ರಾಜ್ಯ

ಕೊಟ್ಟೂರಿನಲ್ಲಿ ಸಂಭ್ರಮದಿಂದ ವಿಜಯದಶಮಿ ಆಚರಣೆ

ಕೊಟ್ಟೂರು: ಪಟ್ಟಣದ ಆಸಂಖ್ಯಾತ
ಭಕ್ತರ ಆರಾಧ್ಯ ದೇವರು ಶ್ರೀ ಗುರು ಬಸವೇಶ್ವರ ಸ್ವಾಮಿಯ ದೇಗುಲದಲ್ಲಿ
ವಿಜಯದಶಮಿ ನಿಮಿತ್ತ ಶನಿವಾರ ನಸುಕಿನಿಂದಲೇ
ಸಡಗರ ಸಂಭ್ರಮದಿಂದ ಭಕ್ತರ ಸಮುಖದಲ್ಲಿ ಬನ್ನಿ ಮುಡಿದರು‌
.


ಪ್ರತಿವರ್ಷ ಪದ್ಧತಿಯಂತೆ ಶ್ರೀ ಮಠದಲ್ಲಿ ಸ್ವಾಮಿಗೆ
ಸಕಲ ಪೂಜಾ ಕೈಂಕರ್ಯಗಳನ್ನು ನೆರವೇರಿಸಿ ಕೊಂಡು ಬರಲಾಗುತ್ತಿದ್ದು
ಅಕ್ಬರ್ ಬಾದಷಾನು ಕೊಟ್ಟಿರುವ ಖಡ್ಗ(ಪಿರಂಗಿ)ಯನ್ನು
ಹೊನ್ನ ಪಲ್ಲಕ್ಕಿಯಲ್ಲಿ ಪ್ರತಿಷ್ಠಾಪಿಸಿ, ಶ್ರೀ ಸ್ವಾಮಿಯ ಆಯಗಾರರು ಮತ್ತು ಧರ್ಮಕರ್ತರು ಸಹ ಧರ್ಮಕರ್ತರು, ಅರ್ಚಕರು ಮತ್ತು ದೇವಾಲಯದ ಸಿಬ್ಬಂದಿ, ಭಕ್ತರು ಸ್ವಾಮಿಯ ಬಿರುದಾವಳೆಗಳ
ಘೋಷಣೆಯೊಂದಿಗೆ ಬನ್ನಿ ಮಂಟಪಕ್ಕೆ ಸಾಗಿದರು.

ಶ್ರೀ ಸ್ವಾಮಿಯ ಪಲ್ಲಕ್ಕಿ ಮುಂದೆ ಕೊಟ್ಟೂರೇಶ್ವರ ಸ್ವಾಮಿಯ
ಕ್ರೀಯಾ ಮೂರ್ತಿಗಳು ಆರ್ ಎಂ ಶಿವಪ್ರಕಾಶ ಸ್ವಾಮಿಗಳು
ಸಾನಿಧ್ಯದಲ್ಲಿ ಚಾಲನೆ ನೀಡಿದರು. ಪ್ರಧಾನ ಧರ್ಮಕರ್ತ ಶೇಖರಯ್ಯ ಹಾಗೂ ಅರ್ಚಕರು ಸಕಲವಾದ್ಯಗಳು, ಸಮಳ, ಮೇಳ ಮತ್ತು ನಂದಿಕೋಲು ಕುಣಿತದೊಂದಿಗೆ
ಶ್ರೀ ಸ್ವಾಮಿಯ ಉತ್ಸವ ಮೂಲಕ ಸ್ವಾಮಿಯೊಂದಿಗೆ
ಬನ್ನಿ ಮಂಟಪಕ್ಕೆ ಸಾಗಿದರು. ನಂತರ ಕ್ರೀಯಾ ಮೂರ್ತಿಗಳು
ಖಡ್ಗವನ್ನು ಬನ್ನಿ ಮರಕ್ಕೆ ಸ್ಪರ್ಶಿಸಿ ಪೂಜೆ ಸಲ್ಲಿಸಿದರು. ಶ್ರೀ ಸ್ವಾಮಿ ಬನ್ನಿ ಮುಡಿಯುತ್ತಿದಂತೆ ಭಕ್ತರು ನಿಂತಲ್ಲಿ ಕಾಯಿಗಳನ್ನು ಒಡೆದು ಹಣ್ಣು ಕಾಯಿಗಳ ನೈವೆದವನ್ನು ದೇವರಿಗೆ ಸಮರ್ಪಿಸಿದರು. ನಂತರ ಅರ್ ಎಂ ಶಿವ ಪ್ರಕಾಶ
ಸ್ವಾಮಿಗಳು ದೇವರಿಂದ ಭಕ್ತದಿಗಳು ಬನ್ನಿ ಪತ್ರೆ ಪಡೆದು ನಮಸ್ಕರಿಸಿ ಅಶೀರ್ವಾದ ಪಡೆದು ಕೊಂಡರು. ಭಕ್ತರು ಬನ್ನಿ ಮುಡಿದು ಬನ್ನಿ ಮಂಟಪದಿಂದ ಹಿಂತಿರುಗುತ್ತಿದ್ದಂತೆ ಪ್ರೀತಿ ಮತ್ತು ಬಾಂಧವ್ಯದ ಸಂಕೇತವಾದ
ಬನ್ನಿಯನ್ನು ವಿನಿಮಯ ಮಾಡಿಕೊಂಡು ‘ಬನ್ನಿ ಕೊಟ್ಟು ಬಂಗಾರದಂತೆ ಇರಲಿ’ ಎಂದು ಶುಭಕೋರಿದರು.

ಪಲ್ಲಕ್ಕಿಯನ್ನು ಶ್ರೀ ಸ್ವಾಮಿಯ ಮಠಕ್ಕೆ ಸಾಗಿಸಿ ಶ್ರೀ ಸ್ವಾಮಿಗೆ
ಮಂಗಳಾರತಿ ಮೂಲಕ ಸಂಭ್ರಮ ಮುಕ್ತಾಯಗೊಂಡಿತು. .
ಆಯುಧಪೂಜೆ ದಿನದಂದು ಪಟ್ಟಣದ ಪೋಲಿಸ್ ಇಲಾಖೆ,
ಜೆಸ್ಕಾಂ, ಪಟ್ಟಣ ಪಂಚಾಯ್ತಿ, ಇತರೆ ಮತ್ತು ಖಾಸಗಿ ಅಂಗಡಿ, ಇ
ಮಿಲುಗಳು, ಸಿಡ್ಸ್ ಕಂಪನಿಗಳು, ಕೈಗಾರಿಕಾ ತರಬೇತಿ ಸಂಸ್ಥೆಗಳು ಸೇರಿದಂತೆ ಕೃಷಿ ಉಪಕರಣಗಳ ಕೇಂದ್ರ ಮತ್ತು ಮನೆಗಳಲ್ಲಿ ಆಯುಧ ಪೂಜೆಯನ್ನು ಸಂಭ್ರಮದಿಂದ ಆಚರಣೆ ಮಾಡಿದರು.

ವರದಿ : ಚಗಟೇರಿ ಕೋಟ್ರೇಶ್

Related Articles

Leave a Reply

Your email address will not be published. Required fields are marked *

Back to top button