆರಳಿ ಉಳಿಮೆ ಮಾಡುವುದನ್ನು ಕಲಿತರು. ಈ ರೀತಿಯ ಒಳ್ಳೆಯ ಅಂಶಗಳನ್ನು ಸಿನಿಮಾದಿಂದ ಕಲಿತರೆ ಒಳಿತು. ಆದರೆ ದಂಡುಪಾಳ್ಯ ಸಿನಿಮಾ ನೋಡಿ ಅದೇ ರೀತಿ ಕೊಲೆ ಮಾಡುವುದನ್ನ ಕಲಿತ ಗ್ಯಾಂಗ್ವೊಂದನ್ನ ಪೊಲೀಸರು ಬಂಧಿಸಿದ್ದರು. ಸಿನಿಮಾ ಅಂದರೆ ಒಳ್ಳೆಯದ್ದು, ಕೆಟ್ಟದ್ದು ಎರಡು ಇರುತ್ತೆ.
ನಾವು ಮಾತ್ರ ಒಳ್ಳೆಯದನ್ನೇ ಆರಿಸಿಕೊಳ್ಳಬೇಕು, ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಅದರಂತೆ ಹಾಲಿವುಡ್(Hollywood)ನ ಬ್ಯಾಟ್ಮ್ಯಾನ್ ಸಿನಿಮಾ ಯಾರಿಗೆ ಗೊತ್ತಿಲ್ಲ ಹೇಳಿ. ಎಲ್ಲರಿಗೂ ಬ್ಯಾಟ್ಮ್ಯಾನ್(Batman) ಸಿನಿಮಾ ಅಚ್ಚುಮೆಚ್ಚು. ಅದರಲ್ಲೂ ಆ ಸಿನಿಮಾದಲ್ಲಿರುವ ವಿಲನ್ ಜೋಕರ್(Joker) ಪಾತ್ರವೇ ಬ್ಯಾಟ್ಮ್ಯಾನ್ಗಿಂತ ಹೆಚ್ಚು ಜನಪ್ರಿಯ. ಆ ಸಿನಿಮಾ ಬಿಡುಗಡೆಯಾದಗಿನಿಂದ ಇಲ್ಲಿಯವರೆಗೂ ಆ ಜೋಕರ್ ಪಾತ್ರ ಎಲ್ಲರ ಮನಸ್ಸಲ್ಲಿ ಅಚ್ಚಳಿಯದೆ ಕುಳಿತಿಕೊಂಡಿದೆ. ಆದರೆ ಜಪಾನಿ(Japan)ನ ಟೋಕಿಯೋ(Tokyo)ದಲ್ಲಿ ವ್ಯಕ್ತಿಯೊಬ್ಬ ಬ್ಯಾಟ್ಮ್ಯಾನ್ ಸಿನಿಮಾದ ಜೋಕರ್ನಂತೆ ಡ್ರೆಸ್(Dress) ಧರಿಸಿ, ಟ್ರೈನ್ ಒಳಗೆ ಹುಚ್ಚಾಟ ಪ್ರದರ್ಶಿಸಿದ್ದಾನೆ. ಸಿಕ್ಕ ಸಿಕ್ಕವರಿಗೆ ಚಾಕುವಿನಿಂದ ಚುಚ್ಚಿದ್ದಾನೆ.
17 ಮಂದಿಗೆ ಚುಚ್ಚಿದ ಜೋಕರ್ ಡ್ರೆಸ್ ಧರಿಸಿದ್ದ ವ್ಯಕ್ತಿ
ವಿಶ್ವದ ಅತ್ಯಂತ ಬ್ಯುಸಿ ಟ್ರೈನ್ ಕಿಯೋ ಎಕ್ಸ್ಪ್ರೆಸ್ ಟ್ರೇನ್ನಲ್ಲಿ ಈ ದುರಂತ ನಡೆದಿದೆ. ನಿನ್ನೆ ಸಂಜೆ ಸಾವಿರಾರು ಮಂದಿ ಈ ಟ್ರೈನ್ನಲ್ಲಿ ಪ್ರಯಾಣಿಸುತ್ತಿದ್ದರು. ಇದ್ದಕ್ಕಿದ್ದ ಹಾಗೇ ಬ್ಯಾಟ್ಮ್ಯಾನ್ ಸಿನಿಮಾದ ಜೋಕರ್ ಪಾತ್ರದಂತೆ ವ್ಯಕ್ತಿಯೊಬ್ಬ ವೇಷ ಧರಿಸಿ ಎಂಟ್ರಿ ಕೊಟ್ಟಿದ್ದ. ಇದಾದ ಕೆಲ ನಿಮಿಷಗಳ ಬಳಿಕ ಬ್ಯಾಟ್ಮ್ಯಾನ್ ಸಿನಿಮಾದ, `ನಿಮ್ಮ ಮುಖದ ಮೇಲೆ ನಗು ಬರುವಂತೆ ಮಾಡುತ್ತೇನೆ’ (Lets put a Smile on Your Face)ಎಂಬ ಫೇಮಸ್ ಡೈಲಾಗ್ ಹೇಳಿದ್ದಾನೆ. ಟ್ರೈನ್ನಲ್ಲಿದ್ದವರಿಗೆ ಈ ಡೈಲಾಗ್ ಕೇಳಿ ಭಯವಾಗಿತ್ತು. ಇದಾದ ಕೆಲ ಸೆಕೆಂಡ್ಗಳಲ್ಲಿ ವ್ಯಕ್ತಿ ಸಿಕ್ಕ ಸಿಕ್ಕವರ ಮೇಲೆ ಚಾಕುವಿನಿಂದ ಹಲ್ಲೆ ಮಾಡಿದ್ದಾನೆ.