ಇತ್ತೀಚಿನ ಸುದ್ದಿ

ದಾವಣಗೆರೆಯಲ್ಲಿ ನಡೆಯುತ್ತಿರುವ ವೃತ್ತಿ ರಂಗೋತ್ಸವದಲ್ಲಿ ಸ್ಥಳೀಯ ಕಲಾವಿದರ ಕಂಪನಿಗೆ ಅವಕಾಶ ನೀಡದೆ ಬೇರೆಯವರಿಗೆ ಅವಕಾಶ ನೀಡಿರುವುದು ಖಂಡನೀಯ.

ಮೂರು ದಿನ ರಾಷ್ಟ್ರೀಯ ವೃತ್ತಿ ರಂಗೋತ್ಸವ ಆಯ್ಕೆಯಲ್ಲಿ ಸ್ಥಳೀಯ ಕಲಾವಿದರಿಗೆ ಅವಕಾಶ ಇಲ್ಲ.

ದಾವಣಗೆರೆ: ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಲ್ಲಿ ಸಾಂಸ್ಕೃತಿಕ ಕಾರ್ಯಕ್ರಮ ಇಲ್ಲದಿರುವುದು. ಇದನ್ನು ನಂಬಿಕೊಂಡು ಹಲವಾರು ಕಲಾವಿದರ ಬದುಕು ಕಟ್ಟಿಕೊಂಡು ಅತ್ಯಂತ ಸಂಕಷ್ಟದಲ್ಲಿದ್ದಾರೆ.ಮೂರು ದಿನ ದಾವಣಗೆರೆಯಲ್ಲಿ ಮಾರ್ಚ್ 15 ರಿಂದ 17ರವರೆಗೆ ರಾಷ್ಟ್ರೀಯ ವೃತ್ತಿ ರಂಗೋತ್ಸವ ಜರಗಲಿದದ್ದು. ಕಲಾವಿದರ ಆಯ್ಕೆಯಲ್ಲಿ ಸ್ಥಳೀಯ ಕಲಾವಿದರಿಗೆ ಅವಕಾಶ ನೀಡದಿರುವುದು ವಿಪರ್ಯಾಸ ಸಂಗತಿ.ಇದನ್ನು ಖಂಡಿಸಿದದಾವಣಗೆರೆಯ ವೃತ್ತಿ ರಂಗಭೂಮಿ ಪ್ರಜ್ಞಾವಂತ ಕಲಾವಿದರು ಬಹಿಷ್ಕರಿಸುತ್ತಿದ್ದು, ವೃತ್ತಿ ರಂಗಭೂಮಿ ಬಗ್ಗೆ ಯಾವುದೇ ಮಾಹಿತಿ ಇಲ್ಲವ ನಿರ್ದೇಶನಕನ್ನು ಆ ಸ್ಥಾನದಿಂದ ಬಜಾ ಮಾಡುವಂತೆ ರಾಜ್ಯ ವೃತ್ತಿ ರಂಗಭೂಮಿ ಕಲಾವಿದರ ಸಂಘ ಅಧ್ಯಕ್ಷ ಎ.ಭದ್ರಪ್ಪ ಒತ್ತಾಯಿಸಿದರು.

ಸುದ್ದಿಗಾರೊಂದಿಗೆ ಮಾತನಾಡಿದ ಅವರು, ದಾವಣಗೆರೆಯಲ್ಲಿ ನಡೆಯುತ್ತಿರುವ ವೃತ್ತಿ ರಂಗೋತ್ಸವದಲ್ಲಿ ಸ್ಥಳೀಯ ಕಲಾವಿದರ ಕಂಪನಿಗೆ ಅವಕಾಶ ನೀಡದೆ ಬೇರೆಯವರಿಗೆ ಅವಕಾಶ ಮಾಡಿ ಕೊಡಲಾಗಿದೆ. ದಾವಣಗೆರೆ ವೃತ್ತಿ ರಂಗಭೂಮಿ ರಂಗಾಯಣದ ನಿರ್ದೇಶಕರ ಸ್ವಜನ ಪಕ್ಷಪಾತ, ಸ್ಥಳೀಯರ ಕಡೆಗಣನೆ ವಿರೋಧಿಸಿ ವೃತ್ತಿ ರಂಗಭೂಮಿ ಕಲಾವಿದರ ಸಂಘ ಮತ್ತು ವೃತ್ತಿ ರಂಗಭೂಮಿ ಕಲಾವಿದರ ಒಕ್ಕೂಟದಿಂದ ಬಹಿಷ್ಕಾರದ ನಿರ್ಧಾರ ತೆಗೆದುಕೊಂಡಿದ್ದಾರೆ. ಮೂರು ದಿನಗಳ ಕಾಲ ನಡೆಯುವ ರಂಗೋತ್ಸವದ ಯಾವುದೇ ಕಾರ್ಯಕ್ರಮದಲ್ಲಿ ಭಾಗವಹಿಸುವುದಿಲ್ಲ ಎಂದು ತಿಳಿಸಿದರು.ವೃತ್ತಿ ರಂಗಭೂಮಿಗೆ ಸಂಬಂಧವೇ ಇಲ್ಲದ ಅದರ ಬಗ್ಗೆ ಅರಿವಿಲ್ಲದ ವ್ಯಕ್ತಿಯನ್ನು ನಿರ್ದೇಶಕ ಸ್ಥಾನಕ್ಕೆ ಆಯ್ಕೆ ಮಾಡಲಾಗಿದೆ.

ಸರ್ಕಾರ ಯಾವ ಮಾನ ದಂಡದ ಆಧಾರದ ಮೇಲೆ ಇವರನ್ನು ಆಯ್ಕೆ ಮಾಡಿದಿಯೋ ತಿಳಿದಿಲ್ಲ. ವೃತ್ತಿ ರಂಗಭೂಮಿಯ ಅಭಿವೃದ್ಧಿ, ರಂಗಭೂಮಿ ಕಲಾವಿದರನ್ನು ಮೇಲಕ್ಕೆ ತರುವ ಯಾವ ಉದ್ದೇಶಗಳು ಅವರಲ್ಲಿ ಕಾಣುತ್ತಿಲ್ಲ. ಎಲ್ಲರನ್ನೂ ಹೀನಾಯವಾಗಿ ಕಾಣುತ್ತಾರೆ.ಆದ್ದರಿಂದ ಅವರನ್ನು ನಿರ್ದೇಶಕ ಸ್ಥಾನದಿಂದ ವಜಾ ಮಾಡುವಂತೆ ಒತಾಯಿಸಿದರು.ತನ್ನ ಸ್ವಹಿತಾಸಕ್ತಿಗೆ ನಿರ್ದೇಶಕರಾಗಿರುವುದು ಕೇವಲ ಯಾವುದೋ ಪ್ರಗತಿಪರರ ಶಿಫಾರಸ್ಸಿನ ಮೇರೆಗೆ, ಇದಲ್ಲದೇ ರಾಷ್ಟ್ರೀಯ ರಂಗೋತ್ಸವ ಕಾರ್ಯಕ್ರಮದಲ್ಲಿ ಸ್ಥಳೀಯ ಕಲಾವಿದರನ್ನು ನಿರ್ಲಕ್ಷ್ಯ ಮಾಡುತ್ತಿದ್ದಾರೆ. ಅಲ್ಲದೇ ಕೈ ಬೆರಳೆಣಿಕೆಯಷ್ಟು ಕಲಾವಿದರಿಗೆ ಆಹ್ವಾನ ನೀಡಿ, ನಮ್ಮ ನಮ್ಮಲ್ಲೇ ಕಂದಕ ಸೃಷ್ಟಿ ಮಾಡುತ್ತಿದ್ದಾರೆ ಎಂದರು.ಸಂಘದ ತುರವನೂರು ಅಹಮದ್ ಷರೀಫ್ ಮಾತನಾಡಿ, ವೃತ್ತಿ ರಂಗಭೂಮಿ ರಂಗಾಯಣ ನಿರ್ದೇಶಕರಾಗಿರುವವರಿಗೆ ವೃತ್ತಿ ರಂಗಭೂಮಿಯ ಯಾವುದೇ ಚಟುವಟಿಕೆಗೆ ಸಂಬಂಧವೇ ಇಲ್ಲ. ಅಂತಹವರು ಯಾರದ್ದೋ ಶಿಫಾರಸು ಮಾಡಿ ನಿರ್ದೇಶಕ ರಾಗಿದ್ದಾರೆ. ಕೂಡಲೇ ಅವರನ್ನು ನಿರ್ದೇಶಕ ಸ್ಥಾನದಿಂದ ತೆಗೆದು ಹಾಕಬೇಕು ಎಂದು ಒತ್ತಾಯಿಸಿದರು.

ಇನ್ನು ಸುದ್ದಿಗೋಷ್ಠಿಯಲ್ಲಿ ಸಂಘದ ತಿಪ್ಪೇಸ್ವಾಮಿ ಚೌಹಾಣ್, ಕೆ.ಎಸ್.ಕೊಟ್ರೇಶ್, ಶಶಿಕಲಾ, ಸಾವಿತ್ರಿ ರಿತ್ತಿ. ಮಹೇಶ್ ದೊಡ್ಡನಿ. ಜಿ.ನಾಗವೇಣಿ, ಹನುಮಂತರಾವ್ ಪವಾರ್, ಇತರರು ಇದ್ದರು.

ವರದಿ : C ಕೊಟ್ರೇಶ್ tv8kannada ದಾವಣಗೆರೆ

Related Articles

Leave a Reply

Your email address will not be published. Required fields are marked *

Back to top button