ಕರ್ನಾಟಕದ ಸಿಂದಗಿ, ಹಾನಗಲ್ ವಿಧಾನಸಭಾ ಕ್ಷೇತ್ರಗಳಿಗೆ ಉಪ ಚುನಾವಣೆ ಘೋಷಣೆ : ಹೀಗಿದೆ ಪ್ರಮುಖ ದಿನಾಂಕಗಳು
ನವದೆಹಲಿ : ದೇಶದ ಮೂರು ಲೋಕಸಭೆಗಳಿಗೆ ಹಾಗೂ 30 ವಿಧಾನಸಭಾ ಕ್ಷೇತ್ರಗಳಿಗೆ ( Assembly Constituency ) ಭಾರತೀಯ ಚುನಾವಣಾ ಆಯೋಗವು ( Election Commission of India ) ಉಪ ಚುನಾವಣೆಯನ್ನು ( By Election ) ಘೋಷಣೆ ಮಾಡಿದೆ. ಕರ್ನಾಟಕದ ( Karnataka ) ಸಿಂದಗಿ ( Sindagi ) ಹಾಗೂ ಹಾನಗಲ್ ( Hanagal ) ಕ್ಷೇತ್ರಗಳಿಗೂ ಕೂಡ ಇದೇ ಸಂದರ್ಭದಲ್ಲಿ ಉಪ ಚುನಾವಣೆ ಘೋಷಣೆ ಮಾಡಲಾಗಿದೆ. ದಿನಾಂಕ 30-10-2021ರಂದು ಮತದಾನ ನಡೆದ್ರೇ.. ದಿನಾಂಕ 02-11-2021ರಂದು ಮತಏಣಿಕೆ ಕಾರ್ಯನಡೆದು, ಫಲಿತಾಂಶ ಘೋಷಣೆ ಮಾಡಲಾಗುತ್ತಿದೆ.
ಈ ಕುರಿತಂತೆ ಚುನಾವಣಾ ಆಯೋಗವು ಅಧಿಸೂಚನೆ ಹೊರಡಿಸಿದ್ದು, ಆಂಧ್ರ ಪ್ರದೇಶದ ಒಂದು ವಿಧಾನಸಭಾ ಕ್ಷೇತ್ರ, ಅಸ್ಸಾಂನ ಐದು, ಬಿಹಾರದ ಎರಡು ಕ್ಷೇತ್ರ, ಹರಿಯಾಣ ಒಂದು, ಹಿಮಾಚಲಪ್ರದೇಶದ ಮೂರು, ಕರ್ನಾಟಕದ ಸಿಂದಗಿ ಹಾಗೂ ಹಾನಗಲ್ ವಿಧಾನಸಭಾ ಕ್ಷೇತ್ರ, ಮಧ್ಯಪ್ರದೇಶದ ಮೂರು, ಮಹಾರಾಷ್ಟ್ರದ ಒಂದು ಮೇಘಾಲಯದ ಮೂರು, ಮಿಜೋರಾಂ ಒಂದು, ನಾಗಲ್ಯಾಂಡ್ ನ ಒಂದು, ರಾಜಸ್ಥಾನದ ಎರದು, ತೆಲಂಗಾಣ ಒಂದು, ಪಶ್ಚಿಮ ಬಂಗಾಳದ ನಾಲ್ಕು ವಿಧಾನಸಭಾ ಕ್ಷೇತ್ರಗಳಿಗೆ ಉಪ ಚುನಾವಣೆಯನ್ನು ಘೋಷಣೆ ಮಾಡಲಾಗಿದೆ.
ಇಂತಹ ವಿಧಾನಸಭಾ ಕ್ಷೇತ್ರಗಳ ಉಪ ಚುನಾವಣೆಗೆ ದಿನಾಂಕ 01-10-2021ರಂದು ಗೆಜೆಟ್ ಅಧಿಸೂಚನೆ ಹೊರಡಿಸಲಾಗುತ್ತದೆ. ದಿನಾಂಕ 08-10-2021 ನಾಮಪತ್ರ ಸಲ್ಲಿಸಲು ಕೊನೆಯ ದಿನಾಂಕವಾಗಿದೆ. ದಿನಾಂಕ 11-10-2021ರಂದು ನಾಮಪತ್ರಗಳ ಪರಿಶೀಲನೆ ನಡೆಯಲಿದೆ. ದಿನಾಂಕ 13-10-2021 ನಾಮಪತ್ರಗಳನ್ನು ವಾಪಾಸ್ ಪಡೆಯಲು ಕೊನೆಯ ದಿನಾಂಕವಾಗಿದೆ. ದಿನಾಂಕ 30-10-2021ರಂದು ಮತದಾನ ನಡೆಯಲಿದೆ. ದಿನಾಂಕ 02-11-2021ರಂದು ಮತಏಣಿಕೆ ಕಾರ್ಯ ನಡೆಯಲಿದ್ದು, ಫಲಿತಾಂಶ ಘೋಷಣೆಯಾಗಲಿದೆ. ದಿನಾಂಕ 05-11-2021ರಂದು ಚುನಾವಣಾ ಪ್ರಕ್ರಿಯೆ ಮುಕ್ತಾಯಗೊಳ್ಳಲಿದೆ.