ಆರೋಗ್ಯ

ಈ ತರಹ ಕನಸು ಬಿದ್ದರೆ ಅಪಾಯ ಕಾದಿದೆ ಎಂದರ್ಥ..! ಈ ರೀತಿ ನಿಮಗೂ ಆಗಿದ್ಯಾ?

ವ್ಯಕ್ತಿಯೊಬ್ಬರಿಗೆ ಕನಸುಗಳು ಬೀಳುವುದು ಆರೋಗ್ಯದ ದೃಷ್ಟಿಯಿಂದ ಬಹಳ ಒಳ್ಳೆಯದು, ಒಂದು ವೇಳೆ ನಿಮಗೆ ಕನಸುಗಳೇ ಬೀಳದಿದ್ದರೆ ನೀವು ಮಾನಸಿಕ ಸಮಸ್ಯೆಗೆ ತುತ್ತಾಗುತ್ತೀರಿ ಎಂದರ್ಥ. ಸುಪ್ತ ಚೇತನದ ಹಲವು ವಿಚಾರಗಳು ಕನಸುಗಳಾಗಿ ನಮ್ಮ ಮುಂದೆ ಬರುತ್ತವೆ. ಹೀಗಾಗಿ ನಮಗೆ ಬೀಳುವ ಒಂದೊಂದು ಕನಸುಗಳಿಗೂ ಒಂದೊಂದು ಅರ್ಥವಿದೆ.

ಕನಸುಗಳೆಂದರೆ ಬರಿ ಆ ದಿನಕ್ಕೆ ಬೀಳುವ ಅರ್ಥಹೀನ ಚಿತ್ರಗಳಲ್ಲ. ಒಂದೊಂದು ಕನಸುಗಳಿಗೂ ಒಂದೊಂದು ಅರ್ಥವಿರುತ್ತದೆ. ಆ ಒಳಾರ್ಥಗಳ ಅರಿತರೆ ನಮ್ಮ ದೈನಂದಿನ ಕೆಲಸ ಕಾರ್ಯಗಳು ಸುಲಭವಾಗುತ್ತದೆ. ಇನ್ನು ನಮಗೆ ಒಮ್ಮೊಮ್ಮೆ ಅರ್ಥವೇ ಆಗದಂತಹ ಕನಸುಗಳು ಬೀಳುತ್ತವೆ. ನೀವು ಅದೆಷ್ಟೇ ನೆನಪು ಮಾಡಿಕೊಂಡರೂ ಅದು ನೆನಪಾಗುವುದಿಲ್ಲ. ಹಾಗೆ ಅದಕ್ಕೊಂದು ಅರ್ಥವೂ ಇರುವುದಿಲ್ಲ.

ಆದ್ರೆ ಮತ್ತೆ ಕೆಲವು ಕನಸುಗಳು ನಿಮಗೆ ನೆನಪಲ್ಲಿ ಉಳಿಯುತ್ತವೆ, ಆದ್ರೆ ಅದರ ಭಯಾನಕತೆಯಿಂದ ನೀವು ನೆನಪು ಮಾಡಿಕೊಳ್ಳಲು ಇಷ್ಟಪಡುವುದಿಲ್ಲ. ಹಾಗಾದ್ರೆ ಯಾವೆಲ್ಲಾ ಕನಸುಗಳ ಹಿಂದೆ ಯಾವ ರೀತಿಯ ಅರ್ಥವಿದೆ.? ಕನಸಿನಲ್ಲಿ ಯಾವ ವಸ್ತುಗಳು ಕಂಡರೆ ಅದರ ಹಿಂದಿರುವ ಅರ್ಥವಾದರೂ ಏನು? ಇದಕ್ಕೆ ಕಾರಣವೇನು? ಮುಂದೆ ಏನು ಸಂಭವಿಸಲಿದೆ ಎಂಬುದನ್ನು ನಾವು ತಿಳಿದುಕೊಳ್ಳುವ ಪ್ರಯತ್ನ ಮಾಡೋಣ.

ಕನಸಿನಲ್ಲಿ ಹಲ್ಲು ಉದುರುವುದು

ನೀವು ಕೆಲವೊಮ್ಮೆ ನಿದ್ರೆಯಲ್ಲಿ ನಿಮ್ಮ ಹಲ್ಲುಗಳನ್ನು ಕಳೆದುಕೊಳ್ಳುವಂತಹ ಕನಸು ಕಂಡಿರಬಹುದು. ಆದ್ರೆ ಈ ರೀತಿಯ ಕನಸುಗಳು ಏಕೆ ಬೀಳುತ್ತಿದೆ ಎಂಬುದು ನಿಮಗೆ ಅರ್ಥವಾಗುವುದಿಲ್ಲ. ಇದರ ಹಿಂದೆ ಒಂದು ಕಾರಣವಿದೆ. ನಿಮಗೆ ಹಲ್ಲು ಮುರಿದು ಹೋಗುವ ಅಥವಾ ಬೀಳುವ ಕನಸು ಬಿದ್ದರೆ ನಂಬಿಕೆಗಳ ಪ್ರಕಾರ ಇದು ಮುಂದೆ ಸವಾಲಿನ ಪರಿಸ್ಥಿತಿ ಎದುರಾಗುವ ಸೂಚನೆ ಇರಬಹುದು ಎನ್ನಲಾಗುತ್ತದೆ. ಅಥವಾ ನಿಮ್ಮ ಪ್ರೀತಿ ಪಾತ್ರರಿಗೆ ಯಾವುದಾದರು ಸಮಸ್ಯೆ ಎದುರಾಗಬಹುದು ಎಂಬ ಸೂಚಕವಂತೆ, ಇಲ್ಲವೆ ನಿಮಗೆ ನೋವಿನ ದಿನಗಳು ಬರಬಹುದು ಎಂಬುದಾಗಿದೆ.

ಹಾವು ಅಥವಾ ವಿಷಕಾರಿ ಜಂತುಗಳು ಕನಸಿನಲ್ಲಿ ಬರುವುದು

ಸಾಮಾನ್ಯವಾಗಿ ಈ ರೀತಿಯ ಕನಸುಗಳು ಬೀಳುವುದನ್ನು ನಾವು ನೀವು ಕೇಳಿರಬಹುದು. ನಿಮಗೆ ಇಲ್ಲವೆ ಮನೆಯಲ್ಲಿ ಯಾರಿಗಾದರು ಈ ರೀತಿಯ ಕನಸುಗಳು ಬಿದ್ದಿರುವುದು ನಿಮ್ಮ ಅರಿವಿಗೂ ಬಂದಿರಬಹುದು. ಕನಸಿನಲ್ಲಿ ಹಾವು ಕಾಣಿಸಿಕೊಳ್ಳುವು ಕೆಟ್ಟ ಶಕುನ ಎನ್ನಲಾಗಿದೆ. ಹಾವು ಓಡಿಸಿಕೊಂಡು ಬರುವುದು, ಇಲ್ಲವೆ ನಿಮ್ಮ ಮೇಲೆ ಹತ್ತಿದಂತಾಗುವುದು ನಕಾರಾತ್ಮಕ ಶಕ್ತಿಗೆ ಕಾರಣವಾಗುತ್ತದೆ. ಇದು ಶತ್ರು ಕಾಟದ ಸೂಚಕವೂ ಆಗಿರಬಹುದು. ಹಾಗೆ ಯಾವುದಾದರು ವಿಷಕಾರಿ ಜಂತು ಅಥವಾ ಹುಳುಗಳು ಕಡಿಯುವ ಕನಸು ಬಿದ್ದರೆ ಆರೋಗ್ಯದಲ್ಲಿ ಏರುಪೇರು, ನೋವು, ಅನಿರೀಕ್ಷಿತ ನಷ್ಟ ಎಂಬ ಸೂಚನೆ ಇರಬಹುದು.

ನೀರಿನಲ್ಲಿ ಮುಳುಗುವುದು ಅಥವಾ ಬೆಟ್ಟದಿಂದ ಬೀಳುವುದು

ಸಾಮಾನ್ಯವಾಗಿ ನೀರಿನಲ್ಲಿ ನೀವು ಮುಳುಗಿದಂತೆ ಅಥವಾ ಎತ್ತರದ ಪ್ರದೇಶದಿಂದ ಬಿದ್ದಂತೆ ಕನಸು ಬಿದ್ದರೆ ಇದು ಅಪಶಕುನವಂತೆ. ಇದು ಕಠಿಣ ಪರಿಸ್ಥಿತಿಗಳಿಗೆ ನೀವು ಎದುರಾಗಲಿದ್ದೀರಿ ಎಂಬ ಸೂಚಕವಂತೆ. ಅದರಲ್ಲೂ ನಿಮ್ಮ ಆರ್ಥಿಕ ಪರಿಸ್ಥಿತಿಗಳು ನಿಮ್ಮನ್ನು ಕಟ್ಟಿಹಾಕಲಿವೆ ಎಂಬುದನ್ನು ಸೂಚಿಸಲಿದೆ.

ಗೂಳಿ ಅಥವಾ ಪ್ರಾಣಿ ಓಡಿಸಿಕೊಂಡು ಬರುವುದು

ನಿಮ್ಮ ಕನಸಿನಲ್ಲಿ ಗೂಳಿ ಅಥವಾ ನಾಯಿಯಾಗಲಿ ಇಂತಹ ಪ್ರಾಣಿಗಳು ನಿಮ್ಮನ್ನು ಓಡಿಸಿಕೊಂಡು ಬಂದಂತೆ ಕನಸು ಬಿದ್ದರೆ ನಿಮಗೆ ವಿಶ್ರಾಂತಿಯ ಅಗತ್ಯತೆ ಇದೆ ಎಂದರ್ಥ. ಹಾಗೆ ನೀವು ಬಹಳ ಕಾಲದಿಂದ ನೀವು ಅಂದುಕೊಂಡಿದ್ದ ಕೆಲಸವನ್ನ ಅರ್ಧದಲ್ಲಿಯೇ ಮರೆತ್ತಿದ್ದೀರಿ, ಹಾಗೆ ದೇವಾಲಯಗಳ ಭೇಟಿಯ ದಿನವನ್ನು ಮುಂದೂಡುತ್ತಿದ್ದೀರಿ ಎಂಬ ಸೂಚಕವಂತೆ.

(ಹಕ್ಕುತ್ಯಾಗ: ಮೇಲೆ ನೀಡಲಾದ ಮಾಹಿತಿಯು ಅಂತರ್ಜಾಲದಲ್ಲಿ ಲಭ್ಯವಿರುವ ಊಹೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ ಮತ್ತು ವಿಶ್ವಾಸಾರ್ಹತೆಯನ್ನು ಖಾತರಿಪಡಿಸಲಾಗಿಲ್ಲ. ಲೇಖನಕ್ಕೆ ಸಂಬಂಧಿಸಿದ ಮಾಹಿತಿಯನ್ನು ಖಚಿತಪಡಿಸುವುದಿಲ್ಲ. ಮತ್ತು ಮಾಹಿತಿಯನ್ನು ಒದಗಿಸುವುದು ನಮ್ಮ ಏಕೈಕ ಉದ್ದೇಶವಾಗಿದೆ)

Related Articles

Leave a Reply

Your email address will not be published. Required fields are marked *

Back to top button