ದೇಶ

Third Wave ಫಿಕ್ಸ್ ಅಂದಿದ್ದಾರೆ ವಿಜ್ಞಾನಿಗಳು!

ಕೋವಿಡ್ ಮೊದಲನೇ ಮತ್ತು ಎರಡನೇ ಅಲೆಯ ವೇಳೆಯಲ್ಲಿ ಏನೆಲ್ಲಾ ಸಮಸ್ಯೆಗಳು ಉಂಟಾದವು ಎನ್ನುವುದನ್ನು ಇಡೀ ಜಗತ್ತೇ ನೋಡಿದೆ. ಅನೇಕ ಕುಟುಂಬಗಳೇ ಸರ್ವನಾಶವಾಗಿಬಿಟ್ಟವು. ಇದುವರಗೆ ಕೋವಿಡ್ ಲಕ್ಷಣಗಳು ಮತ್ತು ಅದರ ತೀವ್ರತೆಯನ್ನು ಗಮನಿಸಿದರೆ ವೈರಸ್ ತನ್ನ ಪ್ರಭಾವ ಬೀರಲು ಆರಂಭಿಸಿದ 735ನೇ ದಿನ ಅತ್ಯಂತ ಶಕ್ತಿಯುತವಾಗಿ ವಿಜೃಂಭಿಸುತ್ತದೆ. ಅಂದರೆ ಕೋವಿಡ್ 19 ಜನವರಿ 30, 2020 ರಂದು ಭಾರತದಲ್ಲಿ ಮೊದಲು ಕಂಡುಬಂದಿತ್ತು. ಡಿಸೆಂಬರ್ 15 2021ರ ವೇಳೆಗೆ ಓಮೈಕ್ರಾನ್ ಭಾರತದಲ್ಲಿ ಕಂಡುಬರಲು ಆರಂಭವಾಯ್ತು.

ಮುಹೂರ್ತ ಫೆಬ್ರವರಿಗೆ ಫಿಕ್ಸ್!

ಅಲ್ಲಿಗೆ ಫೆಬ್ರವರಿ 3, 2022 ಗುರುವಾರದಂದು ಮೂರನೇ ಅಲೆ ಅಪ್ಪಳಿಸಲಿದೆ ಎಂದು IIT ಕಾನ್​ಪುರದ ತಜ್ಞರ ತಂಡ ತಿಳಿಸಿದೆ. ಗಣಿತ ಶಾಸ್ತ್ರಜ್ಞರು ಮತ್ತಿತರ ತಜ್ಞರ ತಂಡ ಈ ಲೆಕ್ಕಾಚಾರ ಮಾಡಿದೆ. ವಿಶ್ವದಲ್ಲಿ ಅತೀ ಹೆಚ್ಚು ಕೋವಿಡ್ ಪ್ರಕರಣಗಳು ಕಂಡುಬಂದ 10 ದೇಶಗಳನ್ನು ಆಯ್ಕೆ ಮಾಡಿ ಆ ದೇಶಗಳಲ್ಲಿ ಪ್ರತಿದಿನ ಎಷ್ಟು ಪ್ರಕರಣಗಳು ವರದಿಯಾಗಿದ್ದವು. ಒಂದು ಮಿಲಿಯನ್​ನಲ್ಲಿ ಎಷ್ಟು ಪ್ರಕರಣ ಎನ್ನುವ ಅಂಕಿ ಅಂಶಗಳನ್ನೆಲ್ಲಾ ಗುಡ್ಡೆ ಹಾಕಿಕೊಂಡು ಈ ತಂಡ ಫೆಬ್ರವರಿ 3 ರ ದಿನಾಂಕವನ್ನು ನಿರ್ಧರಿಸಿದೆ.

ದ್ಯ ಕರ್ನಾಟಕವೂ ಸೇರಿದಂತೆ ನಾನಾ ರಾಜ್ಯಗಳಲ್ಲಿ ಓಮೈಕ್ರಾನ್ ಪ್ರಕರಣಗಳು ಪತ್ತೆಯಾಗುತ್ತಿವೆ. ಅದೃಷ್ಟವಶಾತ್ ಓಮೈಕ್ರಾನ್ ಸೋಂಕು ಡೆಲ್ಟಾದಷ್ಟು ಜೀವಹಾನಿ ಮಾಡುವ ರೂಪಾಂತರ ಅಲ್ಲ ಎನ್ನುವ ವಿಚಾರ ತಿಳಿದುಬಂದಿದೆ. ಇದು ಜೀವ ತೆಗೆಯುವಷ್ಟು ತೀವ್ರವಲ್ಲ ನಿಜ, ಆದರೆ ಖಂಡಿತವಾಗಿಯೂ ಈ ಹಿಂದಿನ ಎಲ್ಲಾ ರೂಪಾಂತರಿಗಳಿಗಿಂತ ಬಹಳ ವೇಗವಾಗಿ ಹರಡುತ್ತದೆ ಎನ್ನುವ ಎಚ್ಚರಿಕೆಯನ್ನು ಖುದ್ದು ವಿಶ್ವ ಆರೋಗ್ಯ ಸಂಸ್ಥೆ ನೀಡಿದೆ.

ಲಸಿಕೆಯ ವಿಚಾರ ಏನು ?

ಆದ್ದರಿಂದ ಇಲ್ಲಿ ಲಸಿಕೆ, ಅದರ ಶಕ್ತಿ ಮುಂತಾದ ವಿಚಾರಗಳ ಬಗ್ಗೆ ಆಲೋಚಿಸುವ ಬದಲು ಸೋಂಕು ಬೇಗ ಹರಡದಂತೆ ತಡೆಯಲು ಕೈಗೊಳ್ಳಬೇಕಾದ ಕ್ರಮವೇ ಮುಖ್ಯ. ಫೆಬ್ರವರಿಯಲ್ಲಿ ಬರುತ್ತದೆ ಎನ್ನಲಾದ ಮೂರನೇ ಅಲೆ ಅತೀ ಹೆಚ್ಚು ಜನರನ್ನು ಬಾಧಿಸುವ ಸಾಧ್ಯತೆ ಇದೆ. ಆದರೆ ಅದೃಷ್ಟವಶಾತ್ ಸಾವಿನ ಸಂಖ್ಯೆ ಜಾಸ್ತಿ ಇರುವುದಿಲ್ಲ ಎನ್ನುವುದೇ ಸಮಾಧಾನಕರ ಸಂಗತಿಯಾಗಿದೆ.

ಓಮೈಕ್ರಾನ್ ಕೂಡಾ ಬೇರೆ ಕೋವಿಡ್ ನಂತೆ ರೂಪಾಂತರಗೊಳ್ಳಲು ಸಾಧ್ಯವಿದೆ. ಹಾಗಾಗಿ ಒಂದು ವೇಳೆ ಎಲ್ಲಾ ಲೆಕ್ಕಾಚಾರ ತಲೆಕೆಳಗಾಗುವಂತೆ ಅದು ಕೂಡಾ ಬಗೆಬಗೆಯ ರೂಪ ತಾಳಿ ಮತ್ತಷ್ಟು ಹೊಸಾ ಸಮಸ್ಯೆಗಳನ್ನು ತಂದೊಡ್ಡುವ ಅಪಾಯವನ್ನು ಸಂಪೂರ್ಣವಾಗಿ ತಳ್ಳಿಹಾಕುವಂತಿಲ್ಲ. ಅಲ್ಲಿಗೆ ಈಗ ಸದ್ಯ ಚುರುಕುಗೊಂಡಿರುವ ಓಮೈಕ್ರಾನ್ ಮುಂದಿನ ದಿನಗಳಲ್ಲಿ ಮತ್ತಷ್ಟು ಹೆಚ್ಚುವುದು ಶತಸಿದ್ಧ ಎಂದು ಅಂದಾಜಿಸಲಾಗಿದೆ. ಆದ್ದರಿಂದಲೇ ಬೂಸ್ಟರ್ ಡೋಸ್ ಮತ್ತು ಮಕ್ಕಳಿಗೆ ಲಸಿಕೆ ನೀಡುವ ಕುರಿತಾಗಿಯೂ ಸರ್ಕಾರಗಳು ಬಹಳ ವೇಗವಾಗಿ ಕೆಲಸ ಆರಂಭಿಸಿವೆ.

Related Articles

Leave a Reply

Your email address will not be published. Required fields are marked *

Back to top button