ಐಶ್ವರ್ಯಾ ರೈ ಮಗಳು, ಶಾರುಖ್ ಖಾನ್ ಮಗ ಓದುತ್ತಿರುವ ಧೀರುಭಾಯಿ ಅಂಬಾನಿ ಸ್ಕೂಲ್‌ನ ಶುಲ್ಕ ಕೇಳಿದ್ರೆ ಹುಬ್ಬೇರಿಸ್ತೀರಿ..!; ವಿಶ್ವದರ್ಜೆಯ ಶಿಕ್ಷಣ ಇಲ್ಲಿ ಎಷ್ಟು ದುಬಾರಿ ನೋಡಿ…

ಮುಂಬೈ : ನಲ್ಲಿರುವ ಧೀರುಭಾಯಿ ಅಂಬಾನಿ ಅಂತಾರಾಷ್ಟ್ರೀಯ ಸ್ಕೂಲ್ ವಾರ್ಷಿಕೋತ್ಸವ ಸಮಾರಂಭ ಇತ್ತೀಚೆಗೆ ಅದ್ಧೂರಿಯಾಗಿ ನಡೆಯಿತು. ನೀತಾ ಅಂಬಾನಿಯವರು ಸಂಸ್ಥಾಪಿಸಿರುವ ಈ ಸ್ಕೂಲ್ ವಾರ್ಷಿಕೋತ್ಸವ ಪ್ರತಿವರ್ಷ ಡಿಸೆಂಬರ್‌ನಲ್ಲಿ ನಡೆಯುತ್ತದೆ. ಪ್ರತಿವರ್ಷವೂ ವಾರ್ಷಿಕೋತ್ಸವದಲ್ಲಿ ನೀತಾ ಅಂಬಾನಿ ಪಾಲ್ಗೊಳ್ಳುತ್ತಾರೆ.
ಅಷ್ಟೇ ಅಲ್ಲ, ಬಾಲಿವುಡ್‌ನ ಐಶ್ವರ್ಯಾ ರೈ-ಅಭಿಷೇಕ್ ಬಚ್ಚನ್, ಶಾರುಖ್ ಖಾನ್, ಗೌರಿ ಖಾನ್ ಮತ್ತು ಇತರ ಹಲವು ಬಾಲಿವುಡ್, ಕ್ರಿಕೆಟ್ ಕ್ಷೇತ್ರದ ಸೆಲೆಬ್ರಿಟಿಗಳು ಕೂಡ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುತ್ತಾರೆ. ಕಾರಣ ಅವರ ಮಕ್ಕಳೂ ಕೂಡ ಇದೇ ಶಾಲೆಯಲ್ಲಿಯೇ ಓದುತ್ತಿದ್ದಾರೆ. ಸೆಲೆಬ್ರಿಟಿಗಳ, ಶ್ರೀಮಂತರ ಮಕ್ಕಳು ವಿದ್ಯಾಭ್ಯಾಸ ಮಾಡುವ ಧೀರುಭಾಯಿ ಅಂಬಾನಿ ಶಾಲೆಯ ಶುಲ್ಕ ಎಷ್ಟು ಗೊತ್ತಾ?-ಇಲ್ಲಿದೆ ನೋಡಿ ಮಾಹಿತಿ..
ಏನೆಲ್ಲ ಸೌಕರ್ಯಗಳನ್ನ ನೀಡುತ್ತೆ ಶಾಲೆ?
ಧೀರುಭಾಯಿ ಅಂಬಾನಿ ಅಂತಾರಾಷ್ಟ್ರೀಯ ಸ್ಕೂಲ್ (DAIS)ನ್ನ ರಿಲಯನ್ಸ್ ಗ್ರೂಫ್‌ನ ನೀತಾ ಮುಕೇಶ್ ಅಂಬಾನಿಯವರು 2013ರಲ್ಲಿ ಪ್ರಾರಂಭ ಮಾಡಿದರು. ಶಿಶುವಿಹಾರದಿಂದ 12ನೇ ತರಗತಿವರೆಗಿನ ಸ್ಕೂಲ್ ಇದು..ಇಲ್ಲಿ ವಿಶ್ವ ದರ್ಜೆಯ ಶೈಕ್ಷಣಿಕ ಅವಕಾಶಗಳು ಲಭ್ಯ ಇವೆ. ಮುಂಬೈನ ಬಾಲಿವುಡ್ ಗಣ್ಯರು, ಕ್ರಿಕೆಟರ್ಸ್, ಉದ್ಯಮಿಗಳ ಮಕ್ಕಳು ಬಹುತೇಕರು ಇದೇ ಶಾಲೆಯಲ್ಲಿಯೇ ಓದಿದ್ದಾರೆ, ಓದುತ್ತಿದ್ದಾರೆ.
ಧೀರುಭಾಯಿ ಅಂಬಾನಿ ಅಂತಾರಾಷ್ಟ್ರೀಯ ಶಾಲೆಯು CISCE (ಭಾರತೀಯ ಶಾಲೆ ಪ್ರಮಾಣಪತ್ರ ಪರೀಕ್ಷಾ ಮಂಡಳಿ) ಮತ್ತು CAIE (ಕೇಂಬ್ರಿಡ್ಜ್ ಅಸೆಸ್ಮೆಂಟ್ ಇಂಟರ್ನ್ಯಾಷನಲ್ ಎಜುಕೇಶನ್)ಗೆ ಸಂಯೋಜಿತವಾಗಿದೆ. ವಿದ್ಯಾರ್ಥಿಗಳನ್ನ ICSE (ಪ್ರೌಢ ಶಿಕ್ಷಣದ ಭಾರತೀಯ ಪ್ರಮಾಣಪತ್ರ) ಮತ್ತು IGCSE ( ಮಾಧ್ಯಮಿಕ ಶಿಕ್ಷಣದ ಅಂತರರಾಷ್ಟ್ರೀಯ ಸಾಮಾನ್ಯ ಪ್ರಮಾಣಪತ್ರ) 10ನೇ ತರಗತಿ ಪರೀಕ್ಷೆಗಳಿಗಾಗಿ ಸಿದ್ಧಪಡಿಸುತ್ತದೆ. ಅಂದರೆ ಈ ಪರೀಕ್ಷೆಗಳ ಸಂಬಂಧ ಇಲ್ಲಿ ಟ್ರೇನಿಂಗ್ ಸಿಗುತ್ತದೆ. 11 ಮತ್ತು 12ನೇ ತರಗತಿ ವಿದ್ಯಾರ್ಥಿಗಳಿಗಾಗಿ IB ಡಿಪ್ಲೊಮಾ ಅಂತಾರಾಷ್ಟ್ರೀಯ ಬ್ಯಾಕಲೌರಿಯೇಟ್ ಪದವಿ) ಪ್ರೋಗ್ರಾಮ್‌ಗಳನ್ನ ಆಯೋಜಿಸಲು ಅನುಮತಿಯನ್ನ ಪಡೆದಿದೆ..
ಬಡವರ-ಮಧ್ಯಮ ವರ್ಗದವರ ಕೈಗೆಟುಕದ ಶುಲ್ಕ..!
ವಿಶ್ವ ದರ್ಜೆ ಶೈಕ್ಷಣಿಕ ಅವಕಾಶಗಳನ್ನ ಒದಗಿಸುತ್ತಿರುವ ಧೀರುಭಾಯಿ ಅಂಬಾನಿ ಅಂತಾರಾಷ್ಟ್ರೀಯ ಸ್ಕೂಲ್‌ನ ಶುಲ್ಕ ಕೇಳಿದ್ರೆ ಹುಬ್ಬೇರಿಸುವಂತೆ ಆಗುತ್ತದೆ. ಇದು ಬಡವರು ಮತ್ತು ಮಧ್ಯಮವರ್ಗದವರ ಕೈಗೆಟುಕದ ಶಾಲೆ ಎಂಬುದು ಸ್ಪಷ್ಟವಾಗುತ್ತದೆ. ಟೈಮ್ಸ್ ಆಫ್ ಇಂಡಿಯಾ ವರದಿ ಪ್ರಕಾರ 2023-24ರಲ್ಲಿ ಶಾಲೆಯ ಶುಲ್ಕ ಶಿಶುವಿಹಾರಕ್ಕೆ ಸೇರುವವರಿಗೆ 14,00,000 ರೂಪಾಯಿ ಇತ್ತು ಮತ್ತು 12 ನೇ ತರಗತಿಯವರಿಗೆ 20,00,000 ರೂ. ಇತ್ತು. ಈ ಶಾಲೆಯು ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಸ್ಕಾಲರ್‌ಶಿಪ್ ಕೂಡ ನೀಡುತ್ತದೆ.
ಐಶ್ವರ್ಯಾ-ಅಭಿಷೇಕ್ ಪುತ್ರಿ ಆರಾಧ್ಯಾ, ಶಾರುಖ್ ಖಾನ್-ಗೌರಿ ಖಾನ್ ಪುತ್ರ ಅಬ್ರಾಹಂ, ಸೈಫ್ ಅಲಿ ಖಾನ್ ಮತ್ತು ಕರೀನಾ ಮಕ್ಕಳಾದ ತೈಮೂರ್ ಅಲಿ ಖಾನ್, ಜೇಹ್ ಅಲಿ ಖಾನ್ ಇದೇ ಧೀರುಭಾಯಿ ಅಂಬಾನಿ ಸ್ಕೂಲ್‌ನಲ್ಲಿ ಓದುತ್ತಿದ್ದಾರೆ. ಈ ಹಿಂದೆ ಜಾನ್ವಿ ಕಪೂರ್, ಸುಹಾನಾ ಖಾನ್, ಖುಷಿ ಕಪೂರ್, ಇಬ್ರಾಹಿಂ ಅಲಿ ಖಾನ್, ಆರ್ಯನ್ ಖಾನ್, ಸಾರಾ ತೆಂಡೂಲ್ಕರ್, ನೈಸಾ ದೇವಗನ್ ಮತ್ತು ಅನನ್ಯಾ ಪಾಂಡೆ ಕೂಡ ಇದೇ ಶಾಲೆಯಲ್ಲಿ ಓದಿದ್ದಾರೆ.